ಸೌತ್ ಆಫ್ರಿಕಾ ಹಾಗೂ ಶ್ರೀಲಂಕಾ ತಂಡಗಳು ಮುಖಾಮುಖಿಯಾದಾಗ ಜೇನು ನೊಣ ದಾಳಿ ಮಾಡುವುದು ಹೆಚ್ಚಾಗುತ್ತಿದೆ. 2017ರ ಬಳಿಕ ಇದೀಗ ವಿಶ್ವಕಪ್ ಟೂರ್ನಿಯಲ್ಲೂ ಜೇನು ನೊಣ ಸೌತ್ ಆಫ್ರಿಕಾ ಹಾಗೂ ಶ್ರೀಲಂಕಾ ನಡುವಿನ ಪಂದ್ಯಕ್ಕೆ ಅಡ್ಡಿಪಡಿಸಿದೆ.

ವಿಶ್ವಕಪ್ ಪಂದ್ಯದ ಸ್ಕೋರ್‌ಗಾಗಿ ಇಲ್ಲಿ ಕ್ಲಿಕ್ ಮಾಡಿ

ಚೆಸ್ಟರ್ ಲೆ ಸ್ಟ್ರೀಟ್(ಜೂ.29): ವಿಶ್ವಕಪ್ ಟೂರ್ನಿಯ ಲೀಗ್ ಪಂದ್ಯಗಳಿಗೆ ಮಳೆಯಿಂದ ಅಡ್ಡಿಪಡಿಸಿರುವುದು ನೋಡಿದ್ದೇವೆ. ಆದರೆ ಸೌತ್ ಆಫ್ರಿಕಾ ಹಾಗೂ ಶ್ರೀಲಂಕಾ ನಡುವಿನ ಪಂದ್ಯಕ್ಕೆ ಜೇನು ನೊಣಗಳು ಅಡ್ಡಿಪಡಿಸಿದ ಘಟನೆ ನಡೆದಿದೆ. ಶ್ರೀಲಂಕಾ ಬ್ಯಾಟಿಂಗ್ ಮಾಡುತ್ತಿದ್ದ ವೇಳೆ ಇದಕ್ಕಿದ್ದಂತೆ ಜೇನು ನೊಣಗಳು ಮೈದಾನದತ್ತ ಆಗಮಿಸಿದೆ. ತಕ್ಷಣವೇ ಆಟಗಾರರು ಹಾಗೂ ಅಂಪೈರ್ ಮೈದಾನದಲ್ಲಿ ಮಲಗೋ ಮೂಲಕ ಜೇನು ನೊಣಗಳಿಂದ ರಕ್ಷಣೆ ಪಡೆದರು.

Scroll to load tweet…

ಇದನ್ನೂ ಓದಿ: ಗೆಲುವಿನ ಸಿಹಿ ಕಂಡ ಸೌತ್ ಆಫ್ರಿಕಾ-ಲಂಕಾ ಸಮೀಸ್ ಹಾದಿ ಕಠಿಣ

48ನೇ ಓವರ್‌ ವೇಳೆಗೆ ಜೇನು ನೊಣ ಮೈದಾನಕ್ಕೆ ಧಾವಿಸಿತು. ತಕ್ಷಣವೇ ಕ್ರಿಕೆಟಿಗರು ಹಾಗೂ ಅಂಪೈರ್ ನೊಣಗಳು ಮೈದಾನದಿಂದ ತೆರಳುವವರೆಗೂ ಮಲಗಿ ರಕ್ಷಣೆ ಪಡೆದರು. ಕ್ರಿಕೆಟಿಗರು ಹಾಗೂ ಅಂಪೈರ್ ಇದ್ದಕ್ಕಿದ್ದಂತೆ ಮಲಗಿದಾಗ ಜೇನು ನೊಣಗಳನ್ನು ಗಮನಿಸಿದ ಪ್ರೇಕ್ಷಕರು ಕೊಂಚ ಗಲಿಬಿಲಿಯಾದರು. 

ಇದನ್ನೂ ಓದಿ: ಟೀಂ ಇಂಡಿಯಾ ಆರೇಂಜ್ ಜರ್ಸಿ-ಟ್ವಿಟರ್‌ನಲ್ಲಿ ಭರ್ಜರಿ ಪ್ರತಿಕ್ರಿ

ಸೌತ್ ಆಫ್ರಿಕಾ ಹಾಗೂ ಶ್ರೀಲಂಕಾ ನಡುವಿನ ಪಂದ್ಯಕ್ಕೆ ಜೇನು ನೊಣ ಅಡ್ಡಿಪಡಿಸುತ್ತಿರುವುದು ಇದೇ ಮೊದಲಲ್ಲ. 2017ರಲ್ಲಿ ಸೌತ್ ಆಫ್ರಿಕಾದಲ್ಲಿ ನಡೆದ ಏಕದಿನ ಪಂದ್ಯದ ವೇಳೆಯೂ ಜೇನು ನೊಣ ಪಂದ್ಯಕ್ಕ ಅಡ್ಡಿಯಾಗಿತ್ತು. ಕೆಲ ಹೊತ್ತು ಮೈದಾನದಲ್ಲಿ ಮಲಗಿದ್ದ ಆಟಗಾರರನ್ನು ಸುರಕ್ಷಿತವಾಗಿ ಪೆವಿಲಿಯನ್ ಕರೆದೊಯ್ಯಲಾಗಿತ್ತು. ಈ ಪಂದ್ಯ ಕೆಲ ಕಾಲ ಪಂದ್ಯ ಸ್ಥಗಿತಗೊಂಡಿತ್ತು. 


Scroll to load tweet…
Scroll to load tweet…