ವಿಶ್ವಕಪ್ ಟೂರ್ನಿಯ 18ನೇ ಲೀಗ್ ಪಂದ್ಯದಲ್ಲಿ ವರುಣನ ಆರ್ಭಟವೇ ಹೆಚ್ಚಾಗಿದೆ. ಮಳೆ ನಿಂತು ಪಂದ್ಯ ಪುನರ್ ಆರಂಭವಾಗೋ ನಿರೀಕ್ಷೆಯಲ್ಲಿದ್ದ ಅಭಿಮಾನಿಗಳಿಗೆ ನಿರಾಸೆ ಕಾದಿದೆ.
ನಾಟಿಂಗ್‌ಹ್ಯಾಮ್(ಜೂ.13): ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ ಲೀಗ್ ಪಂದ್ಯ ನಡೆಯೋದೇ ಅನುಮಾನವಾಗಿದೆ. ನಿರಂತರವಾಗಿ ಸುರಿಯುತ್ತಿರುವ ಮಳೆ ಪಂದ್ಯ ನಡೆಸಲು ಅನುವು ಮಾಡಿಕೊಡುತ್ತಿಲ್ಲ. ಸದ್ಯ ಮಳೆ ಸುರಿಯುತ್ತಿದ್ದು, ಪಿಚ್ ಒದ್ದೆಯಾಗದಂತೆ ಕವರ್ ಮಾಡಲಾಗಿದೆ. ಆದರೆ ಮೈದಾನ ಸಂಪೂರ್ಣ ಒದ್ದೆಯಾಗಿದೆ. ಹೀಗಾಗಿ ಮಳೆ ನಿಂತರೂ ಪಂದ್ಯ ಆಯೋಜಿಸುವುದು ಕಷ್ಟವಾಗಲಿದೆ.
ಇದನ್ನೂ ಓದಿ: ಗೆಲುವಿನ ಬಳಿಕ ಆಸೀಸ್ ಅಭಿಮಾನಿಗೆ ಸರ್ಪ್ರೈಸ್ ಗಿಫ್ಟ್ ನೀಡಿದ ವಾರ್ನರ್!
Scroll to load tweet…
ಈಗಾಗಲೇ ಮಳೆಗೆ 3 ಪಂದ್ಯ ಫಲಿತಾಂಶ ಕಾಣದೆ ರದ್ದಾಗಿದೆ. ಆಫ್ಘಾನಿಸ್ತಾನ ಹಾಗೂ ಶ್ರೀಲಂಕಾ ನಡುವಿನ ಪಂದ್ಯಕ್ಕೂ ಮಳೆ ಅಡ್ಡಿಯಾಗಿತ್ತು. ಹೀಗಾಗಿ ಓವರ್ ಕಡಿತಗೊಳಿಸಿ ಪಂದ್ಯ ಆಡಸಾಗಿತ್ತು. ಈ ಪಂದ್ಯದಲ್ಲಿ ಶ್ರೀಲಂಕಾ ಗೆಲುವು ಸಾಧಿಸಿತ್ತು. ಇದೀಗ ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ ಪಂದ್ಯ ಕೂಡ ಫಲಿತಾಂಶ ಹೊರಬೀಳುವ ಸಾಧ್ಯತೆಗಳು ಕಡಿಮೆ.
Scroll to load tweet…
