ಲಂಡನ್[ಜು.14]: ಕಳೆದ ವಿಶ್ವಕಪ್ ಟೂರ್ನಿಯಲ್ಲಿ ಕೂದಲೆಳೆ ಅಂತರದಲ್ಲಿ ವಿಶ್ವಕಪ್ ಕೈಚೆಲ್ಲಿದ್ದ ನ್ಯೂಜಿಲೆಂಡ್ ಇದೀಗ ಮತ್ತೊಮ್ಮೆ ವಿಶ್ವಕಪ್ ಫೈನಲ್ ಪ್ರವೇಶಿಸಿದ್ದು, ಲಾರ್ಡ್ಸ್ ಮೈದಾನದಲ್ಲಿ ನಡೆಯಲಿರುವ ಐತಿಹಾಸಿಕ ಪಂದ್ಯದಲ್ಲಿ ಆತಿಥೇಯ ಇಂಗ್ಲೆಂಡ್ ತಂಡವನ್ನು ಎದುರಿಸಲು ಸಜ್ಜಾಗಿದೆ.

ವಿಶ್ವಕಪ್ ಫೈನಲ್: ಇಂಗ್ಲೆಂಡ್ ತಂಡದಲ್ಲಿ ಒಂದು ಬದಲಾವಣೆ..?

ವಿಶ್ವಕಪ್ ಮೊದಲ ಸೆಮಿಫೈನಲ್’ನಲ್ಲಿ ಬಲಿಷ್ಠ ಭಾರತಕ್ಕೆ ಸೋಲುಣಿಸಿ ಪ್ರಶಸ್ತಿ ಸುತ್ತಿಗೆ ಲಗ್ಗೆಯಿಟ್ಟಿರುವ ಕೇನ್ ವಿಲಿಯಮ್ಸನ್ ನೇತತ್ವದ ಕಿವೀಸ್ ಪಡೆ, ಇದೀಗ ಆತಿಥೇಯರಿಗೆ ಆಘಾತ ನೀಡಿ ಚೊಚ್ಚಲ ವಿಶ್ವಕಪ್ ಎತ್ತಿ ಹಿಡಿಯುವ ಕನವರಿಕೆಯಲ್ಲಿದೆ. ಮೇಲ್ನೋಟಕ್ಕೆ ಕಿವೀಸ್ ತಂಡದಲ್ಲಿ ಯಾವುದೇ ಬದಲಾವಣೆ ಮಾಡುವ ಸಾಧ್ಯತೆ ಕಡಿಮೆ ಎಂದು ಅನಿಸುತ್ತಿದ್ದರೂ, ಬಲಿಷ್ಠ ಬ್ಯಾಟಿಂಗ್ ಲೈನ್ ಅಪ್ ಹೊಂದಿರುವ ಇಂಗ್ಲೆಂಡ್ ತಂಡವನ್ನು ಕಟ್ಟಿಹಾಕಲು ಮತ್ತೋರ್ವ ಹೆಚ್ಚುವರಿ ಬೌಲರ್’ನೊಂದಿಗೆ ಕಣಕ್ಕಿಳಿಯುವ ಸಾಧ್ಯತೆಯಿದೆ. ಕಳೆದ ಪಂದ್ಯದಲ್ಲಿ ಸ್ಪಿನ್ನರ್ ಮಿಚೆಲ್ ಸ್ಯಾಂಟ್ನರ್ ಉತ್ತಮವಾಗಿ ದಾಳಿ ಸಂಘಟಿಸುವ ಮೂಲಕ ಭಾರತಕ್ಕೆ ರನ್ ಗಳಿಸಲು ಪರದಾಡುವಂತೆ ಮಾಡಿದ್ದರು. ಹೀಗಾಗಿ ಇಂದಿನ ಪಂದ್ಯದಲ್ಲಿ ಸ್ಯಾಂಟ್ನರ್ ಜತೆಗೆ ಮತ್ತೋರ್ವ ಸ್ಪಿನ್ನರ್ ಇಶ್ ಸೋಧಿ ತಂಡದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆಯಿದೆ.

ಏಕದಿನ ಕ್ರಿಕೆಟ್ ವಿಶ್ವಕಪ್: ಲಾರ್ಡ್ಸ್‌ನಲ್ಲಿಂದು ಹೊಸ ಚಾಂಪಿಯನ್ ಉಗಮಕ್ಕೆ ಕ್ಷಣಗಣನೆ ಆರಂಭ

ಈ ಸಂದರ್ಭದಲ್ಲಿ ಸುವರ್ಣನ್ಯೂಸ್.ಕಾಂ ಆಯ್ಕೆ ಮಾಡಿದ ನ್ಯೂಜಿಲೆಂಡ್ ಸಂಭಾವ್ಯ ಹೀಗಿದೆ ನೋಡಿ...

ಆರಂಭಿಕರಾಗಿ: ಮಾರ್ಟಿನ್ ಗಪ್ಟಿಲ್, ಹೆನ್ರಿ ನಿಕೋಲಸ್

ಮಧ್ಯಮ ಕ್ರಮಾಂಕ: ಕೇನ್ ವಿಲಿಯಮ್ಸನ್, ರಾಸ್ ಟೇಲರ್, ಟಾಮ್ ಲಾಥಮ್

ಆಲ್ರೌಂಡರ್: ಜೇಮ್ಸ್ ನೀಶಮ್

ಬೌಲರ್: ಟ್ರೆಂಟ್ ಬೌಲ್ಟ್, ಮ್ಯಾಟ್ ಹೆನ್ರಿ, ಮಿಚೆಲ್ ಸ್ಯಾಂಟ್ನರ್, ಇಶ್ ಸೋಧಿ, ಲೂಕಿ ಫರ್ಗ್ಯೂಸನ್.