ವಿಶ್ವಕಪ್ ಟೂರ್ನಿಯ ಕ್ಷಣ-ಕ್ಷಣದ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ...

ಮ್ಯಾಂಚೆಸ್ಟರ್[ಜೂ.28]: ಐಸಿಸಿ ಏಕದಿನ ಕ್ರಿಕೆಟ್ ರ‌್ಯಾಂಕಿಂಗ್ನಲ್ಲಿ ಭಾರತ ತಂಡ ಅಗ್ರಸ್ಥಾನಕ್ಕೇರಿದೆ. ಗುರುವಾರ ನೂತನವಾಗಿ ಬಿಡುಗಡೆಯಾದ ಏಕದಿನ ರ‌್ಯಾಂಕಿಂಗ್ ನಲ್ಲಿ ಭಾರತ ಮೊದಲ ಸ್ಥಾನಕ್ಕೇರಿದೆ.

ಇಂಗ್ಲೆಂಡ್‌ ಈ ದಶಕದ ಹೊಸ ಚೋಕರ್ಸ್..!

ವಿಶ್ವಕಪ್‌ನಲ್ಲಿ ಅಜೇಯವಾಗಿ ಉಳಿದಿರುವ ಭಾರತ ತಂಡ, ಇಂಗ್ಲೆಂಡ್ನ್ನು ಹಿಂದಿಕ್ಕಿ ಮೊದಲ ಸ್ಥಾನ ಪಡೆದಿದೆ. ಕಳೆದ 2 ಪಂದ್ಯಗಳಲ್ಲಿ ಸೋತಿರುವ ಆತಿಥೇಯ ಇಂಗ್ಲೆಂಡ್ ಹಿನ್ನಡೆ ಅನುಭವಿಸಿದ್ದು, 122 ಅಂಕಗಳೊಂದಿಗೆ 2ನೇ ಸ್ಥಾನಕ್ಕೆ ಕುಸಿದಿದೆ. ಇನ್ನೂ ಬುಧವಾರ ಪಾಕಿಸ್ತಾನ ವಿರುದ್ಧ ಸೋತ ನ್ಯೂಜಿಲೆಂಡ್ 114 ಅಂಕಗಳಿಂದ 3ನೇ ಸ್ಥಾನ ಪಡೆದಿದೆ. ವಿಶ್ವಕಪ್‌ನಲ್ಲಿ ಸೆಮೀಸ್‌ಗೇರಿದ ಮೊದಲ ತಂಡ ಎನಿಸಿರುವ ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ 112 ಅಂಕಗಳಿಂದ 4ನೇ ಸ್ಥಾನಕ್ಕೆ ತೃಪ್ತಿಪಟ್ಟಿದೆ. ಒಂದೊಮ್ಮೆ ಭಾರತ, ವಿಂಡೀಸ್ ವಿರುದ್ಧದ ಪಂದ್ಯದಲ್ಲಿ ಸೋತರೆ, ಇಂಗ್ಲೆಂಡ್ ಗಿಂತ ಒಂದು ಸ್ಥಾನ ಕುಸಿದು 2ನೇ ಸ್ಥಾನ ಪಡೆಯಲಿದೆ.

ವಿಶ್ವಕಪ್ 2019 ಲಕ್ಕಿ ಜೆರ್ಸಿಯಲ್ಲಿ ಗೆಲ್ಲುತ್ತಾ ಲಂಕಾ..?

ಜೂ. 30 ರಂದು ಭಾರತ, ಇಂಗ್ಲೆಂಡ್ ಎದುರು ಸೆಣಸಲಿದೆ. ವಿಂಡೀಸ್ ಹಾಗೂ ಇಂಗ್ಲೆಂಡ್ ವಿರುದ್ಧ ಭಾರತ ಗೆಲುವು ಪಡೆದರೆ 124 ಅಂಕಗಳಿಂದ ಅಗ್ರಸ್ಥಾನದಲ್ಲಿ ಉಳಿಯಲಿದೆ. ಇಂಗ್ಲೆಂಡ್ 121 ಅಂಕಗಳಿಗೆ ಕುಸಿತ ಕಾಣಲಿದೆ. ಭಾರತ ವಿರುದ್ಧ ಇಂಗ್ಲೆಂಡ್ ಗೆದ್ದರೆ, 123 ಅಂಕಗಳಿಂದ ಮೊದಲ ಸ್ಥಾನಕ್ಕೇರಲಿದೆ.

ವಿಂಡೀಸ್ ವಿರುದ್ಧ ಭಾರತ ಸೋತು, ಇಂಗ್ಲೆಂಡ್ ಎದುರು ಗೆದ್ದರೆ ಭಾರತ 122 ಅಂಕಗಳಿಸಿ ಮೊದಲ ಸ್ಥಾನದಲ್ಲಿದ್ದರೆ, ಇಂಗ್ಲೆಂಡ್ 121ಅಂಕಗಳಿಂದ 2ನೇ ಸ್ಥಾನದಲ್ಲಿ ಉಳಿಯಲಿದೆ.