ವಿಶ್ವಕಪ್ ಟೂರ್ನಿಯ ಹಿನ್ನಲೆಯಲ್ಲಿ ಟೀಂ ಇಂಡಿಯಾ ಕೋಚ್ ರವಿಶಾಸ್ತ್ರಿ ಹಾಗೂ ತರ ಸಹಾಯಕ ಸಿಬ್ಬಂದಿಯ ಗುತ್ತಿಗೆ ಅವಧಿಯನ್ನು 45 ದಿನಗಳ ಮಟ್ಟಿಗೆ ವಿಸ್ತರಿಸಲಾಗಿದೆ. ಈ ಕುರಿತಾದ ಒಂದು ವರದಿ ಇಲ್ಲಿದೆ ನೋಡಿ...
ನವದೆಹಲಿ(ಜೂ.13): ಭಾರತ ಕ್ರಿಕೆಟ್ ತಂಡದ ಪ್ರಧಾನ ಕೋಚ್ ರವಿಶಾಸ್ತ್ರಿ ಹಾಗೂ ಇತರ ಸಹಾಯಕ ಸಿಬ್ಬಂದಿಯ ಗುತ್ತಿಗೆ ಅವಧಿಯನ್ನು ಸುಪ್ರೀಂ ಕೋರ್ಟ್ ನೇಮಿತ ಬಿಸಿಸಿಐ ಆಡಳಿತ ಸಮಿತಿ 45 ದಿನಗಳ ಕಾಲ ವಿಸ್ತರಿಸಲಿದೆ.
ಇಂಡೋ-ಕಿವೀಸ್ ಪಂದ್ಯಕ್ಕೆ ಮಳೆ ಅಡ್ಡಿಯಾದರೂ ಟ್ರೋಲ್ ಆಗಿದ್ದು ಮಾತ್ರ ಶಾಸ್ತ್ರಿ!
ಏಕದಿನ ವಿಶ್ವಕಪ್ ಬಳಿಕ ಕೋಚ್, ಸಹಾಯಕ ಸಿಬ್ಬಂದಿಯ ಗುತ್ತಿಗೆ ಅವಧಿ ಮುಕ್ತಾಯಗೊಳ್ಳಿದ್ದು, ಕೋಚ್ ಹುದ್ದೆಗೆ ಬಿಸಿಸಿಐ ಹೊಸದಾಗಿ ಸಂದರ್ಶನ ನಡೆಸಲಿದೆ. ರವಿಶಾಸ್ತ್ರಿ ಮತ್ತೆ ಕೋಚ್ ಆಗಲು ಅರ್ಜಿ ಸಲ್ಲಿಸಬಹುದಾಗಿದೆ.
ಅಫ್ರಿದಿ ಕಪಾಳಕ್ಕೆ ಬಾರಿಸಿದ ಮೇಲೆ ಸ್ಪಾಟ್ ಫಿಕ್ಸಿಂಗ್ ಬಾಯ್ಬಿಟ್ಟಿದ ಆಮೀರ್..!
ಸೌರವ್ ಗಂಗೂಲಿ, ಸಚಿನ್ ತೆಂಡುಲ್ಕರ್ ಹಾಗೂ ವಿವಿಎಸ್ ಲಕ್ಷ್ಮಣ್ ನೇತೃತ್ವದ ಕ್ರಿಕೆಟ್ ಸಲಹಾ ಸಮಿತಿಯ ನಿರ್ದೇಶನದ ಮೇರೆಗೆ ಬಿಸಿಸಿಐ ಜುಲೈ 2017ರಲ್ಲಿ ರವಿಶಾಸ್ತ್ರಿಯನ್ನು ಟೀಂ ಇಂಡಿಯಾ ಕೋಚ್ ಆಗಿ ನೇಮಿಸಿತ್ತು.
