ನಾಟಿಂಗ್‌ಹ್ಯಾಮ್[ಮೇ.31]: ಸತತ ಸೋಲುಗಳಿಂದ ಜರ್ಝರಿತವಾಗಿರುವ ಪಾಕಿಸ್ತಾನ ತಂಡವು ವಿಶ್ವಕಪ್ ಟೂರ್ನಿಯಲ್ಲಿ ಕೇವಲ 105 ರನ್’ಗಳಿಗೆ ಸರ್ವಪತನ ಕಾಣುವ ಮೂಲಕ ನೀರಸ ಆರಂಭ ಪಡೆದಿದೆ.

ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಪಾಕಿಸ್ತಾನ ಮೂರನೇ ಓವರ್’ನಲ್ಲೇ ಮೊದಲ ವಿಕೆಟ್ ಕಳೆದುಕೊಂಡಿತು. ಆ ಬಳಿಕ ಫಖರ್ ಜಮಾನ್[22] ಹಾಗೂ ಬಾಬರ್ ಅಜಂ[22] ವಿಂಡೀಸ್ ವೇಗಿಗಳಿಗೆ ಅಲ್ಪ ಪ್ರತಿರೋಧ ತೋರಿದರಾದರೂ ಇವರಿಬ್ಬರ ವಿಕೆಟ್ ಬೀಳುತ್ತಿದ್ದಂತೆ ಪಾಕಿಸ್ತಾನ ನಿರಂತರ ವಿಕೆಟ್ ಕಳೆದುಕೊಳ್ಳುತ್ತಾ ಸಾಗಿತು. ಕೊನೆಯಲ್ಲಿ ವಹಾಬ್ ರಿಯಾಜ್ ಒಂದು ಬೌಂಡರಿ ಹಾಗೂ 2 ಸಿಕ್ಸರ್ ಸಹಿತ 18 ರನ್ ಬಾರಿಸುವ ಮೂಲಕ ತಂಡದ ಮೊತ್ತವನ್ನು ನೂರರ ಗಡಿ ದಾಟಿಸಿದರು.

ಅಲ್ಪ ಮೊತ್ತಕ್ಕೆ ಪಾಕಿಸ್ತಾನ ಆಲೌಟ್, ವಿಂಡೀಸ್ ಗೆ ಸುಲಭ ಗುರಿ

ಪಾಕಿಸ್ತಾನ ತಂಡದ ಪ್ರದರ್ಶನಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಟೀಕೆ ವ್ಯಕ್ತವಾಗಿದೆ. ಪಾಕ್ ವೇಗಿ ಶೋಯೆಬ್ ಅಖ್ತರ್ ಪಾಕ್ ಪ್ರದರ್ಶನ ಕಂಡು ಮಾತೇ ಬರುತ್ತಿಲ್ಲ[ಸ್ಪೀಚ್’ಲೆಸ್] ಎಂದು ಟ್ವೀಟ್ ಮಾಡಿದ್ದರೆ, ಕೆಲವರು ಪಾಪ ಪಾಕಿಸ್ತಾನ ಈ ಟೂರ್ನಿಯನ್ನು ಟಿ20 ವಿಶ್ವಕಪ್ ಎಂದುಕೊಂಡಿದ್ದಾರೆ ಎಂದು ಕಾಲೆಳೆದಿದ್ದಾರೆ. ಪಾಕ್ ಪ್ರದರ್ಶನ ಕಂಡ ಕ್ರಿಕೆಟ್ ಅಭಿಮಾನಿಗಳು ಏನಂದ್ರು ಅನ್ನೋದನ್ನು ನೀವೇ ನೋಡಿ...