ಲಂಡನ್(ಜು.03): ವಿಶ್ವಕಪ್ ಟೂರ್ನಿ ಕೆಲ ಕ್ರಿಕೆಟಿಗರ ಪಾಲಿಗೆ ಸ್ಮರಣೀಯವಾದರೆ ಕೆಲವರಿಗೆ ನುಂಗಲಾರದ ತುತ್ತಾಗಿದೆ. ನಿಧಾನಗತಿಯ ಬ್ಯಾಟಿಂಗ್‌ನಿಂದ ಸತತ ಟೀಕೆ ಎದುರಿಸುತ್ತಿರುವ ಹಿರಿಯ ಕ್ರಿಕೆಟಿಗ ಎಂ.ಎಸ್.ಧೋನಿಗೆ ಈ ವಿಶ್ವಕಪ್ ಟೂರ್ನಿ ಹೆಚ್ಚಿನ ಸಿಹಿ ನೀಡಿಲ್ಲ. ಧೋನಿ ಬ್ಯಾಟಿಂಗ್ ಕುರಿತು ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್ ವಿರೋಧ ವ್ಯಕ್ತಪಡಿಸಿದ್ದರು. ಇದೀಗ ಧೋನಿ ವಿಶ್ವಕಪ್ ಟೂರ್ನಿ ಬಳಿಕ ಎಲ್ಲಾ ಮಾದರಿ ಕ್ರಿಕೆಟ್‌ಗೆ ವಿದಾಯ ಹೇಳಲು ನಿರ್ಧರಿಸಿದ್ದಾರೆ ಎಂದು ವರದಿಯಾಗುತ್ತಿದೆ. ಆದರೆ ಇದು ಊಹಾಪೋಹ, ಈ ಕುರಿತು ಧೋನಿ ಯಾವುದೇ ಅಧೀಕೃತ ಹೇಳಿಕೆ ನೀಡಿಲ್ಲ. ಇತ್ತ ಬಿಸಿಸಿಐ ಮೂಲಗಳು ಈ ವರದಿಯನ್ನು ನಿರಾಕರಿಸಿದೆ.

ಇದನ್ನೂ ಓದಿ: ವಿಶ್ವಕಪ್‌ನಿಂದ ಕಡೆಗಣನೆ; ಕ್ರಿಕೆಟ್‌ಗೆ ಅಂಬಾಟಿ ರಾಯುಡು ವಿದಾಯ?

2014ರಲ್ಲಿ ದಿಢೀರ್ ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಹೇಳಿದ್ದ ಧೋನಿ, 2017ರ ಜನವರಿಯಲ್ಲಿ ಏಕದಿನ ಹಾಗೂ ಟಿ20 ನಾಯಕತ್ವದಿಂದ ಹಿಂದೆ ಸರಿದಿದ್ದರು. ಇದೀಗ ನಿಗದಿತ ಓವರ್ ಕ್ರಿಕೆಟ್‌ಗೂ ದಿಢೀರ್ ನಿವೃತ್ತಿ ಹೇಳಲಿದ್ದಾರೆ ಎನ್ನಲಾಗುತ್ತಿದೆ. ಬಾಂಗ್ಲಾದೇಶ ವಿರುದ್ಧದ ಪಂದ್ಯವೇ ಧೋನಿ ಕೊನೆಯ ಪಂದ್ಯ ಆಗಲಿದೆ ಅನ್ನೋ ಮಾತುಗಳು ಕೇಳಿಬರುತ್ತಿದೆ. ಈಗಾಗಲೆ ಟೀಂ ಇಂಡಿಯಾ ಸೆಮಿಫೈನಲ್ ಪ್ರವೇಶಿಸಿರೋ ಕಾರಣ ಧೋನಿಗೆ ವಿಶ್ರಾಂತಿ ನೀಡೋ ಸಾಧ್ಯತೆ ಇದೆ ಅನ್ನೋ ಸುದ್ಧಿ ಹರಡುತ್ತಿದೆ.

ಇದನ್ನೂ ಓದಿ: ಧೋನಿ-ಜಾಧವ್ ವಿರುದ್ಧ ಕಿಡಿಕಾರಿದ ದಾದಾ..!

ಧೋನಿ ನಿವೃತ್ತಿ ಕುರಿತು ಯಾರು ಊಹಿಸಲು ಸಾಧ್ಯವಿಲ್ಲ. 2014ರಲ್ಲಿ ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತಿ ಹೇಳೋ ಸಂದರ್ಭದಲ್ಲೂ ಬಿಸಿಸಿಐ ಅಥವಾ  ಆತ್ಮೀಯ ಕ್ರಿಕೆಟಿಗರಿಗೆ ಯಾವುದೆ ಮಾಹಿತಿ ಇರಲಿಲ್ಲ. ಸುದ್ಧಿಗೋಷ್ಠಿಯಲ್ಲಿ ಧೋನಿ ನಿವೃತ್ತಿ ಘೋಷಿಸಿ ಅಚ್ಚರಿ ನೀಡಿದ್ದರು. ಇನ್ನು ನಾಯಕತ್ವ ತ್ಯಜಿಸಿದಾಗಲೂ ಬಿಸಿಸಿಐಗೆ ಯಾವುದೇ ಮಾಹಿತಿ ಇರಲಿಲ್ಲ. ಹೀಗಾಗಿ ಧೋನಿ ನಿವೃತ್ತಿ ಸುಳಿವು ಯಾರಿಗೂ ಬಿಟ್ಟುಕೊಡುವುದಿಲ್ಲ.