ವೆಸ್ಟ್ ಇಂಡೀಸ್ VS ಶ್ರೀಲಂಕಾ ಪಂದ್ಯದ ಸ್ಕೋರ್ ಎಷ್ಟು?

ಬರ್ಮಿಂಗ್‌ಹ್ಯಾಮ್(ಜು.01): ವಿಶ್ವಕಪ್ ಟೂರ್ನಿಯಲ್ಲಿ ಟೀಂ ಇಂಡಿಯಾ ಗೆಲುವಿನ ನಾಗಾಲೋಟಕ್ಕೆ ಬ್ರೇಕ್ ಬಿದ್ದಿದೆ.  ಇಂಗ್ಲೆಂಡ್ ವಿರುದ್ಧದ ಲೀಗ್ ಪಂದ್ಯದಲ್ಲಿ ಭಾರತ ಸೋಲು ಅನುಭವಿಸಿತ್ತು. ಈ ಮೂಲಕ 2019ರ ವಿಶ್ವಕಪ್ ಟೂರ್ನಿಯಲ್ಲಿ ಮೊದಲ ಸೋಲಿನ ಕಹಿ ಅನುಭವಿಸಿದೆ. ಟೀಂ ಇಂಡಿಯಾದ ಸೋಲಿಗೆ ಪರ ವಿರೋಧಗಳು ಕೇಳಿ ಬರುತ್ತಿದೆ. ಭಾರತದ ಸೋಲಿಗೆ ಪಾಕಿಸ್ತಾನ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದರೆ, ಇದೀಗ  ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಸೋಲಿಗೆ ಕಾರಣ ನೀಡಿದ್ದಾರೆ.

ಇದನ್ನೂ ಓದಿ: ಭಾರತೀಯ ಕ್ರಿಕೆಟಿಗರ ಕ್ರೀಡಾ ಸ್ಫೂರ್ತಿ ಪ್ರಶ್ನಿಸಿದ ವಕಾರ್ ಯೂನಿಸ್‌ಗೆ ಮಂಗಳಾರತಿ!

ಇಂಗ್ಲೆಂಡ್ ವಿರುದ್ಧದ ಭಾರತ ತಂಡದ ಸೋಲಿಗೆ ಹೊಸ ಜರ್ಸಿ ಕಾರಣ ಎಂದಿದ್ದಾರೆ. ಇದನ್ನೂ  ಮೂಢನಂಬಿಕೆ ಎನ್ನುತ್ತೀರೋ ಗೊತ್ತಿಲ್ಲ. ಭಾರತದ ಗೆಲುವಿನ ನಾಗಾಲೋಟಕ್ಕೆ ಬ್ರೇಕ್ ಹಾಕಿದ್ದು ಹೊಸ ಜರ್ಸಿ ಎಂದು ಮೆಹಬೂಬ್ ಮುಫ್ತಿ ಟ್ವೀಟ್ ಮಾಡಿದ್ದಾರೆ. ಟೀಂ ಇಂಡಿಯಾ ಆರಂಭಿಕ 6 ಪಂದ್ಯಗಳಲ್ಲಿ ಬ್ಲೂ ಜರ್ಸಿ ಹಾಕಿಕೊಂಡಿತ್ತು. ಆದರೆ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಐಸಿಸಿ ನಿಯಮದಂತೆ  ಕಿತ್ತಳೆ ಬಣ್ಣದ ಜರ್ಸಿ ಹಾಕಿತ್ತು.

 

ಇದನ್ನೂ ಓದಿ: ವಿಶ್ವಕಪ್ ಟೂರ್ನಿಯಿಂದ ವಿಜಯ್ ಶಂಕರ್ ಔಟ್; ಮಯಾಂಕ್ ಅಗರ್‌ವಾಲ್‌ಗೆ ಚಾನ್ಸ್..?

ಟೀಂ ಇಂಡಿಯಾ ಕಿತ್ತಳೆ ಬಣ್ಣದ ಜರ್ಸಿಗೆ ಕಾಂಗ್ರೆಸ್ ಸೇರಿದಂತೆ ಹಲವು ರಾಜಕೀಯ ಪಕ್ಷ, ಮುಖಂಡರು ವಿರೋಧ ವ್ಯಕ್ತಪಡಿಸಿದ್ದರು. ಕೇಂದ್ರ ಸರ್ಕಾರ ಟೀಂ ಇಂಡಿಯಾವನ್ನು ಕೇಸರಿ ಮಯ ಮಾಡುತ್ತಿದೆ ಎಂದು ಆರೋಪಿಸಿದ್ದರು. ಇದೀಗ ಮೆಹಬೂಬಾ ಮುಫ್ತಿ ಟೀಂ ಇಂಡಿಯಾ ಜರ್ಸಿ ವಿವಾದಕ್ಕೆ ಹೊಸ ತಿರುವು ನೀಡಿದ್ದಾರೆ. ಸೋಲಿಗೆ ಜರ್ಸಿ ಕಾರಣ ಅನ್ನೋ ಮೂಲಕ ಕಿತ್ತಳೆ ಬಣ್ಣದ ಜರ್ಸಿ ವಿರುದ್ಧ ಪರೋಕ್ಷವಾಗಿ ಕಿಡಿ ಕಾರಿದ್ದಾರೆ.