Asianet Suvarna News Asianet Suvarna News

ವಿಶ್ವಕಪ್ 2019: ಪಾಕಿಸ್ತಾನ ಗೆಲುವಿಗೆ ಟ್ರೋಲ್ ಆದ ಸಾನಿಯಾ ಮಿರ್ಜಾ

ನ್ಯೂಜಿಲೆಂಡ್ ವಿರುದ್ಧದ ಗೆಲುವಿನ ಬಳಿಕ ಟೆನಿಸ್ ತಾರೆ ಸಾನಿಯಾ ಮಿರ್ಜಾ ಟ್ವೀಟ್  ಮೂಲಕ ಸಂತಸ ಹಂಚಿಕೊಂಡಿದ್ದರು. ಆದರೆ ಸಾನಿಯಾ ಟ್ವೀಟ್‌ಗೆ ಪಾಕಿಸ್ತಾನ ಅಭಿಮಾನಿಗಳು ತಿರುಗೇಟು ನೀಡಿದ್ದಾರೆ. ಪತಿ ಶೋಯೆಬ್ ಮಲಿಕ್ ಜೊತೆಗೆ ಸಾನಿಯಾ ಕೂಡ ಟ್ರೋಲ್ ಆಗಿದ್ದಾರೆ. 

Twitter trolls sania mirza  after pakistan vs new zealand world cup match
Author
Bengaluru, First Published Jun 27, 2019, 9:21 PM IST
  • Facebook
  • Twitter
  • Whatsapp

ಲಂಡನ್(ಜೂ.27): ವಿಶ್ವಕಪ್ ಟೂರ್ನಿಯಲ್ಲಿ ಪಾಕಿಸ್ತಾನ ಭರ್ಜರಿ ಕಮ್‌ಬ್ಯಾಕ್ ಮಾಡಿದೆ. ನ್ಯೂಜಿಲೆಂಡ್ ವಿರುದ್ಧದ ಗೆಲುವಿನ ಬಳಿಕ ಭಾರತದ ಟೆನಿಸ್ ತಾರೆ, ಪಾಕಿಸ್ತಾನ ಕ್ರಿಕೆಟಿಗ ಶೋಯೆಬ್ ಮಲಿಕ್ ಪತ್ನಿ ಸಾನಿಯಾ ಮಿರ್ಜಾ ಟ್ವೀಟ್ ಮಾಡಿದ್ದರು. ಪಾಕ್ ಗೆಲುವಿನ ಸಂತಸವನ್ನು ಟ್ವೀಟ್ ಮೂಲಕ ಹಂಚಿಕೊಂಡಿದ್ದರು. ಆದರೆ ಸಾನಿಯಾ ಟ್ವೀಟ್ ಮಾಡಿದ ಬೆನಲ್ಲೇ ಟ್ರೋಲ್ ಆಗಿದ್ದಾರೆ.

 

ಇದನ್ನೂ ಓದಿ: ಇಂಡೋ-ಪಾಕ್ ಅಭಿಮಾನಿಗಳಿಂದ ಡ್ಯಾನ್ಸ್-ವೈರಲ್ ಆಯ್ತು ವೀಡಿಯೋ!

ಪಾಕಿಸ್ತಾನ ಹಿರಿಯ ಕ್ರಿಕೆಟಿಗ ಶೋಯಿಬ್ ಮಲಿಕ್ ಕಳಪೆ ಪ್ರದರ್ಶನಕ್ಕೆ  ಭಾರಿ ಟೀಕೆ ವ್ಯಕ್ತವಾಗುತ್ತಿದೆ. ಇತ್ತ ಪಾಕಿಸ್ತಾನ ತಂಡ ಶೋಯಿಬ್ ಮಲಿಕ್‌ಗೆ ವಿಶ್ರಾಂತಿ ನೀಡಿ ಹ್ಯಾರಿಸ್ ಸೊಹೈಲ್‌ಗೆ ಸ್ಥಾನ ನೀಡಿತ್ತು. ಸತತ 2 ಹಾಫ್ ಸೆಂಚುರಿ ಮೂಲಕ ಹ್ಯಾರಿಸ್ ಸೊಹೈಲ್ ಪಾಕಿಸ್ತಾನ ತಂಡದ ಗೆಲುವಿನಲ್ಲಿ ನೆರವಾಗಿದ್ದರು. ನ್ಯೂಜಿಲೆಂಡ್ ಗೆಲುವಿನ ಬಳಿಕ ಟ್ವೀಟ್ ಮಾಡಿದ ಸಾನಿಯಾಗೆ  ಅಭಿಮಾನಿಗಳು ಟ್ರೋಲ್ ಮಾಡಿದ್ದಾರೆ. ಮಲಿಕ್ ತಂಡದಲ್ಲಿ ಇಲ್ಲದ ಕಾರಣ ಪಾಕಿಸ್ತಾನ ಗೆಲುವು ಸಾಧಿಸಿದೆ ಎಂದಿದ್ದಾರೆ. 


 

Follow Us:
Download App:
  • android
  • ios