ಬರ್ಮಿಂಗ್‌ಹ್ಯಾಮ್‌[ಜು.11]: ಹಾಲಿ ವಿಶ್ವ ಚಾಂಪಿಯನ್‌ ಆಸ್ಪ್ರೇಲಿಯಾ ಹಾಗೂ ಆತಿಥೇಯ ಇಂಗ್ಲೆಂಡ್‌, ಗುರುವಾರ ಐಸಿಸಿ ಏಕದಿನ ವಿಶ್ವಕಪ್‌ನ 2ನೇ ಸೆಮಿಫೈನಲ್‌ ಪಂದ್ಯದಲ್ಲಿ ಮುಖಾಮುಖಿಯಾಗಲಿವೆ. ಇಲ್ಲಿನ ಎಡ್ಜ್‌ಬಾಸ್ಟನ್‌ ಕ್ರೀಡಾಂಗಣದಲ್ಲಿ ನಡೆಯಲಿರುವ ಪಂದ್ಯ ಕ್ರಿಕೆಟ್‌ ಅಭಿಮಾನಿಗಳ ಕುತೂಹಲ ಕೆರಳಿಸಿದ್ದು, ಫೈನಲ್‌ನಲ್ಲಿ ನ್ಯೂಜಿಲೆಂಡ್‌ ತಂಡವನ್ನು ಎದುರಿಸುವ ತಂಡ ಯಾವುದು ಎನ್ನುವುದನ್ನು ತಿಳಿದುಕೊಳ್ಳುವ ಕಾತರ ಎಲ್ಲರಲ್ಲೂ ಇದೆ.

ವಿಶ್ವಕಪ್‌ನಲ್ಲಿ ಭಾರತಕ್ಕೆ ಆಘಾತ; ಕೊಹ್ಲಿ ಸೈನ್ಯಕ್ಕೆ ಫ್ಯಾನ್ಸ್ ಬೆಂಬಲ!

ಆಸ್ಪ್ರೇಲಿಯಾ ಸತತ 2ನೇ ಬಾರಿಗೆ ಫೈನಲ್‌ ಪ್ರವೇಶಿಸುವ ಗುರಿ ಹೊಂದಿದ್ದರೆ, 1992ರ ಬಳಿಕ ಮೊದಲ ಬಾರಿಗೆ ಫೈನಲ್‌ಗೇರುವ ಉತ್ಸಾಹದಲ್ಲಿ ಇಂಗ್ಲೆಂಡ್‌ ಇದೆ. ಉಭಯ ತಂಡಗಳು ರೌಂಡ್‌ ರಾಬಿನ್‌ ಹಂತದಲ್ಲಿ ಮುಖಾಮುಖಿಯಾದಾಗ, ಆಸ್ಪ್ರೇಲಿಯಾ 64 ರನ್‌ಗಳಿಂದ ಗೆಲುವು ಸಾಧಿಸಿತ್ತು.

ದಡ ಸೇರೋ ಮುನ್ನ ಮುಳುಗಿದ ಭಾರತದ ಕ್ರಿಕೆಟ್ ಟೈಟಾನಿಕ್!

ಆಸ್ಪ್ರೇಲಿಯಾ ಅತ್ಯುತ್ತಮ ಬ್ಯಾಟಿಂಗ್‌ ಹಾಗೂ ಬೌಲಿಂಗ್‌ ಪಡೆಯನ್ನು ಹೊಂದಿದೆ. ಇಂಗ್ಲೆಂಡ್‌ ಪ್ರಚಂಡ ಬ್ಯಾಟ್ಸ್‌ಮನ್‌ಗಳನ್ನು ಹೊಂದಿದ್ದರೂ, ಬೌಲಿಂಗ್‌ನಲ್ಲಿ ಕಾಂಗರೂ ಪಡೆಯಷ್ಟು ಬಲಿಷ್ಠವಾಗಿಲ್ಲ. ಇಂಗ್ಲೆಂಡ್‌ ಮೊದಲು ಬ್ಯಾಟ್‌ ಮಾಡಿ 300ಕ್ಕಿಂತ ಹೆಚ್ಚಿನ ಮೊತ್ತ ದಾಖಲಿಸಿದರೆ ಗೆಲ್ಲುವ ಸಾಧ್ಯತೆ ಹೆಚ್ಚಿರಲಿದೆ. ಮೇಲ್ನೋಟಕ್ಕೆ ಆಸ್ಪ್ರೇಲಿಯಾ ಗೆಲ್ಲುವ ನೆಚ್ಚಿನ ತಂಡವಾಗಿ ತೋರುತ್ತಿದ್ದು ಸತತ 2ನೇ ಬಾರಿಗೆ ಆಸ್ಪ್ರೇಲಿಯಾ-ನ್ಯೂಜಿಲೆಂಡ್‌ ನಡುವೆ ಫೈನಲ್‌ ಸೆಣಸಾಟ ಏರ್ಪಡುವ ಸಾಧ್ಯತೆ ಇದೆ.

ಒಟ್ಟು ಮುಖಾಮುಖಿ: 148

ಆಸ್ಪ್ರೇಲಿಯಾ: 82

ಇಂಗ್ಲೆಂಡ್‌: 61

ಟೈ: 02

ಫಲಿತಾಂಶವಿಲ್ಲ: 03

ವಿಶ್ವಕಪ್‌ನಲ್ಲಿ ಆಸೀಸ್‌ vs ಇಂಗ್ಲೆಂಡ್‌

ಪಂದ್ಯ: 08

ಆಸ್ಪ್ರೇಲಿಯಾ: 06

ಇಂಗ್ಲೆಂಡ್‌: 02

ಸಂಭವನೀಯ ಆಟಗಾರರ ಪಟ್ಟಿ

ಆಸ್ಪ್ರೇಲಿಯಾ: ಫಿಂಚ್‌(ನಾಯಕ), ವಾರ್ನರ್‌, ಸ್ಮಿತ್‌, ಹ್ಯಾಂಡ್ಸ್‌ಕಂಬ್‌, ಮ್ಯಾಕ್ಸ್‌ವೆಲ್‌, ಸ್ಟೋಯ್ನಿಸ್‌, ಕಾರಿ, ಕಮಿನ್ಸ್‌, ಸ್ಟಾರ್ಕ್, ಬೆರ್ಹನ್‌ಡೊಫ್‌ರ್‍, ಲಯನ್‌.

ಇಂಗ್ಲೆಂಡ್‌: ರಾಯ್‌, ಬೇರ್‌ಸ್ಟೋವ್‌, ರೂಟ್‌, ಮಾರ್ಗನ್‌(ನಾಯಕ), ಬಟ್ಲರ್‌, ಸ್ಟೋಕ್ಸ್‌, ಕ್ರಿಸ್‌ ವೋಕ್ಸ್‌, ಆರ್ಚರ್‌, ರಶೀದ್‌, ಮಾರ್ಕ್ ವುಡ್‌, ಪ್ಲಂಕೆಟ್‌.

ಪಂದ್ಯ ಆರಂಭ: ಮಧ್ಯಾಹ್ನ 3ಕ್ಕೆ

ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್ 1