Asianet Suvarna News Asianet Suvarna News

ಸತತ 5 ಅರ್ಧಶತಕ ಸಿಡಿಸಿ ದಾಖಲೆ ಬರೆದ ನಾಯಕ ವಿರಾಟ್ ಕೊಹ್ಲಿ !

ಇಂಗ್ಲೆಂಡ್ ವಿರುದ್ಧ ಹಾಫ್ ಸೆಂಚುರಿ ಸಿಡಿಸಿದ ನಾಯಕ ವಿರಾಟ್ ಕೊಹ್ಲಿ ದಾಖಲೆ ನಿರ್ಮಿಸಿದ್ದಾರೆ. ಟೀಂ ಇಂಡಿಯಾ ನಾಯಕ ವಿಶ್ವಕಪ್ ಟೂರ್ನಿಯಲ್ಲಿ ಬರೆದ ದಾಖಲೆ ಯಾವುದು? ಇಲ್ಲಿದೆ ವಿವರ.

Virat kohli become 2nd player to score 6 consecutive half century in world cup
Author
Bengaluru, First Published Jun 30, 2019, 9:38 PM IST

ಬರ್ಮಿಂಗ್‌ಹ್ಯಾಮ್(ಜೂ.30): ಇಂಗ್ಲೆಂಡ್ ವಿರುದ್ಧದ ವಿಶ್ವಕಪ್ ಲೀಗ್ ಪಂದ್ಯದಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹಾಫ್ ಸೆಂಚುರಿ ಸಿಡಿಸಿದ್ದಾರೆ. ಇಂಗ್ಲೆಂಡ್ ನೀಡಿದ 338 ರನ್ ಟಾರ್ಗೆಟ್ ಚೇಸ್ ಮಾಡೋ ವೇಳೆ ಕೊಹ್ಲಿ 66 ರನ್ ಸಿಡಿಸಿ ಔಟಾದರು.  ಕೊಹ್ಲಿ ಹಾಫ್ ಸೆಂಚುರಿಯಿಂದ ಈ ವಿಶ್ವಕಪ್ ಟೂರ್ನಿಯಲ್ಲಿ ಸತತ 5 ಅರ್ಧಶತಕ ಸಿಡಿಸಿ ದಾಖಲೆ ಬರೆದಿದ್ದಾರೆ. 

ಇದನ್ನೂ ಓದಿ: ಎಡ್ಡೆ ಗೊಬ್ಬೋಡು ರಾಹುಲ್ ಎಂದು ಪ್ರೋತ್ಸಾಹಿಸಿದ ತುಳುವರಿಗೆ ನಿರಾಸೆ!

ವಿಶ್ವಕಪ್ ಟೂರ್ನಿಯಲ್ಲಿ ಸತತ 5 ಅರ್ಧಶತಕ ಸಿಡಿಸಿದ 2ನೇ ಕ್ರಿಕೆಟಿಗ ಅನ್ನೋ ದಾಖಲೆ ಬರೆದಿದ್ದಾರೆ. 2015ರ ವಿಶ್ವಕಪ್ ಟೂರ್ನಿಯಲ್ಲಿ ಆಸ್ಟ್ರೇಲಿಯಾದ ಸ್ಟೀವ್ ಸ್ಮಿತ್ ಸತತ 5 ಹಾಫ್ ಸೆಂಚುರಿ ಸಿಡಿಸಿ ದಾಖಲೆ ಬರೆದಿದ್ದರು. ವಿಶ್ವಕಪ್ ಟೂರ್ನಿಯಲ್ಲಿ ಸತತ 5 ಹಾಫ್ ಸೆಂಚುರಿ ಸಿಡಿಸಿದ ಮೊದಲ ನಾಯಕ ಅನ್ನೋ ಖ್ಯಾತಿಗೂ ಕೊಹ್ಲಿ ಪಾತ್ರರಾಗಿದ್ದಾರೆ.

ಇದನ್ನೂ ಓದಿ: ವಿಶ್ವಕಪ್ ಟೂರ್ನಿಯಲ್ಲಿ ದಾಖಲೆ ಬರೆದ ಮೊಹಮ್ಮದ್ ಶಮಿ!

ಇಂಗ್ಲೆಂಡ್ ಪಂದ್ಯಕ್ಕೂ ಮೊದಲು ಕೊಹ್ಲಿ ವೆಸ್ಟ್ ಇಂಡೀಸ್, ಆಫ್ಘಾನಿಸ್ತಾನ, ಪಾಕಿಸ್ತಾನ ಹಾಗೂ ಆಸ್ಟ್ರೇಲಿಯಾ ವಿರುದ್ಧ ಹಾಫ್ ಸೆಂಚುರಿ ಸಿಡಿಸಿದ್ದರು.  ಈ ವಿಶ್ವಕಪ್ ಟೂರ್ನಿಯ 6 ಇನ್ನಿಂಗ್ಸ್‌ಗಳಿಂದ ವಿರಾಟ್ ಕೊಹ್ಲಿ 382 ರನ್ ಸಿಡಿಸಿದ್ದಾರೆ.
 

Follow Us:
Download App:
  • android
  • ios