ಬರ್ಮಿಂಗ್‌ಹ್ಯಾಮ್(ಜೂ. 30): ವಿಶ್ವಕಪ್ ಟೂರ್ನಿಯಲ್ಲಿ ಟೀಂ ಇಂಡಿಯಾ ಕ್ರಿಕೆಟಿಗ ಕೆಎಲ್ ರಾಹುಲ್‌ಗೆ ಪ್ರತಿ ಪಂದ್ಯದಲ್ಲೂ  ತುಳು ಭಾಷಿಗರ ಪ್ರೋತ್ಸಾಹ ಸಿಗುತ್ತಿದೆ. ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ತುಳುನಾಡಿನ ಜನತೆ ರಾಹುಲ್ ಬಳಿ ಎಂಕ್ಲೆಗ್ ಸೆಂಚುರಿ ಬೋಡು ಎಂದು ಆಗ್ರಹಿಸಿದ್ದರು. ಇದೀಗ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಎಡ್ಡೆ ಗೊಬ್ಬೋಡು ರಾಹುಲ್( ಚೆನ್ನಾಗಿ ಆಡಬೇಕು ರಾಹುಲ್) ಎಂದಿದ್ದಾರೆ. ಆದರೆ ರಾಹುಲ್ ಬಹುಬೇಗನೆ ಔಟಾಗೋ ಮೂಲಕ ನಿರಾಸೆ ಮೂಡಿಸಿದ್ದಾರೆ.

ಇದನ್ನೂ  ಓದಿ: ಇಂಡೋ-ಪಾಕ್ ಫೈಟ್: ಎಂಕ್ಲೆಗ್ ಸೆಂಚುರಿ ಬೋಡು- ರಾಹುಲ್‌ಗೆ ತುಳು ಭಾಷೆಯಲ್ಲಿ ಮನವಿ!

ಟಾಸ್ ಬಳಿಕ ಫೀಲ್ಡಿಂಗ್ ಇಳಿಯಲು ಟೀಂ ಇಂಡಿಯಾ ಸಜ್ಜಾಗಿತ್ತು. ಮೈದಾನಕ್ಕಿಳಿಯುವ ಮುನ್ನ ಸಾಲಾಗಿ ನಿಂತಿದ್ದ ಟೀಂ ಇಂಡಿಯಾಗೆ ಕ್ರೀಡಾಂಗಣದಲ್ಲಿ ನೆರೆದಿದ್ದ ಅಭಿಮಾನಿಗಳು ಶುಭಕೋರುತ್ತಿದ್ದರು. ಇದೇ ವೇಳೆ ಮಂಗಳೂರಿನ ಅಭಿಮಾನಿಗಳು ತುಳುವಿನಲ್ಲಿ ರಾಹುಲ್‌ಗೆ ಪ್ರೋತ್ಸಾಹ ನೀಡಿದ್ದಾರೆ. ಎಡ್ಡೆ ಗೊಬ್ಬೋಡು ರಾಹುಲ್, ಎಂಕ್ಲ್ ಕುಡ್ಲಡ್ದ್ ಬೈದಿನಿ(ಚೆನ್ನಾಗಿ ಆಡಬೇಕು ರಾಹುಲ್, ನಾವು ಮಂಗಳೂರಿನಿಂದ ಬಂದಿದ್ದೇವೆ) ಎಂದು ರಾಹುಲ್‌ಗೆ ಪ್ರೋತ್ಸಾಹ ನೀಡಿದ್ದಾರೆ. ಇತ್ತ ರಾಹುಲ್ ತುಳು ಭಾಷಿಗರತ್ತ  ಕೈಬೀಸಿ ಪ್ರತಿಕ್ರಿಯೆ ನೀಡಿದ್ದಾರೆ. 

"

ಇದನ್ನೂ  ಓದಿ: ವಿಶ್ವಕಪ್ ಟೂರ್ನಿಯಲ್ಲಿ ದಾಖಲೆ ಬರೆದ ಮೊಹಮ್ಮದ್ ಶಮಿ!

ಫೀಲ್ಡಿಂಗ್ ವೇಳೆ ರಾಹುಲ್ ಕ್ಯಾಚ್ ಹಿಡಿಯಲು ಹೋಗಿ ಇಂಜುರಿಗೆ ತುತ್ತಾಗಿದ್ದರು. ಹೀಗಾಗಿ ಫೀಲ್ಡಿಂಗ್ ಮಾಡದೆ ವಿಶ್ರಾಂತಿಗೆ ಜಾರಿದ್ದರು. ಇನ್ನು ಬ್ಯಾಟಿಂಗ್ ನಲ್ಲಿ ರಾಹುಲ್ ನಿರಾಸೆ ಮೂಡಿಸಿದ್ದಾರೆ. ಶೂನ್ಯಕ್ಕೆ ಔಟಾಗೋ ಮೂಲಕ ಭಾರತಕ್ಕೆ ಉತ್ತಮ ಆರಂಭ ನೀಡಲು ವಿಫಲರಾಗಿದ್ದಾರೆ. ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಫೀಲ್ಡಿಂಗ್ ಮಾಡುತ್ತಿದ್ದ ರಾಹುಲ್ ಬಳಿ ಮಂಗಳೂರಿನ ಅಭಿಮಾನಿಗಳು, ರಾಹುಲ್ ಎಂಕ್ಲೆಗ್ ಸೆಂಚುರಿ ಬೋಡು(ರಾಹುಲ್ ನಮಗೆ ಸೆಂಚುರಿ ಬೇಕು) ಎಂದು ಆಗ್ರಹಿಸಿದ್ದರು.