ನಾಟಿಂಗ್’ಹ್ಯಾಮ್[ಮೇ.31]: ಓಶಾನೆ ಥಾಮಸ್[4] ಹಾಗೂ ನಾಯಕ ಜೇಸನ್ ಹೋಲ್ಡರ್ ಮಾರಕ ದಾಳಿಗೆ ತತ್ತರಿಸಿದ ಪಾಕಿಸ್ತಾನ ಕೇವಲ 105 ರನ್’ಗಳಿಗೆ ಸರ್ವಪತನ ಕಂಡಿದೆ. ಒಟ್ಟಾರೆ ವಿಶ್ವಕಪ್ ಟೂರ್ನಿಯಲ್ಲಿ ಪಾಕಿಸ್ತಾನದ ಎರಡನೇ ಕನಿಷ್ಠ ಮೊತ್ತ ಇದಾಗಿದೆ. ಈ ಮೊದಲು 1992ರ ವಿಶ್ವಕಪ್ ಟೂರ್ನಿಯಲ್ಲಿ ಇಂಗ್ಲೆಂಡ್ ತಂಡದ ವಿರುದ್ಧ ಪಾಕಿಸ್ತಾನ ತಂಡವು 74 ರನ್ ಗಳಿಗೆ ಸರ್ವಪತನ ಕಂಡಿತ್ತು.

ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡ ವೆಸ್ಟ್ ಇಂಡೀಸ್ ತಂಡದ ನಾಯಕನ ನಿರ್ಧಾರವನ್ನು ಸಮರ್ಥಿಸಿಕೊಳ್ಳುವಂತೆ ಕೆರಿಬಿಯನ್ ಬೌಲರ್’ಗಳು ಸಂಘಟಿತ ಪ್ರದರ್ಶನ ತೋರಿದರು. ಪಾಕಿಸ್ತಾನದ ಪರ ಫಖರ್ ಜಮಾನ್ ಹಾಗೂ ಬಾಬರ್ ಅಜಂ ತಲಾ 22 ರನ್ ಬಾರಿಸಿದರೆ, ಮೊಹಮ್ಮದ್ ಹಫೀಜ್ ಮತ್ತು ವಹಾಬ್ ರಿಯಾಜ್ 18 ರನ್ ಬಾರಿಸಿದ್ದು ಬಿಟ್ಟರೆ, ಉಳಿದ್ಯಾವ ಬ್ಯಾಟ್ಸ್’ಮನ್’ಗಳಿಗೂ ಎರಡಂಕಿ ಮೊತ್ತ ದಾಖಲಿಸಲು ಸಾಧ್ಯವಾಗಲಿಲ್ಲ. ಒಂದು ಹಂತದಲ್ಲಿ 83 ರನ್ ಗಳಿಗೆ 9 ವಿಕೆಟ್ ಕಳೆದುಕೊಂಡು ನೂರು ರನ್ ಗಳೊಳಗೆ ಆಲೌಟ್ ಆಗುವ ಭೀತಿಯಲ್ಲಿದ್ದ ಪಾಕಿಸ್ತಾನ ತಂಡಕ್ಕೆ ವಹಾಬ್ ರಿಯಾಜ್ ಆಸರೆಯಾಗುವ ಮೂಲಕ ಪಾಕಿಸ್ತಾನದ ಮಾನ ಕಾಪಾಡಿದರು.

ವೆಸ್ಟ್ ಇಂಡೀಸ್ ಪರ ಓಶಾನೆ ಥಾಮಸ್ [27/4], ಜೇಸನ್ ಹೋಲ್ಡರ್[42/3], ಆ್ಯಂಡ್ರೆ ರಸೆಲ್[4/2] ಹಾಗೂ ಶೆಲ್ಡಾನ್ ಕಾಟ್ರೆಲ್ [18/1] ಮಿಂಚಿನ ಪ್ರದರ್ಶನ ತೋರುವ ಮೂಲಕ ಪಾಕಿಸ್ತಾನ ತಂಡವನ್ನು ಅಲ್ಪ ಮೊತ್ತಕ್ಕೆ ಕಟ್ಟಿಹಾಕಲು ಯಶಸ್ವಿಯಾದರು. 

ಸಂಕ್ಷಿಪ್ತ ಸ್ಕೋರ್: 

ಫಖರ್ ಜಮಾನ್: 22

ಓಶಾನೆ ಥಾಮಸ್: 27/2