ಸೌಥಾಂಪ್ಟನ್(ಜೂ.20): ವಿಶ್ವಕಪ್ ಟೂರ್ನಿಯಲ್ಲಿ ಅದ್ಭುತ ಪ್ರದರ್ಶನದ ಮೂಲಕ ಮುನ್ನಗ್ಗುತ್ತಿರು ಟೀಂ ಇಂಡಿಯಾ ಇದೀಗ ಅಫ್ಘಾನಿಸ್ತಾನ ವಿರುದ್ಧದ ಪಂದ್ಯಕ್ಕೆ ಅಭ್ಯಾಸ ನಡೆಸುತ್ತಿದೆ. ಬದ್ಧವೈರಿ ಪಾಕಿಸ್ತಾನ ವಿರುದ್ಧದ ಭರ್ಜರಿ ಗೆಲುವಿನ ಬಳಿಕ  ಟೀಂ ಇಂಡಿಯಾ ಕ್ರಿಕೆಟಿಗರು ಹೇರ್ ಸ್ಟೈಲ್ ಬದಲಿಸಿದ್ದಾರೆ. ವಿಶೇಷ ಅಂದರೆ ಎಲ್ಲರೂ ಒಂದೇ ರೀತಿ ಹೇರ್ ಸ್ಟೈಲ್ ಮಾಡಿಸಿಕೊಂಡಿದ್ದಾರೆ.

 

ಇದನ್ನೂ ಓದಿ: ವಿಶ್ವಕಪ್ 2019: ಸೆಮಿಫೈನಲ್ ಪ್ರವೇಶಿಸೋ ತಂಡ ಯಾವುದು?

ಪಾಕಿಸ್ತಾನ ಪಂದ್ಯದ ಬಳಿಕ  ಅಫ್ಘಾನಿಸ್ತಾನ ಪಂದ್ಯಕ್ಕೆ 5 ದಿನಗಳ ಅಂತರವಿದೆ. ಹೀಗಾಗಿ ರಿಲಾಕ್ಸ್ ಮೂಡ್‌ಗೆ ಜಾರಿರುವ ಟೀಂ ಇಂಡಿಯಾ ಹೊಸ ಹೇರ್ ಸ್ಟೈಲ್ ಮಾಡಿಸಿಕೊಂಡು ಮಿಂಚುತ್ತಿದೆ. ನಾಯಕ ವಿರಾಟ್ ಕೊಹ್ಲಿ, ಎಂ,ಎಸ್.ಧೋನಿ, ಹಾರ್ದಿಕ್ ಪಾಂಡ್, ಯಜುವೇಂದ್ರ ಚಹಾಲ್ ಸೇರಿದಂತೆ ಟೀಂ ಇಂಡಿಯಾ ಕ್ರಿಕೆಟಿಗರು ನೂತನ ಹೇರ್‌ಸ್ಟೈಲ್ ಮಾಡಿಸಿಕೊಂಡಿದ್ದಾರೆ. 

 

ಇದನ್ನೂ ಓದಿ: ಅಯ್ಯೋ ಪಾಪ: ಟ್ವೀಟ್ ಮಾಡಿ ಕೆಟ್ಟ ರಾಯುಡು!

ಖ್ಯಾತ ಹೇರ್‌ಸ್ಟೈಲ್ ವಿನ್ಯಾಸಕಾರ ಅಲಿಂ ಹಕೀಮ್ ಟ್ವಿಟರ್ ಖಾತೆಯಲ್ಲಿ ಟೀಂ ಇಂಡಿಯಾ ಕ್ರಿಕೆಟಿಗರ ನೂತನ ಹೇರ್ ಸ್ಟೈಲ್ ಕುರಿತು ಬೆಳುಕು ಚೆಲ್ಲಿದ್ದಾರೆ. ಸೈಡ್ ಫುಲ್ ಟ್ರಿಮ್ ಮಾಡಿಸಿಕೊಂಡು,  ಟಾಪ್ ಹೇರ್ ಲಾಂಗ್ ಬಿಟ್ಟಿದ್ದಾರೆ. ಟೀಂ ಇಂಡಿಯಾದಲ್ಲಿ ಹೇರ್‌ಸ್ಟೈಲ್ ಹೊಸದಲ್ಲ. ಎಂ.ಎಸ್.ಧೋನಿಯಿಂದ ಆರಂಭಗೊಂಡ  ಹೇರ್‌ಸ್ಟೈಲ್ ಮಾಡೆಲಿಂಗ್ ಬಳಿಕ ವಿರಾಟ್ ಕೊಹ್ಲಿ, ಕೆಎಲ್ ರಾಹುಲ್ ಇದೀಗ ಹಾರ್ದಿಕ್ ಪಾಂಡ್ಯ ಮುಂದುವರಿಸಿಕೊಂಡು ಹೋಗುತ್ತಿದ್ದಾರೆ.