ವಿಶ್ವಕಪ್ 2019: ಸುನಿಲ್‌ ಜೋಶಿ ಗುತ್ತಿಗೆ ವಿಸ್ತರಿಸದ ಬಾಂಗ್ಲಾದೇಶ

ವಿಶ್ವಕಪ್ ಟೂರ್ನಿಯಲ್ಲಿ ಸೆಮಿಫೈನಲ್ ಪ್ರವೇಶಿಸಲು ವಿಫಲವಾದ ಬಾಂಗ್ಲಾದೇಶ ತಂಡಕ್ಕೆ ಮೇಜರ್ ಸರ್ಜರಿ ಮಾಡಲು ಬಾಂಗ್ಲಾ ಕ್ರಿಕೆಟ್ ಮಂಡಳಿ ಮುಂದಾಗಿದ್ದು, ಕೋಚ್ ಅವಧಿ ವಿಸ್ತರಿಸದಿರಲು ನಿರ್ಧರಿಸಿದೆ. ಹೀಗಾಗಿ ಕನ್ನಡಿಗ ಕೋಚ್ ಸುನಿಲ್ ಜೋಶಿ ಸೇರಿದಂತೆ ಕೋಚ್‌ಗಳ ತಲೆದಂಡವಾಗಿದೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...

World Cup 2019 Bangladesh Cricket Board calls premature end to Spin Bowling coach Sunil Joshi tenure

ವಿಶ್ವಕಪ್ ಟೂರ್ನಿಯ ಕ್ಷಣಕ್ಷಣದ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ...

ಲಂಡನ್‌[ಜು.10]: ಐಸಿಸಿ ಏಕದಿನ ವಿಶ್ವಕಪ್‌ನಲ್ಲಿ 8ನೇ ಸ್ಥಾನ ಪಡೆದ ಕಾರಣ ಬಾಂಗ್ಲಾದೇಶ ಕ್ರಿಕೆಟ್‌ ಮಂಡಳಿ (ಬಿಸಿಬಿ) ತನ್ನ ಕೋಚಿಂಗ್‌ ಸಿಬ್ಬಂದಿಯ ಗುತ್ತಿಗೆಯನ್ನು ವಿಸ್ತರಿಸದೆ ಇರಲು ನಿರ್ಧರಿಸಿದೆ. 

ಭಾರತಕ್ಕೆ ಹೇಗೆ ಬೌಲಿಂಗ್ ಮಾಡಬೇಕೆಂದು ಗೊತ್ತು-ಬಾಂಗ್ಲಾ ಕೋಚ್ ಜೋಶಿ!

ತಂಡದ ಸ್ಪಿನ್‌ ಬೌಲಿಂಗ್‌ ಕೋಚ್‌ ಆಗಿದ್ದ ಕನ್ನಡಿಗ ಸುನಿಲ್‌ ಜೋಶಿ, ಪ್ರಧಾನ ಕೋಚ್‌ ಸ್ಟೀವ್‌ ರೋಡ್ಸ್‌, ಬೌಲಿಂಗ್‌ ಕೋಚ್‌ ಕಟ್ರ್ನಿ ವಾಲ್ಶ್ ಸೇವೆಯನ್ನು ಬಿಸಿಬಿ ಮುಂದುವರಿಸದಿರಲು ತೀರ್ಮಾನಿಸಿದೆ. ಜೋಶಿ 2017ರ ಆಗಸ್ಟ್‌ನಲ್ಲಿ ಸ್ಪಿನ್‌ ಕೋಚ್‌ ಆಗಿ ನೇಮಕಗೊಂಡಿದ್ದರು. ವಿಶ್ವಕಪ್‌ ಮುಗಿದ ನಂತರ ಬಾಂಗ್ಲಾದೇಶ, ಶ್ರೀಲಂಕಾ ಪ್ರವಾಸ ಕೈಗೊಳ್ಳಲಿದ್ದು, ಕೋಚ್‌ಗಳ ಅನುಪಸ್ಥಿತಿ ತಂಡಕ್ಕೆ ಎದುರಾಗಲಿದೆ.

’ಭಾರತ ಈಗಾಗಲೇ ವಿಶ್ವಕಪ್ ಫೈನಲ್ ಗೆ ಒಂದು ಹೆಜ್ಜೆ ಇಟ್ಟಾಗಿದೆ‘

ವಿಶ್ವಕಪ್ ಟೂರ್ನಿಯಲ್ಲಿ ಬಾಂಗ್ಲಾದೇಶ ಸೆಮೀಸ್’ಗೆ ಅರ್ಹತೆಗಿಟ್ಟಿಸಿಕೊಳ್ಳದಿದ್ದರೂ ಕೆಚ್ಚದೆಯ ಹೋರಾಟ ನೀಡುವಲ್ಲಿ ಯಶಸ್ವಿಯಾಗಿತ್ತು. ಬಲಿಷ್ಠ ತಂಡಗಳಾದ ವೆಸ್ಟ್ ಇಂಡೀಸ್ ಹಾಗೂ ದಕ್ಷಿಣ ಆಫ್ರಿಕಾ ವಿರುದ್ಧ ಗೆಲುವಿನ ಕೇಕೆ ಹಾಕಿತ್ತು. ಅದರಲ್ಲೂ ತಂಡದ ಅನುಭವಿ ಆಲ್ರೌಂಡರ್ ಶಕೀಬ್ ಅಲ್ ಹಸನ್ ಬ್ಯಾಟಿಂಗ್ ಹಾಗೂ ಬೌಲಿಂಗ್’ನಲ್ಲಿ ಗಮನಾರ್ಹ ಪ್ರದರ್ಶನ ತೋರುವಲ್ಲಿ ಯಶಸ್ವಿಯಾಗಿದ್ದರು. ಬ್ಯಾಟಿಂಗ್’ನಲ್ಲಿ 606 ರನ್ ಬಾರಿಸಿದ್ದ ಶಕೀಬ್, ಬೌಲಿಂಗ್’ನಲ್ಲಿ 11 ವಿಕೆಟ್ ಕಬಳಿಸುವ ಮೂಲಕ ವಿಶ್ವದಾಖಲೆ ಬರೆದಿದ್ದರು. 
 

Latest Videos
Follow Us:
Download App:
  • android
  • ios