ವಿಶ್ವಕಪ್ ಟೂರ್ನಿ ಸೋಲಿನ ಬಳಿಕ ಟೀಂ ಇಂಡಿಯಾದಲ್ಲಿ ಎಲ್ಲವೂ ಸರಿಯಿಲ್ಲ,  ತಂಡದ ಆಯ್ಕೆ ವಿಚಾರದಲ್ಲಿ ರೋಹಿತ್ ಹಾಗೂ ಕೊಹ್ಲಿ ನಡುವೆ ಸಣ್ಣ ಮಸ್ತಾಪವೂ ನಡೆದುಹೋಗಿದೆ ಅನ್ನೋ ಮಾತುಗಳು ಕೇಳಿಬಂದಿದೆ. ಇದಕ್ಕೆ ಪುಷ್ಠಿ ನೀಡುವಂತೆ ಇದೀಗ ಕೊಹ್ಲಿ ಬಳಗದ ಜೊತೆ ತವರಿಗೆ ಆಗಮಿಸಿಬೇಕಿದ್ದ ರೋಹಿತ್ ಶರ್ಮಾ 2 ಮುಂಚಿತವಾಗಿ ತವರು  ತಲುಪಿದ್ದಾರೆ.

ಮುಂಬೈ(ಜು.13): ವಿಶ್ವಕಪ್ ಟೂರ್ನಿಯಿಂದ ಹೊರಬಿದ್ದ ಟೀಂ ಇಂಡಿಯಾ ನಾಳೆ(ಜು.14) ತವರಿಗೆ ಆಗಮಿಸಲಿದೆ. ವಿರಾಟ್ ಕೊಹ್ಲಿ ಸೈನ್ಯ ಆಗಮಿಸೋ ಮುನ್ನವೇ ಉಪನಾಯಕ ರೋಹಿತ್ ಶರ್ಮಾ ತವರಿಗೆ ವಾಪಸ್ಸಾಗಿದ್ದಾರೆ.ಟೀಂ ಇಂಡಿಯಾ ಕ್ರಿಕೆಟಿಗರಿಗಿಂತ ರೋಹಿತ್ 2 ದಿನ ಮುಂಚಿತವಾಗಿ ತವರು ತಲುಪಿದ್ದಾರೆ.

ಇದನ್ನೂ ಓದಿ: ಭಾರತ-ಪಾಕಿಸ್ತಾನ ಪಂದ್ಯದ ಚೆಂಡು ₹1.5 ಲಕ್ಷಕ್ಕೆ ಹರಾಜು!

ವಿರಾಟ್ ಕೊಹ್ಲಿ ನೇತೃತ್ವದ ಭಾರತ ತಂಡ, ನ್ಯೂಜಿಲೆಂಡ್ ವಿರುದ್ಧ ಮುಗ್ಗರಿಸೋ ಮೂಲಕ ಟೂರ್ನಿಗೆ ವಿದಾಯ ಹೇಳಿತು. ಸೋಲು ರೋಹಿತ್ ಶರ್ಮಾಗೆ ತೀವ್ರ ನಿರಾಸೆ ತಂದಿದೆ. ಸೋಲಿನ ಬೆನ್ನಲ್ಲೇ ರೋಹಿತ್ ತವರಿಗೆ ವಾಪಾಸ್ಸಾಗಿದ್ದಾರೆ. ರೋಹಿತ್ ಶರ್ಮಾ, ಪತ್ನಿ ರಿತಿಕಾ ಸಾಜ್ದೆ ಹಾಗೂ ಪುತ್ರಿ ಸಮೈರಾ ಮುಂಬೈ ಅಂತಾರಾಷ್ಟ್ರೀಯ ವಿಮಾನಿ ನಿಲ್ದಾಣಕ್ಕೆ ಆಗಮಿಸಿದರು. 

View post on Instagram

ಇದನ್ನೂ ಓದಿ: ವಿಶ್ವಕಪ್‌ ಸೆಮೀಸ್‌ನಲ್ಲೇ ಸೋಲು: ಕೊಹ್ಲಿ, ಶಾಸ್ತ್ರಿಗೆ ಬಿಸಿಸಿಐ ಚಾಟಿ?

ರೋಹಿತ್ ಆಗಮಿಸೋ ವೇಳೆ ಶರ್ಮಾ ಕುಟುಂಸ್ಥರು ನಿಲ್ದಾಣದಲ್ಲಿ ಹಾಜರಿದ್ದರು. ಬಳಿಕ ನಿಲ್ದಾಣದಿಂದ ನೇರವಾಗಿ ರೋಹಿತ್ ಶರ್ಮಾ ಮನೆಸೇರಿಕೊಂಡರು. ವಿಶ್ವಕಪ್ ಪಂದ್ಯಕ್ಕೆ ತಂಡದ ಆಯ್ಕೆ ವಿಚಾರದಲ್ಲಿ ನಾಯಕ ವಿರಾಟ್ ಕೊಹ್ಲಿ ಹಾಗೂ ಉಪನಾಯಕ ರೋಹಿತ್ ಶರ್ಮಾ ನಡುವೆ ಮನಸ್ತಾಪ ಆಗಿದೆ ಅನ್ನೋ ಮಾತುಗಳು ಕೇಳಿಬಂದಿದೆ. ಇದರ ಬೆನ್ನಲ್ಲೇ ರೋಹಿತ್, ಕೊಹ್ಲಿ ಹಾಗೂ ತಂಡದ ಜೊತೆ ಆಗಮಿಸಿದೆ 2 ದಿನ ಮಂಚಿತವಾಗಿ ತವರಿಗೆ ಬಂದಿಳಿದಿದ್ದಾರೆ. ಇದು ಹಲವು ಅನುಮಾನಗಳಿಗೆ ಕಾರಣವಾಗಿದೆ.

ವಿಶ್ವಕಪ್ ಟೂರ್ನಿಯಲ್ಲಿ ಟೀಂ ಇಂಡಿಯಾ ಸೋಲಿನ ಹಾದಿ ಹಿಡಿಯುತ್ತಿದ್ದಂತೆ ರೋಹಿತ್ ಕಣ್ಣೀರಿಟ್ಟಿದ್ದರು. ಬಳಿಕ ಟ್ವೀಟ್ ಮೂಲಕ ತಮ್ಮ ನೋವನ್ನು ಹಂಚಿಕೊಂಡಿದ್ದರು.