ಲಂಡನ್(ಜು.05): ವಿಶ್ವಕಪ್ ಟೂರ್ನಿಯಲ್ಲಿ ಅದ್ಭುತ ಪ್ರದರ್ಶನ ಮೂಲದ  ಸೆಮಿಫೈನಲ್  ಪ್ರವೇಶಿಸಿರುವ ಆಸ್ಟ್ರೇಲಿಯಾ ಅಂತಿಮ ಲೀಗ್ ಪಂದ್ಯದಲ್ಲಿ ಸೌತ್ ಆಫ್ರಿಕಾ ತಂಡವನ್ನ ಎದುರಿಸುತ್ತಿದೆ. ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಮುಂದುವರಿಯಲು ಆಸೀಸ್‌ಗೆ ಈ ಪಂದ್ಯ ಪ್ರಮುಖವಾಗಿದೆ. ಜು.06 ರಂದು ಆಸ್ಟ್ರೇಲಿಯಾ ಹಾಗೂ ಸೌತ್ ಆಫ್ರಿಕಾ ಮುಖಾಮುಖಿಯಾಗುತ್ತಿದೆ. ಇದರ ಬೆನ್ನಲ್ಲೇ ಆಸ್ಟ್ರೇಲಿಯಾ ಬ್ಯಾಟ್ಸ್‌ಮನ್ ಶಾನ್ ಮಾರ್ಶ್ ಇಂಜುರಿಯಿಂದ ಹೊರಬಿದ್ದಿದ್ದಾರೆ.

ಇದನ್ನೂ ಓದಿ: ಮಾತು ಉಳಿಸಿಕೊಂಡ ಕಿಂಗ್ ಕೊಹ್ಲಿ; ಮ್ಯಾಚ್ ನೊಡಲು ರೆಡಿಯಾದ 87ರ ಅಜ್ಜಿ..!

ಅಭ್ಯಾಸದ ವೇಳೆ ಶಾನ್ ಮಾರ್ಶ್ ಕೈಗೆ ಗಾಯವಾಗಿದೆ. ಸೌತ್ ಆಫ್ರಿಕಾ ವಿರುದ್ಧದ ಅಂತಿಮ ಲೀಗ್ ಪಂದ್ಯಕ್ಕಾಗಿ ಆಸ್ಟ್ರೇಲಿಯಾ ಅಭ್ಯಾಸ ಆರಂಭಿಸಿತು. ನೆಟ್ಸ್‌ನಲ್ಲಿ ಬ್ಯಾಟಿಂಗ್ ಮಾಡುತ್ತಿದ್ದ ಶಾನ್ ಮಾರ್ಶ್ ಇಂಜುರಿಗೆ ತುತ್ತಾಗಿದ್ದಾರೆ.  ಪ್ಯಾಟ್  ಕಮಿನ್ಸ್ ಎಸೆತದಲ್ಲಿ ಕೈಗೆ ಗಾಯ ಮಾಡಿಕೊಂಡ ಶಾನ್ ಮಾರ್ಶ್, ವಿಶ್ವಕಪ್ ಟೂರ್ನಿಯಿಂದ ಹೊರಬಿದ್ದಿದ್ದಾರೆ.  ಶಾನ್ ಮಾರ್ಶ್ ಬದಲು ಪೀಟರ್‌ಹ್ಯಾಂಡ್ಸ್‌ಕಾಂಬ್‌ಗೆ ಅವಕಾಶ ನೀಡಲಾಗಿದೆ. 

ಇದನ್ನೂ ಓದಿ: ಧೋನಿ ಪದೇ ಪದೇ ಏಕೆ ಬ್ಯಾಟ್ ಲೋಗೋ ಬದಲಿಸುತ್ತಿದ್ದಾರೆ..?

ಅಭ್ಯಾಸದ ವೇಳೆ ಗ್ಲೆನ್ ಮ್ಯಾಕ್ಸ್‌ವೆಲ್ ಕೂಡ ಗಾಯಗೊಂಡಿದ್ದಾರೆ. ಮಿಚೆಲ್ ಸ್ಟಾರ್ಕ್ ಎಸೆತದಲ್ಲಿ ಮ್ಯಾಕ್ಸ್‌ವೆಲ್ ಗಾಯಗೊಂಡರು. ತಕ್ಷಣವೇ ಮ್ಯಾಕ್ಸ್‌ವೆಲ್‌ರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಕಾನಿಂಗ್ ಬಳಿಕ ಮ್ಯಾಕ್ಸ್‌ವೆಲ್ ಗಾಯ ಗಂಭೀರವಾಗಿಲ್ಲ ಎಂದು ವೈದ್ಯರು ಹೇಳಿದರು. ಹೀಗಾಗಿ ಮ್ಯಾಕ್ಸ್‌ವೆಲ್ ಸೌತ್ ಆಫ್ರಿಕಾ ವಿರುದ್ಧದ ಪಂದ್ಯಕ್ಕೆ ಲಭ್ಯರಿದ್ದಾರೆ ಎಂದು ಕೋಚ್ ಜಸ್ಟಿನ್ ಲ್ಯಾಂಗರ್ ಹೇಳಿದ್ದಾರೆ.