ನಾಟಿಂಗ್‌ಹ್ಯಾಮ್‌[ಜೂ.15]: ಭಾರತ ಕ್ರಿಕೆಟ್‌ ತಂಡದ ಆರಂಭಿಕ ಬ್ಯಾಟ್ಸ್‌ಮನ್‌ ಶಿಖರ್‌ ಧವನ್‌ ಸಮಯದ ವಿರುದ್ಧ ಹೋರಾಟ ಆರಂಭಿಸಿದ್ದು ಕೈಬೆರಳು ಮುರಿದಿದ್ದರೂ ಜಿಮ್‌ನಲ್ಲಿ ಬೆವರು ಹರಿಸುತ್ತಿದ್ದಾರೆ. 

ಟೀಂ ಇಂಡಿಯಾಗೆ ಬಿಗ್ ಶಾಕ್, ಶತಕವೀರ ವಿಶ್ವಕಪ್ ಟೂರ್ನಿಯಿಂದಲೇ ಔಟ್

ಆಸ್ಪ್ರೇಲಿಯಾ ವಿರುದ್ಧದ ಪಂದ್ಯದ ವೇಳೆ ಎಡಗೈ ಹೆಬ್ಬರಳಿನ ಗಾಯಕ್ಕೆ ತುತ್ತಾದ ಧವನ್‌ಗೆ ಗುಣಮುಖರಾಗಲು ತಂಡದ ಆಡಳಿತದಿಂದ 10 ರಿಂದ 12 ದಿನಗಳ ಸಮಯ ಸಿಕ್ಕಿದೆ. ಹೀಗಾಗಿ ಫಿಟ್ನೆಸ್‌ ಕಾಯ್ದುಕೊಳ್ಳುವ ಸಲುವಾಗಿ ಧವನ್‌ ಕೈಗೆ ಪ್ಲಾಸ್ಟರ್‌ ಹಾಕಿಕೊಂಡೇ ಜಿಮ್‌ಗಿಳಿದಿದ್ದಾರೆ. ತಾವು ಕಸರತ್ತು ಮಾಡುತ್ತಿರುವ ವಿಡಿಯೋವನ್ನು ಟ್ವೀಟರ್‌ನಲ್ಲಿ ಹಾಕಿರುವ ಧವನ್‌, ‘ಇಂತಹ ಪರಿಸ್ಥಿತಿಯನ್ನು ನಿದ್ದೆಯಿಲ್ಲದ ರಾತ್ರಿಗಳನ್ನಾಗಿ ಮಾಡಿಕೊಳ್ಳಬಹುದು ಇಲ್ಲವೇ ಪುಟಿದೇಳಲು ಅವಕಾಶವಾಗಿ ಬಳಸಿಕೊಳ್ಳಬಹುದು. ನಾನು ಗುಣಮುಖನಾಗಲೆಂದು ಹಾರೈಸಿದ ಪ್ರತಿಯೊಬ್ಬರಿಗೂ ಧನ್ಯವಾದ’ ಎಂದು ಸಂದೇಶ ಬರೆದಿದ್ದಾರೆ. ಮುಂದಿನ ವಾರ ಧವನ್‌ ಫಿಟ್ನೆಸ್‌ ಪರೀಕ್ಷೆ ನಡೆಸಲಾಗುತ್ತದೆ ಎಂದು ತಂಡದ ಮೂಲಗಳು ತಿಳಿಸಿವೆ.

ಧವನ್‌ಗೆ ಗಾಯ; ಮತ್ತೋರ್ವ ಡೆಲ್ಲಿ ಕ್ರಿಕೆಟಿಗನಿಗೆ ಹೊಡಿತು ಜಾಕ್‌ಪಾಟ್

ಆಸ್ಟ್ರೇಲಿಯಾ ವಿರುದ್ಧ ನಡೆದ ಪಂದ್ಯದಲ್ಲಿ ನೇಥನ್ ಕೌಲ್ಟರ್ ನೀಲ್ ಬೌಲಿಂಗ್’ನಲ್ಲಿ ಧವನ್ ಎಡಗೈ ಹೆಬ್ಬರಳಿನ ಗಾಯಕ್ಕೆ ತುತ್ತಾಗಿದ್ದರು. ಗಾಯದ ಹೊರತಾಗಿಯೂ ಬ್ಯಾಟಿಂಗ್ ನಡೆಸಿದ ಧವನ್ 109 ಎಸೆತಗಳಲ್ಲಿ 117 ರನ್ ಸಿಡಿಸಿದ್ದರು. ಈ ಪಂದ್ಯವನ್ನು ಭಾರತ 36 ರನ್’ಗಳ ಅಂತರದಲ್ಲಿ ಜಯಭೇರಿ ಬಾರಿಸಿತ್ತು. ಈ ಮೂಲಕ 2015ರ ಏಕದಿನ ವಿಶ್ವಕಪ್ ಟೂರ್ನಿಯ ಸೆಮಿಫೈನಲ್’ನಲ್ಲಿನ ಸೋಲಿಗೆ ಸೇಡು ತೀರಿಸಿಕೊಂಡಿತು.