ವೆಸ್ಟ್ ಇಂಡೀಸ್ VS ಶ್ರೀಲಂಕಾ ಪಂದ್ಯದ ಸ್ಕೋರ್ ಎಷ್ಟು?

ಬರ್ಮಿಂಗ್‌ಹ್ಯಾಮ್(ಜು.01): ವಿಶ್ವಕಪ್ ಟೂರ್ನಿಯಲ್ಲಿ ಗೆಲುವಿನ ನಾಗಾಲೋಟದಲ್ಲಿದ್ದ ಟೀಂ ಇಂಡಿಯಾ, ಆತಿಥೇಯ ಇಂಗ್ಲೆಂಡ್ ವಿರುದ್ಧ ಮುಗ್ಗರಿಸಿದೆ. ಇಂಗ್ಲೆಂಡ್ ವಿರುದ್ದ ಟೀಂ ಇಂಡಿಯಾ ಗೆಲುವು ಪಾಕಿಸ್ತಾನ, ಬಾಂಗ್ಲಾದೇಶ ಹಾಗೂ ಶ್ರೀಲಂಕಾ ತಂಡಕ್ಕೆ ಪ್ರಮುಖವಾಗಿತ್ತು. ಆದರೆ ಕೊಹ್ಲಿ ಸೈನ್ಯ ಗೆಲುವಿನ ಗೆರೆ ದಾಟಲಿಲ್ಲ. ಇದು ಪಾಕಿಸ್ತಾನ ಹಾಗೂ ಬಾಂಗ್ಲಾದೇಶ ಅಭಿಮಾನಿಗಳನ್ನು ಕೆರಳಿಸಿದೆ. ಇದರ ಜೊತೆ ಪಾಕಿಸ್ತಾನ ಮಾಜಿ ನಾಯಕ ವಕಾರ್ ಯೂನಿಸ್ ಭಾರತದ ಸೋಲನ್ನು ಪ್ರಶ್ನಿಸೋ ವೇಳೆ, ಟೀಂ ಇಂಡಿಯಾ ಕ್ರಿಕೆಟಿಗರ ಕ್ರೀಡಾ ಸ್ಫೂರ್ತಿಯನ್ನು ಪ್ರಶ್ನಿಸಿ ಮಂಗಳಾರತಿ ಮಾಡಿಸಿಕೊಂಡಿದ್ದಾರೆ. 

ಇದನ್ನೂ ಓದಿ: ವಿಶ್ವಕಪ್‌ನಿಂದ ಪಾಕ್ ಹೊರಗಿಡಲು ಭಾರತ ಬೇಕಂತಲೇ ಸೋಲು ಕಾಣುತ್ತೆ: ಅಲಿ!

ಇಂಗ್ಲೆಂಡ್ ವಿರುದ್ದ ಟೀಂ ಇಂಡಿಯಾ ಸೋಲಿನಿಂದ ಪಾಕಿಸ್ತಾನದ ಸೆಮಿಫೈನಲ್ ಹಾದಿ ಮತ್ತಷ್ಟು ಕಠಿಣವಾಗಿದೆ. ಇದರಿಂದ ರೊಚ್ಚಿಗೆದ್ದ ವಕಾರ್ ಯೂನಿಸ್ ಟ್ವೀಟ್ ಮೂಲಕ  ಟೀಂ ಇಂಡಿಯಾ ಸೋಲನ್ನು ಪ್ರಶ್ನಿಸಿದ್ದಾರೆ. ಇದು ನಿಮ್ಮ ಪ್ರದರ್ಶನವಲ್ಲ, ನಿಮ್ಮ ಕೆಲಸ ನಿಮ್ಮ ವ್ಯಕ್ತಿತ್ವವನ್ನು  ತಿಳಿಸುತ್ತೆ. ನನಗೆ ಪಾಕಿಸ್ತಾನ ಸೆಮಿಫೈಲನ್ ಪ್ರವೇಶಿಸುತ್ತೋ? ಇಲ್ಲವೋ ಅನ್ನೋದು ಮುಖ್ಯವಲ್ಲ. ಆದರೆ ಭಾರತ -ಇಂಗ್ಲೆಂಡ್ ಪಂದ್ಯದಲ್ಲಿ ಕ್ರೀಡಾ ಸ್ಫೂರ್ತಿ ಸಾಬೀತು ಪಡಿಸುವಲ್ಲಿ ಕೆಲ ಚಾಂಪಿಯನ್ ಆಟಗಾರರು ವಿಫಲರಾಗಿದ್ದಾರೆ ಎಂದು ವಕಾರ್ ಯೂನಿಸ್ ಟ್ವೀಟ್ ಮಾಡಿದ್ದಾರೆ. 

 

ಇದನ್ನೂ ಓದಿ: ವಿಶ್ವಕಪ್ ಟೂರ್ನಿಯಿಂದ ವಿಜಯ್ ಶಂಕರ್ ಔಟ್; ಮಯಾಂಕ್ ಅಗರ್‌ವಾಲ್‌ಗೆ ಚಾನ್ಸ್..?

ವಕಾರ್ ಯೂನಿಸ್ ಟ್ವೀಟ್ ಮಾಡಿದ ಬೆನ್ನಲ್ಲೇ ಟೀಂ ಇಂಡಿಯಾ ಅಭಿಮಾನಿಗಳು ತಕ್ಕ ತಿರುಗೇಟು ನೀಡಿದ್ದಾರೆ. ಭಾರತೀಯ ಕ್ರಿಕೆಟಿಗರ ಕ್ರೀಡಾಸ್ಫೂರ್ತಿ ಪ್ರಶ್ನಿಸೋ ಮೊದಲು, ನಿಮ್ಮ ತಂಡದ ಪ್ರದರ್ಶನ ಹಾಗೂ ಪಾಕಿಸ್ತಾನ ತಂಡದ ಕ್ರೀಡಾಸ್ಫೂರ್ತಿಯನ್ನು ಪರೀಕ್ಷಿಸಿ ಎಂದಿದ್ದಾರೆ. ಭಾರತ ದಿಟ್ಟ ಹೋರಾಟ ನೀಡಿದೆ. ಆದರೆ ಗೆಲುವು ನಮ್ಮದಾಗಲಿಲ್ಲ. ಹಾಗಂತ ಟೀಂ ಇಂಡಿಯಾ ಕ್ರಿಕೆಟಿಗರ ಕ್ರೀಡಾಸ್ಫೂರ್ತಿಯನ್ನು ಪ್ರಶ್ನಿಸಿದರೆ ಎಚ್ಚರ ಎಂದಿದ್ದಾರೆ.