ನಾಟಿಂಗ್‌ಹ್ಯಾಮ್(ಜೂ.13): ವಿಶ್ವಕಪ್ ಟೂರ್ನಿಯಲ್ಲಿ ಕ್ರಿಕೆಟ್ ಅಬ್ಬರಕ್ಕಿಂತ ಮಳೆ ಆರ್ಭಟವೇ ಹೆಚ್ಚಾಗುತ್ತಿದೆ. ಇದೀಗ ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ ಪಂದ್ಯಕ್ಕೂ ಮಳೆ ಅಡ್ಡಿಯಾಗಿದೆ. ನಿರಂತರ ಮಳೆಯಿಂದ ಟಾಸ್ ಕೂಡ ನಡೆದಿಲ್ಲ. ಪಂದ್ಯ ಗೆಲ್ಲಲಿ, ಸೋಲಲಿ ಅಥವಾ ರದ್ದಾಗಲಿ, ಪ್ರತಿ ಬಾರಿ ಟ್ರೋಲ್ ಆಗುವುದು ಕೋಚ್ ರವಿ ಶಾಸ್ತ್ರಿ.  ಇದೀಗ ಇಂಡೋ-ಕಿವೀಸ್ ಪಂದ್ಯದಲ್ಲೂ ಶಾಸ್ತ್ರಿ ಟ್ರೋಲ್ ಆಗಿದ್ದಾರೆ.

 

 

ಇದನ್ನೂ ಓದಿ: ಅಫ್ರಿದಿ ಕಪಾಳಕ್ಕೆ ಬಾರಿಸಿದ ಮೇಲೆ ಸ್ಪಾಟ್‌ ಫಿಕ್ಸಿಂಗ್‌ ಬಾಯ್ಬಿಟ್ಟಿದ ಆಮೀರ್..!

ಮಳೆಯಿಂದ ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ ಪಂದ್ಯ ವಿಳಂಬವಾಗಿದೆ. ಇದಕ್ಕೆ ಶಾಸ್ತ್ರಿಯನ್ನು ಟಾರ್ಗೆಟ್ ಮಾಡಲಾಗಿದೆ. ಶಾಸ್ತ್ರಿ ಟ್ರೋಲ್ ಆಗುತ್ತಿರುವುದು ಇದೇ ಮೊದಲ್ಲ. ಟೀಂ ಇಂಡಿಯಾ ಪ್ರದರ್ಶನ, ಫಲಿತಾಂಶದ ಕುರಿತು ಅತೀ ಹೆಚ್ಚು  ಬಾರಿ ರವಿ ಶಾಸ್ತ್ರಿ ಟ್ರೋಲ್ ಆಗಿದ್ದಾರೆ.

ಇದನ್ನೂ ಓದಿ: ಗೆಲುವಿನ ಬಳಿಕ ಆಸೀಸ್ ಅಭಿಮಾನಿಗೆ ಸರ್ಪ್ರೈಸ್ ಗಿಫ್ಟ್ ನೀಡಿದ ವಾರ್ನರ್!

ಇದರೊಂದಿಗೆ ಐಸಿಸಿ, ಎಂ.ಎಸ್.ಧೋನಿ ಗ್ಲೌಸ್ ಕುರಿತು ತಲೆಕೆಡಿಸಿಕೊಳ್ಳೋದಕ್ಕಿಂತ ಮಳೆ ಕುರಿತು ತೆಲೆಕೆಡಿಸಿಕೊಂಡಿದ್ದರೆ ಈ ಪರಿಸ್ಥಿತಿ ಬರುತ್ತಿರಲಿಲ್ಲ ಎಂದು ಟ್ರೋಲ್ ಮಾಡಿದ್ದಾರೆ.