ಮುಂಬೈ(ಜೂ.17): ಭಾರತ ಹಾಗೂ ಪಾಕಿಸ್ತಾನ ನಡುವಿನ ವಿಶ್ವಕಪ್ ಪಂದ್ಯ  ಕಳೆದ ಫೆಬ್ರವರಿಯಿಂದ ಭಾರಿ ಚರ್ಚೆಯಲ್ಲಿತ್ತು. ಪುಲ್ವಾಮಾ ಉಗ್ರರ ದಾಳಿ ಬೆನ್ನಲ್ಲೇ ಪಾಕ್ ವಿರುದ್ಧ ಪಂದ್ಯ ಬಹಿಷ್ಕರಿಸುವಂತೆ ಒತ್ತಾಯಗಳು ಕೇಳಿಬಂದಿತ್ತು. ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಕೂಡ ಪಂದ್ಯ ಬಹಿಷ್ಕರಿಸಲು ಆಗ್ರಹಿಸಿದ್ದರು. ಪಂದ್ಯ ಆಯೋಜನೆಗೊಂಡ ಬೆನ್ನಲ್ಲೇ ಗೌತಮ್ ಗಂಭೀರ್ ಟ್ರೋಲ್ ಆಗಿದ್ದಾರೆ.

ಇದನ್ನೂ ಓದಿ: ಏರ್‌ಸ್ಟ್ರೈಕ್ ಬಳಿಕ ಪಾಕ್‌ ಮೇಲೆ ಗ್ರೌಂಡ್‌ಸ್ಟ್ರೈಕ್ - ಚಿತ್ರಗಳಲ್ಲಿ ಭಾರತದ ವಿಜಯೋತ್ಸವ!

ಲೋಕಸಭಾ ಚುನಾವಣೆಗೂ ಮೊದಲು ಗೌತಮ್ ಗಂಭೀರ್ ಪಾಕ್ ವಿರುದ್ಧದ ಪಂದ್ಯ ಬಹಿಷ್ಕರಿಸುವಂತೆ ಆಗ್ರಹಿಸಿದ್ದರು. ಇನ್ನು ಚುನಾವಣೆಗೆ ಸ್ಪರ್ಧಿಸಿದ್ದ ಗಂಭೀರ್, ತಮ್ಮ ನಿಲುವಿಗೆ ಬದ್ಧರಾಗಿದ್ದರು. ಆದರೆ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಬಳಿಕ ಗಂಭೀರ್ ಮಾತಿನ ವರಸೆ ಬದಲಾಗಿದೆ. ನಿಲುವು ಬದಲಾಗಿದೆ. ಪಂದ್ಯ ಬಹಿಷ್ಕರಿಸುವಂತೆ ಹೇಳಿದ್ದ ಗಂಭೀರ್, ಇಂಡೋ-ಪಾಕ್ ಪಂದ್ಯದ ವೀಕ್ಷಕ ವಿವರಣೆ ಹಾಗೂ ಚರ್ಚೆಯಲ್ಲಿ ಪಾಲ್ಗೊಂಡಿದ್ದಾರೆ. ಇಷ್ಟೇ ಅಲ್ಲ ಟ್ವಿಟರ್ ಮೂಲಕ ಫಾಲೋ ಮಾಡಿ ಎಂದು ಮನವಿ ಕೂಡ ಮಾಡಿದ್ದರು. ಗಂಭೀರ್ ದ್ವಂಧ ನೀತಿ ಇದೀಗ ಟ್ರೋಲ್ ಆಗಿದೆ.