ಮ್ಯಾಂಚೆಸ್ಟರ್(ಜೂ.17):  ಭಾರತ ವಿರುದ್ಧ ವಿಶ್ವಕಪ್ ಲೀಗ್ ಪಂದ್ಯ ಸೋತ ಬೆನ್ನಲ್ಲೇ ಪಾಕಿಸ್ತಾನ ತಂಡ ಮೇಲೆ ಆಕ್ರೋಶ ವ್ಯಕ್ತವಾಗುತ್ತಿದೆ. ಕಳಪೆ ಪ್ರದರ್ಶನ, ಫಿಟ್ನೆಸ್ ಸಮಸ್ಯೆ ತಂಡದ ಗೆಲುವನ್ನೇ ಕಸಿದುಕೊಳ್ಳುತ್ತಿದೆ ಎಂದು ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದೀಗ ಭಾರತ ವಿರುದ್ಧದ ಮಹತ್ವದ ಪಂದ್ಯಕ್ಕೂ ಮುನ್ನ ಪಾಕ್ ಕ್ರಿಕೆಟಿಗರು ತಡರಾತ್ರಿವರೆಗೂ ಪಾರ್ಟಿ ಮಾಡಿದ್ದಾರೆ ಅನ್ನೋ ಆರೋಪ ಕೇಳಿ ಬಂದಿದೆ. ಇದಕ್ಕೆ ಪೂರಕವಾದ ವೀಡಿಯೋ ವೈರಲ್ ಆಗಿದೆ.

 

ಇದನ್ನೂ ಓದಿ: ಏರ್‌ಸ್ಟ್ರೈಕ್ ಬಳಿಕ ಪಾಕ್‌ ಮೇಲೆ ಗ್ರೌಂಡ್‌ಸ್ಟ್ರೈಕ್ - ಚಿತ್ರಗಳಲ್ಲಿ ಭಾರತದ ವಿಜಯೋತ್ಸವ!

ಭಾರತ ವಿರುದ್ಧದ ಪಂದ್ಯಕ್ಕೂ ಮುನ್ನ ಪಾಕಿಸ್ತಾನ ಕ್ರಿಕೆಟಿಗ ಶೋಯೆಬ್ ಮಲಿಕ್ ಪತ್ನಿ ಸಾನಿಯಾ ಮಿರ್ಜಾ, ವಹಾಬ್ ರಿಯಾಜ್,  ಇಮಾಮ್ ಉಲ್ ಹಕ್ ಸೇರಿದಂತೆ ಕೆಲ ಕ್ರಿಕೆಟಿಗರು ಶಿಶಾ ಕಫೆಯಲ್ಲಿ ತಡ ರಾತ್ರಿವರೆಗೂ ಪಾರ್ಟಿ ಮಾಡಿದ ವೀಡಿಯೋ ಇದೀಗ ಸಾಕಷ್ಟು ಚರ್ಚೆಯಾಗುತ್ತಿದೆ. ಕೆಲ ಕ್ರಿಕೆಟಿಗರು ಹುಕ್ಕಾ ಸೇದುತ್ತಿರುವ ವೀಡಿಯೋ ಪಾಕ್ ಅಭಿಮಾನಿಗಳನ್ನು ಕೆರಳಿಸಿದೆ.

 

ಇದನ್ನೂ ಓದಿ: ವಾಘಾದಲ್ಲಿ ಘರ್ಜಿಸುವುದಕ್ಕಿಂತ ಮೈದಾನದಲ್ಲಿ ಆಡಿ- ಪಾಕ್‌ಗೆ ಅಖ್ತರ್ ತರಾಟೆ!

ಶೋಯಿಬ್ ಮಲಿಕ್ ಕೂಡ ರಾತ್ರಿ 2 ಗಂಟೆ ವರೆಗೂ ಶಿಶಾ ಕೆಫೆಯಲ್ಲಿದ್ದು ಹುಕ್ಕಾ ಸೇದಿದ್ದಾರೆ ಎಂದು ಕೆಲ ಅಭಿಮಾನಿಗಳು ಆರೋಪಿಸಿದ್ದಾರೆ. ಪಾರ್ಟಿಯಲ್ಲಿ ಪಾಕ್ ಕ್ರಿಕೆಟಿಗರು ಬರ್ಗರ್, ಫಿಝಾ ರೀತಿಯ ಜಂಕ್ ಆಹಾರಗಳನ್ನು ತಿಂದಿದ್ದಾರೆ. ಇವೆಲ್ಲಾ ಭಾರತ ವಿರುದ್ಧದ ಸೋಲಿಗೆ ಕಾರಣವಾಗಿದೆ ಎಂದಿದ್ದಾರೆ.

ಲೇಟ್ ನೈಟ್ ಪಾರ್ಟಿ ವಿಚಾರ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯಾಗುತ್ತಿದ್ದಂತೆ, ಶೋಯಿಬ್ ಮಲಿಕ್ ಪತ್ನಿ, ಭಾರತದ ಟೆನಿಸ್ ತಾರೆ ಸಾನಿಯಾ ಮಿರ್ಜಾ ಸ್ಪಷ್ಟನೆ ನೀಡಿದ್ದಾರೆ. ನಮ್ಮ ಅನುವಾದವಿಲ್ಲದೆ ಈ ವೀಡಿಯೋ ಮಾಡಲಾಗಿದೆ. ಮಗು ಕೂಡ ನಮ್ಮೊಂದಿಗಿತ್ತು. ಹೀಗಿರುವಾಗ ವೀಡಿಯೋ ಮಾಡಲಾಗಿದೆ. ಪಂದ್ಯ ಸೋತರೂ ಊಟ ಮಾಡಬಹುದು. ಪಾರ್ಟಿ ಆಗರಿಲಿಲ್ಲ. ಊಟಕ್ಕಾಗಿ ರೆಸ್ಟೋರೆಂಟ್ ಹೋಗಿದ್ದೆವು ಅಷ್ಟೆ. ಮುಂದಿನ ಬಾರಿ ಉತ್ತಮ ವಿಷಯದೊಂದಿದೆ ಟ್ರೋಲ್ ಮಾಡಿ ಎಂದು ಸಾನಿಯಾ ಮಿರ್ಜಾ ಟ್ವೀಟ್ ಮೂಲಕ ಉತ್ತರ ನೀಡಿದ್ದಾರೆ.