ಭಾರತ-ಇಂಗ್ಲೆಂಡ್ ಸ್ಕೋರ್ ಎಷ್ಟು?

ಲೀಡ್ಸ್(ಜೂ.30): ಟೀಂ ಇಂಡಿಯಾ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಎಂ.ಎಸ್.ಧೋನಿ ಹಲವು ಯುವ ಕ್ರಿಕೆಟಿಗರಿಗೆ ರೋಲ್ ಮಾಡೆಲ್. ಇತರ ತಂಡದ ವಿಕೆಟ್ ಕೀಪರ್‌ ಧೋನಿಯನ್ನು ಅನುಕರಿಸಲು ಪ್ರಯತ್ನಿಸುತ್ತಾರೆ. ಇದೀಗ ವಿಶ್ವಕಪ್ ಟೂರ್ನಿಯಲ್ಲಿ ಪಾಕಿಸ್ತಾನ ವಿಕೆಟ್ ಕೀಪರ್ ಸರ್ಫರಾಜ್ ಅಹಮ್ಮದ್, ಧೋನಿ ಅನುಕರಿಸೋ ಪ್ರಯತ್ನ ಮಾಡಿ ವಿಫಲರಾಗಿದ್ದಾರೆ.

ಇದನ್ನೂ ಓದಿ: ವಿಶ್ವಕಪ್ 2019; ಆಫ್ಘನ್ ಮಣಿಸಿ ನಾಲ್ಕನೇ ಸ್ಥಾನಕ್ಕೇರಿದ ಪಾಕ್

ಅಫ್ಘಾನಿಸ್ತಾನ ಹಾಗೂ ಪಾಕಿಸ್ತಾನ ನಡುವಿನ ಪಂದ್ಯದಲ್ಲಿ ಸರ್ಫರಾಜ್ ಅಹಮ್ಮದ್ ಅನುಕರಣೆ ಮಾಡಲು ಹೋಗಿ ಎಡವಿದ್ದಾರೆ. ಆಫ್ಘಾನಿಸ್ತಾನ ಇನ್ನಿಂಗ್ಸ್‌ನ ಅಂತಿಮ ಎಸೆತದಲ್ಲಿ ಮುಜೀಪ್ ಯುಆರ್ ರಹಮಾನ್ ಲಾಂಗ್ ಆನ್‌ಗೆ ಬ್ಯಾಟ್ ಬೀಸಿದರು. 2 ನೇ ರನ್ ಓಡಿದ ಮಜೀಬ್ ರನೌಟ್ ಮಾಡೋ ಅವಕಾಶ ಸರ್ಫರಾಜ್‌ಗಿತ್ತು. ಆದರೆ ಥ್ರೋ ಸರಿಯಾಗಿ ಬಂದಿಲ್ಲ. ಹೀಗಾಗಿ ಧೋನಿ ರೀತಿ ರನೌಟ್ ಮಾಡಲು ಹೋದ ಸರ್ಫರಾಜ್ ಎಡವಿದ್ದಾರೆ.

 

ಇದನ್ನೂ ಓದಿ: ನೂತನ ಜರ್ಸಿಯಲ್ಲಿ ಟೀಂ ಇಂಡಿಯಾ ಕ್ರಿಕೆಟಿಗರು ಕಂಡಿದ್ದು ಹೀಗೆ!

ರೋಚಕ ಪಂದ್ಯದಲ್ಲಿ ಅಫ್ಘಾನಿಸ್ತಾನ 9 ವಿಕೆಟ್ ನಷ್ಟಕ್ಕೆ 227 ರನ್ ಸಿಡಿಸಿತು. ಇದಕ್ಕುತ್ತರವಾಗಿ ಪಾಕಿಸ್ತಾನ 49.4 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು ಗೆಲುವು ಸಾಧಿಸಿತು. ಈ ಮೂಲಕ ಪಾಕಿಸ್ತಾನ ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೇರಿತು. ಇಷ್ಟೇ ಅಲ್ಲ ಸೆಮಿಫೈನಲ್ ಆಸೆಯನ್ನು ಜೀವಂತವಾಗಿರಿಸಿತು.