ವಿಶ್ವಕಪ್ ಟೂರ್ನಿಯ ಕ್ಷಣ-ಕ್ಷಣದ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ...

ಲೀಡ್ಸ್‌[ಜು.04]: ಸೆಮಿಫೈನಲ್‌ ರೇಸ್‌ನಿಂದ ಹೊರಬಿದ್ದಿರುವ ವೆಸ್ಟ್‌ಇಂಡೀಸ್‌ ಹಾಗೂ ಆಫ್ಘಾನಿಸ್ತಾನ, ಗುರುವಾರ 2019ರ ವಿಶ್ವಕಪ್‌ನಲ್ಲಿ ತಮ್ಮ ಕೊನೆ ಪಂದ್ಯದಲ್ಲಿ ಮುಖಾಮುಖಿಯಾಗಲಿವೆ.ಎರಡೂ ತಂಡಗಳಿಗೂ ಇದು ಪ್ರತಿಷ್ಠೆಯ ಪಂದ್ಯವಾಗಿದೆ. ಟೂರ್ನಿಯುದ್ದಕ್ಕೂ ಸಾಧಾರಣ ಪ್ರದರ್ಶನ ತೋರಿರುವ ವಿಂಡೀಸ್‌ ಹಾಗೂ ಆಫ್ಘನ್‌, ಅಂತಿಮ ಪಂದ್ಯದಲ್ಲಿ ಗೆದ್ದು ವಿಶ್ವಕಪ್‌ಗೆ ವಿದಾಯ ಹೇಳಲು ಕಾತರಿಸುತ್ತಿವೆ.

ನ್ಯೂಜಿಲೆಂಡ್ ಮಣಿಸಿ ಸೆಮಿಫೈನಲ್‌ಗೆ ಲಗ್ಗೆ ಇಟ್ಟ ಇಂಗ್ಲೆಂಡ್

ವಿಂಡೀಸ್‌ ಆಡಿರುವ 8 ಪಂದ್ಯಗಳಲ್ಲಿ ಕೇವಲ 1ರಲ್ಲಿ ಗೆದ್ದರೆ, ಆಫ್ಘಾನಿಸ್ತಾನ ಆಡಿರುವ ಎಂಟೂ ಪಂದ್ಯಗಳಲ್ಲಿ ಸೋಲುಂಡಿದೆ. ಈ ಪಂದ್ಯವನ್ನು ಗೆದ್ದರೂ ಆಫ್ಘಾನಿಸ್ತಾನ ಅಂಕಪಟ್ಟಿಯಲ್ಲಿ ಕೊನೆ ಸ್ಥಾನದಲ್ಲೇ ಉಳಿದುಕೊಳ್ಳಲಿದೆ. ಕಳೆದ ವರ್ಷ ಜಿಂಬಾಬ್ವೆಯಲ್ಲಿ ನಡೆದಿದ್ದ ವಿಶ್ವಕಪ್‌ ಅರ್ಹತಾ ಸುತ್ತಿನ ಫೈನಲ್‌ನಲ್ಲಿ ಆಫ್ಘನ್‌ ವಿರುದ್ಧ ವಿಂಡೀಸ್‌ ಸೋಲುಂಡಿತ್ತು. ಆ ಸೋಲಿನ ಸೇಡು ತೀರಿಸಿಕೊಳ್ಳಲು ಇದು ಉತ್ತಮ ಅವಕಾಶವಾಗಿದೆ. 

ಬ್ಯಾಟಿಂಗ್‌ ದೈತ್ಯ ಕ್ರಿಸ್‌ ಗೇಲ್‌ ನಿವೃತ್ತಿಯ ಹೊಸ್ತಿಲಲ್ಲಿದ್ದು, ಈ ಪಂದ್ಯವನ್ನು ಮತ್ತೊಂದು ವಿಶ್ವ ದಾಖಲೆ ಬರೆಯಲು ಉಪಯೋಗಿಸಿಕೊಂಡರೆ ಅಚ್ಚರಿಯಿಲ್ಲ. ಆಫ್ಘಾನಿಸ್ತಾನದ ತಾರಾ ಸ್ಪಿನ್ನರ್‌ ರಶೀದ್‌ ಖಾನ್‌ ಟೂರ್ನಿಯಲ್ಲಿ ನಿರೀಕ್ಷಿತ ಪ್ರದರ್ಶನ ತೋರಿಲ್ಲ. ಕೊನೆ ಪಂದ್ಯದಲ್ಲಾದರೂ ಮಿಂಚಿನ ಆಟವಾಡುತ್ತಾರಾ ಎನ್ನುವ ಕುತೂಹಲವಿದೆ.

ಒಟ್ಟು ಮುಖಾಮುಖಿ: 05

ವಿಂಡೀಸ್‌: 01

ಆಫ್ಘನ್‌: 03

ಫಲಿತಾಂಶವಿಲ್ಲದ್ದು: 01

ವಿಶ್ವಕಪ್‌ನಲ್ಲಿ ಉಭಯ ತಂಡಗಳ ನಡುವೆ ಮೊದಲ ಮುಖಾಮುಖಿ

ಸ್ಥಳ: ಲೀಡ್ಸ್‌
ಪಂದ್ಯ ಆರಂಭ: ಮಧ್ಯಾಹ್ನ 3ಕ್ಕೆ
ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್