ಸ್ಟೀವ್ ಸ್ಮಿತ್ ವಿರುದ್ದ ಚೀಟರ್ ಚೀಟರ್ ಎಂದು ಕೂಗುತ್ತಿದ್ದ ಭಾರತೀಯ ಅಭಿಮಾನಿಗಳ ವಿರುದ್ಧ ವಿರಾಟ್ ಕೊಹ್ಲಿ ಗರಂ ಆಗಿದ್ದರು. ಇದಕ್ಕೆ ಪಾಕಿಸ್ತಾನ ನಾಯಕ ಸರ್ಫರಾಜ್ ಅಹಮ್ಮದ್ ಪ್ರತಿಕ್ರಿಯೆ ನೀಡಿದ್ದಾರೆ.
ಲಂಡನ್(ಜೂ.12): ವಿಶ್ವಕಪ್ ಟೂರ್ನಿಯಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಕುರಿತು ಎಲ್ಲೆಡೆ ಮೆಚ್ಚುಗೆ ಕೇಳಿಬರುತ್ತಿದೆ. ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಪಂದ್ಯದಲ್ಲಿ ಫೀಲ್ಡಿಂಗ್ ಮಾಡುತ್ತಿದ್ದ ಸ್ಟೀವ್ ಸ್ಮಿತ್‌ಗೆ ಭಾರತೀಯ ಅಭಿಮಾನಿಗಳು ಅಣಕಿಸಿದ್ದರು. ಚೀಟರ್ ಎಂದು ಕೂಗಿದ್ದರು. ಇದಕ್ಕೆ ನಾಯಕ ವಿರಾಟ್ ಕೊಹ್ಲಿ ಅಣಕಿಸೋ ಬದಲು ಬೆಂಬಲಿಸಲು ಸೂಚಿಸಿದ್ದರು. ಇದೀಗ ಈ ಘಟನೆಗೆ ಪಾಕಿಸ್ತಾನ ನಾಯಕ ಸರ್ಫಾರಜ್ ಅಹಮ್ಮದ್ ಸೂಕ್ಷ್ಮ ತಿರುಗೇಟು ನೀಡಿದ್ದಾರೆ.
ಇದನ್ನೂ ಓದಿ: ಪೈಲೆಟ್ ಅಭಿನಂದನ್ ಬಳಸಿ ಪಾಕಿಸ್ತಾನ ಚೀಪ್ ಗಿಮಿಕ್ - ವಿಶ್ವಕಪ್ ಫ್ಯಾನ್ಸ್ ಗರಂ!
ಸ್ಟೀವ್ ಸ್ಮಿತ್‌ಗೆ ಪಾಕಿಸ್ತಾನ ಅಭಿಮಾನಿಗಳು ಚೀಟರ್ ಎಂದು ಕೂಗಿದರೆ, ನಾಯಕನಾಗಿ ಕೊಹ್ಲಿ ರೀತಿ ಮನವಿ ಮಾಡುತ್ತೀರಾ ಎಂದು ಪ್ರಶ್ನೆ ಕೇಳಲಾಗಿತ್ತು. ಇದಕ್ಕೆ ಉತ್ತರಿಸಿದ ಸರ್ಫರಾಜ್, ಪಾಕಿಸ್ತಾನ ಅಭಿಮಾನಿಗಳು ಇತರರಂತಲ್ಲ. ಪಾಕ್ ಅಭಿಮಾನಿಗಳು ಕ್ರಿಕೆಟನ್ನು ಪ್ರೀತಿಸುತ್ತಾರೆ. ಆಟಗಾರರನ್ನು ಪ್ರೀತಿಸುತ್ತಾರೆ. ಹೀಗಾಗಿ ಅಣಕಿಸುವುದಿಲ್ಲ ಎಂದಿದ್ದಾರೆ.
ಇದನ್ನೂ ಓದಿ: ವಿಶ್ವಕಪ್ 2019: ಟೀಂ ಇಂಡಿಯಾದ ಕುಚುಕು ಸ್ನೇಹಿತರ ನಡುವೆ ವಾರ್!
ಸರ್ಫರಾಜ್ ಅಹಮ್ಮದ್, ಭಾರತೀಯರು ಮಾಡಿದ ಹಾಗೇ ಪಾಕಿಸ್ತಾನ ಕ್ರಿಕೆಟ್ ಅಭಿಮಾನಿಗಳು ಮಾಡುವುದಿಲ್ಲ ಎಂದು ಪರೋಕ್ಷವಾಗಿ ಹೇಳಿದ್ದಾರೆ.
