ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯದಲ್ಲಿ ಸೋಲನ್ನು ಯಾರು ಸಹಿಸಲ್ಲ. ಈ ವಿಶ್ವಕಪ್ ಟೂರ್ನಿಯಲ್ಲಿ ಭಾರತ ವಿರುದ್ಧ ಸೋತ ಪಾಕಿಸ್ತಾನ ಸ್ಥಿತಿ ಶೋಚನೀಯವಾಗಿದೆ. ಇದೀಗ ಸೋಲಿನ ಬೆನ್ನಲ್ಲೇ ಪಾಕಿಸ್ತಾನ ಕೋಚ್ ಆತ್ಮಹತ್ಯೆಗೆ ಯೋಚಿಸಿದ್ದರು ಅನ್ನೋ ಸ್ಫೋಟಕ ಮಾಹಿತಿ ಬಹಿರಂಗವಾಗಿದೆ.
ಲಂಡನ್(ಜೂ.24): ವಿಶ್ವಕಪ್ ಟೂರ್ನಿಯಲ್ಲಿ ಭಾರತ ವಿರುದ್ಧದ ಸೋಲಿನ ಬಳಿಕ ಪಾಕಿಸ್ತಾನ ಚೇತರಿಸಿಕೊಂಡಿದೆ. ಸೌತ್ ಆಫ್ರಿಕಾ ತಂಡವನ್ನು ಮಣಿಸಿ ಮತ್ತೆ ಗೆಲುವಿನ ಹಳಿಗೆ ಮರಳಿದೆ. ಆದರೆ ಟೀಂ ಇಂಡಿಯಾ ವಿರುದ್ಧದ ಸೋಲಿನಿಂದ ಪಾಕಿಸ್ತಾನ ಕ್ರಿಕೆಟಿಗರು, ಅಭಿಮಾನಿಗಳಿಗೆ ಮಾತ್ರವಲ್ಲ ತಂಡದ ಕೋಚ್‌ಗೂ ತೀವ್ರ ಮುಖಭಂಗವಾಗಿದೆ. ಈ ಸೋಲನ್ನು ಅರಗಿಸಿಕೊಳ್ಳಲು ಕೂಡ ಸಾಧ್ಯವಾಗುತ್ತಿಲ್ಲ.
ಇದನ್ನೂ ಓದಿ: ಆಫ್ಘನ್,ಆಫ್ರಿಕಾ ಬಿಟ್ಟು ಉಳಿದ 8 ತಂಡಗಳಿಗೂ ಇದೆ ಸೆಮೀಸ್ ಚಾನ್ಸ್!
ಭಾರತ ವಿರುದ್ಧದ ಹೀನಾಯ ಸೋಲಿನ ಬಳಿಕ ಪಾಕಿಸ್ತಾನ ಕೋಚ್ ಮಿಕಿ ಆರ್ಥರ್ ಆತ್ಮಹತ್ಯೆಗೆ ಯೋಚಿಸಿದ್ದರು ಅನ್ನೋ ಸ್ಫೋಟಕ ಮಾಹಿತಿ ಬಹಿರಂಗವಾಗಿದೆ. ಭಾರತ ವಿರುದ್ಧದ ಸೋಲಿನ ನೋವಿನಿಂದ ಆತ್ಮಹತ್ಯೆಗೆ ಯೋಚಿಸಿದ್ದೆ ಎಂದು ಪಾಕ್ ಕೋಚ್ ಮಿಕಿ ಆರ್ಥರ್ ಹೇಳಿದ್ದಾರೆ. ಸೌತ್ ಆಫ್ರಿಕಾ ವಿರುದ್ಧದ ಗೆಲುವಿನ ಬಳಿಕ ನಡೆಸಿದ ಸುದ್ದಿಗೋಷ್ಠಿಯಲ್ಲಿ ಈ ಮಾಹಿತಿ ಬಹಿರಂಗ ಪಡಿಸಿದ್ದಾರೆ.
ಇದನ್ನೂ ಓದಿ: ಆಫ್ಘನ್ ವಿರುದ್ಧ ಪರದಾಡಿ ಗೆದ್ದ ಬೆನ್ನಲ್ಲೇ ನಾಯಕ ಕೊಹ್ಲಿಗೆ ಬಿತ್ತು ಬರೆ!
ಭಾರತ ವಿರುದ್ಧದ ವಿಶ್ವಕಪ್ ಲೀಗ್ ಪಂದ್ಯದಲ್ಲಿ ಪಾಕಿಸ್ತಾನ 89 ರನ್ ಸೋಲು ಅನುಭವಿಸಿತ್ತು. ಟೀಂ ಇಂಡಿಯಾ ಸ್ಫೋಟಕ ಬ್ಯಾಟಿಂಗ್ ಹಾಗೂ ಮಾರಕ ಬೌಲಿಂಗ್ ದಾಳಿಗೆ ತತ್ತರಿಸಿದ ಪಾಕಿಸ್ತಾನ ಸೋಲಿಗೆ ಶರಣಾಗಿತ್ತು. ಈ ಮೂಲಕ ವಿಶ್ವಕಪ್ ಹೋರಾಟದಲ್ಲಿ ಭಾರತದ ವಿರುದ್ಧ ಸತತ 7ನೇ ಬಾರಿಗೆ ಪಾಕಿಸ್ತಾನ ಸೋಲು ಕಂಡಿತ್ತು.
