ಪಾಕಿಸ್ತಾನ ವಿರುದ್ದ ಲೀಗ್ ಪಂದ್ಯದಲ್ಲಿ ರೋಚಕ ಗೆಲುವು ದಾಖಲಿಸಿರುವ  ಆಸ್ಟ್ರೇಲಿಯಾ ಮೈದಾನದಲ್ಲಿ ಸಂಭ್ರಮಾಚರಣೆ ನಡೆಸಿತು. ಆದರೆ ಗೆಲುವಿನ ರೂವಾರಿ ಡೇವಿಡ್ ವಾರ್ನರ್ ಅಭಿಮಾನಿಗೆ ಗಿಫ್ಟ್ ನೀಡೋ ಮೂಲಕ ಆಚರಿಸಿದರು. 

ಟೌಂಟನ್(ಜೂ.13): ಪಾಕಿಸ್ತಾನ ವಿರುದ್ಧದ ಲೀಗ್ ಪಂದ್ಯದಲ್ಲಿ ಆಸ್ಟ್ರೇಲಿಯಾ ರೋಚಕ ಗೆಲುವು ಸಾಧಿಸಿದೆ. ಮಹತ್ವದ ಪಂದ್ಯದಲ್ಲಿ ಡೇವಿಡ್ ವಾರ್ನರ್ ಭರ್ಜರಿ ಶತಕ ಸಿಡಿಸಿ ಗೆಲುವಿನ ರೂವಾರಿಯಾಗಿದ್ದರು. ಈ ಪಂದ್ಯದ ಬಳಿಕ ವಾರ್ನರ್, ಆಸಿಸ್ ಪುಟಾಣಿ ಅಭಿಮಾನಿಗೆ ಸರ್ಪ್ರೈಸ್ ಗಿಫ್ಟ್ ನೀಡಿದ್ದಾರೆ.

ಡೇವಿಡ್ ವಾರ್ನರ್ ಶತಕ ಸಿಡಿಸಿ ಆಸ್ಟ್ರೇಲಿಯಾ ಗೆಲುವಿಗೆ ನೆರವಾಗಿದ್ದರು. ಪಂದ್ಯ ಶ್ರೇಷ್ಠ ಪ್ರಶಸ್ತಿ ಸ್ವೀಕರಿಸಿದ ವಾರ್ನರ್ ಬಳಿಕ ಕ್ರೀಡಾಂಗಣದಲ್ಲಿ ಕುಳಿತಿದ್ದ ಪುಟ್ಟ ಬಾಲಕನಿಗೆ ತಮ್ಮ ಪ್ರಶಸ್ತಿ ನೀಡಿದರು. ಸಹಿ ಹಾಕಿ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ಉಡುಗೊರೆಯಾಗಿ ನೀಡಿದರು. ವಾರ್ನರ್ ಕೈಯಿಂದ ಪ್ರಶಸ್ತಿ ಪಡೆದ ಬಾಲಕ ಸಂತಸದಲ್ಲಿ ತೇಲಾಡಿದ.

Scroll to load tweet…

ಟೀಂ ಇಂಡಿಯಾ ವಿರುದ್ಧ ಮುಗ್ಗರಿಸಿದ್ದ ಆಸ್ಟ್ರೇಲಿಯಾ ತಂಡ ಪಾಕಿಸ್ತಾನ ವಿರುದ್ಧ ಕಮ್‌ಬ್ಯಾಕ್ ಮಾಡಿತ್ತು. ಪಾಕ್ ವಿರುದ್ದ 41 ರನ್ ಗೆಲುವು ದಾಖಲಿಸೋ ಮೂಲಕ ಎದುರಾಳಿಗಳಿಗೆ ನಡುಕು ಹುಟ್ಟಿಸಿದೆ.