ಏರ್‌ಸ್ಟ್ರೈಕ್ ಬಳಿಕ ಪಾಕ್‌ ಮೇಲೆ ಗ್ರೌಂಡ್‌ಸ್ಟ್ರೈಕ್ - ಚಿತ್ರಗಳಲ್ಲಿ ಭಾರತದ ವಿಜಯೋತ್ಸವ!

First Published 17, Jun 2019, 5:21 PM IST

ಭಾರತ ಹಾಗೂ ಪಾಕಿಸ್ತಾನ ನಡುವಿನ ಹೈವೋಲ್ಟೇಜ್ ಪಂದ್ಯ ನಿರೀಕ್ಷೆಯಂತೆ ಭಾರತೀಯ ಅಭಿಮಾನಿಗಳ ಸಂಭ್ರಮವನ್ನು ಡಬಲ್ ಮಾಡಿದೆ. ಬದ್ಧವೈರಿ ಪಾಕಿಸ್ತಾನ ವಿರುದ್ಧ ಭಾರತ ಡಕ್‌ವರ್ತ್ ನಿಯಮದ ಪ್ರಕಾರ 89 ರನ್‌ಗಳ ಗೆಲುವು ಸಾಧಿಸಿತು. ವಿಶ್ವಕಪ್ ಟೂರ್ನಿಯಲ್ಲಿ ಪಾಕಿಸ್ತಾನ ವಿರುದ್ದ ಸತತ 7ನೇ ಗೆಲುವು ದಾಖಲಿಸೋ ಮೂಲಕ ಇತಿಹಾಸ ಬರೆದಿದೆ. ರೋಹಿತ್ ಶರ್ಮಾ ಶತಕ, ಕೆಎಲ್ ರಾಹುಲ್, ನಾಯಕ ವಿರಾಟ್ ಕೊಹ್ಲಿ ಅರ್ಧಶತಕ ಸಿಡಿಸಿ ಅಬ್ಬರಿಸಿದರೆ, ಬೌಲಿಂಗ್‌ನಲ್ಲಿ ಕುಲ್ದೀಪ್ ಯಾದವ್, ಹಾರ್ದಿಕ್ ಪಾಂಡ್ಯ ಹಾಗೂ ವಿಜಯ್ ಶಂಕರ್ ತಲಾ 2 ವಿಕೆಟ್ ಕಬಳಿಸಿ ಟೀಂ ಇಂಡಿಯಾ ಗೆಲುವಿನಲ್ಲಿ ಪ್ರಮುಖ ಪಾತ್ರನಿರ್ವಹಿಸಿದರು. ಕ್ರೀಡಾಂಗಣದಲ್ಲಿ ಟೀಂ ಇಂಡಿಯಾ ಅಭಿಮಾನಿಗಳೇ ತುಂಬಿ ತುಳುಕುತ್ತಿದ್ದರು. ಭಾರತ ಗೆಲುವಿನ ಸಿಹಿ ಕಾಣುತ್ತಿದ್ದಂತೆ ಎಲ್ಲೆಡೆ ತ್ರಿವರ್ಣ ಧ್ವಜ ಹಾರಾಡಿತು. ಟೀಂ ಇಂಡಿಯಾ ರೋಚಕ ಗೆಲುವಿನ ಕ್ಷಣಗಳು ಇಲ್ಲಿವೆ.

ಪಂದ್ಯಕ್ಕೂ ಮುನ್ನ ಭಾರತದ ರಾಷ್ಟ್ರಗೀತೆಯನ್ನು ಟೀಂ ಇಂಡಿಯಾ ಜೊತೆ ಅಭಿಮಾನಿಗಳು ಹಾಡಿದರು

ಟಾಸ್ ಸೋತು ಬ್ಯಾಟಿಂಗ್ ಇಳಿದ ಭಾರತಕ್ಕೆ ರೋಹಿತ್ ಶರ್ಮಾ ಭರ್ಜರಿ ಶತಕ ಉತ್ತಮ ಅಡಿಪಾಯ ಹಾಕಿತು

ಕೆಎಲ್ ರಾಹುಲ್ ಬಳಿಕ ನಾಯಕ ವಿರಾಟ್ ಕೊಹ್ಲಿ ಕೂಡ  ಹಾಫ್ ಸೆಂಚುರಿ ಸಿಡಿಸಿದರು

337 ರನ್ ಟಾರ್ಗೆಟ್ ಪಡೆದ ಪಾಕಿಸ್ತಾನಕ್ಕೆ ವಿಜಯ್ ಶಂಕರ್ ಆರಂಭದಲ್ಲೇ ಶಾಕ್ ನೀಡಿದರು

ಭಾರತಕ್ಕೆ ಅಪಾಯದ ಸೂಚನೆ ನೀಡಿದ ಬಾಬರ್ ಅಜಂ -ಫಕಾರ್ ಜಮಾನ್‌, ಸ್ಪಿನ್ನರ್ ಕುಲ್ದೀಪ್‌ಗೆ ವಿಕೆಟ್ ಒಪ್ಪಿಸಿದರು

ಸತತ 2 ವಿಕೆಟ್ ಕಬಳಿಸಿದ ಹಾರ್ದಿಕ್ ಪಾಂಡ್ಯ  ಟೀಂ ಇಂಡಿಯಾ ಭರ್ಜರಿ ಮೇಲುಗೈ ತಂದುಕೊಟ್ಟರು

ಪಾಕ್ ತಂಡದ ಪ್ರಮುಖ ವಿಕೆಟ್ ಕಬಳಿಸಿದ ಪಾಂಡ್ಯ  ಸಂಭ್ರಮ ಮುಗಿಲು ಮುಟ್ಟಿತ್ತು

ಪಾಕಿಸ್ತಾನ ಸೋಲಿನತ್ತ ಹೆಜ್ಜೆ ಹಾಕುತ್ತಿದ್ದಂತೆ ಟೀಂ ಇಂಡಿಯಾದ ಸಂಭ್ರಮ ಶುರುವಾಗಿತ್ತು

ಕ್ರೀಡಾಂಗಣದಲ್ಲಿ ನೆರೆದಿದ್ದ ಅಭಿಮಾನಿಗಳು ಭಾರತದ ಯಶಸ್ಸಿಗೆ ಕುಣಿದು ಕುಪ್ಪಳಿಸಿದರು

ಒಲ್ಡ್ ಟ್ರಾಫೋರ್ಡ್ ಕ್ರೀಡಾಂದಣಲ್ಲಿ ಭಾರತದ ತ್ರಿವರ್ಣ ಧ್ವಜಗಳು ರಾರಾಜಿಸಿತು

ಭಾರತ ಗೆಲುವಿನತ್ತ ಗಾಪುಗಾಲಿಡುತ್ತಿದ್ದಂತೆ 2ನೇ ಬಾರಿ ಮಳೆ ಅಡ್ಡಿಯಾಯಿತು - ಪಂದ್ಯ ತಾತ್ಕಾಲಿಕ ಸ್ಥಗಿತ

ಡಕ್‌ವರ್ತ್ ನಿಯಮದ ಪ್ರಕಾರ ಪಾಕ್‌ಗೆ 40 ಓವರ್‌ಗಳಲ್ಲಿ 302 ರನ್ ಟಾರ್ಗೆಟ್-  ಅಂತಿಮ 30 ಎಸೆತದಲ್ಲಿ 136 ರನ್ ಬೇಕಿತ್ತು

ಭಾರತ 89 ರನ್ ಗೆಲುವು ಸಾಧಿಸುತ್ತಿದ್ದಂತೆ ಅಭಿಮಾನಿಗಳು ಸಂಭ್ರಮಾಚರಿಸಿದರು

ಪಾಕಿಸ್ತಾನ ವಿರುದ್ಧ ಟೀಂ ಇಂಡಿಯಾ  ಅಜೇಯ ಓಟಕ್ಕೆ ಎಲ್ಲಡೆ ಪ್ರಶಂಸೆಗಳ ಸುರಿಮಳೆಯಾಯಿತು

loader