ವಿಶ್ವಕಪ್ ಪಂದ್ಯದ ಸ್ಕೋರ್‌ಗಾಗಿ ಇಲ್ಲಿ ಕ್ಲಿಕ್ ಮಾಡಿ

ಮ್ಯಾಂಚೆಸ್ಟರ್(ಜೂ.29): ಭಾರತ ಹಾಗೂ ವೆಸ್ಟ್ ಇಂಡೀಸ್ ನಡುವಿನ ಪಂದ್ಯದಲ್ಲಿ ಆರ್ಮಿ ಸಲ್ಯೂಟ್ ಹೆಚ್ಚು ಸದ್ದುಮಾಡುತ್ತಿದೆ. ವೆಸ್ಟ್ ಇಂಡೀಸ್ ವೇಗಿ ಶೆಲ್ಡಾನ್ ಕಾಟ್ರೆಲ್ ಆರ್ಮಿ ಸಲ್ಯೂಟ್ ಸೆಲೆಬ್ರೇಷನ್‌ನ್ನು ಮೊಹಮ್ಮದ್ ಶಮಿ ನಕಲು ಮಾಡಿದ್ದರು. ಕಾಟ್ರೆಲ್ ವಿಕೆಟ್ ಪತನಗೊಂಡಾಗ ಶಮಿ ಸಲ್ಯೂಟ್ ಸೆಲೆಬ್ರೇಷನ್ ಮಾಡೋ ಮೂಲಕ ಸೆಂಡ್ ಆಫ್ ನೀಡಿದ್ದರು. ಇದೀಗ ಕಾಟ್ರೆಲ್ ಸಿಗ್ನೇಚರ್ ಸೆಲೆಬ್ರೇಷನ್ ನಕಲು ಮಾಡಿದ  ಶಮಿಗೆ, ಕಾಟ್ರೆಲ್ ತಿರುಗೇಟು ನೀಡಿದ್ದಾರೆ.

ಇದನ್ನೂ ಓದಿ: ಸೌತ್ ಆಫ್ರಿಕಾ, ಶ್ರೀಲಂಕಾ ತಂಡದ ಮೇಲೆ ಜೇನು ನೊಣಗಳಿಗೆ ಪ್ರೀತಿ ಜಾಸ್ತಿ!

ಶಮಿ ಸಲ್ಯೂಟ್ ಸೆಲೆಬ್ರೇಷನ್‌ಗೆ ಟ್ವಿಟರ್ ಮೂಲಕ ಪ್ರತಿಕ್ರಿಯೆ ನೀಡಿರುವ ಕಾಟ್ರೆಲ್, ಅದ್ಭುತ ಬೌಲಿಂಗ್,  ನಕಲು ಮಾಡುವುದು ಅತ್ಯುತ್ತಮ ಫನ್ ಎಂದು ಟ್ವೀಟ್ ಮಾಡಿದ್ದಾರೆ. ವಿಶೇಷ ಅಂದರೆ ಕಾಟ್ರೆಲ್ ಹಿಂದಿ ಭಾಷೆಯಲ್ಲಿ ಟ್ವೀಟ್ ಮಾಡೋ ಮೂಲಕ ಗಮನಸೆಳೆದಿದ್ದಾರೆ. 

 

ಇದನ್ನೂ ಓದಿ: ಸುನಿಲ್‌ ಶೆಟ್ಟಿಪುತ್ರಿ ಜತೆ ಕೆ.ಎಲ್.ರಾಹುಲ್‌ ಡೇಟಿಂಗ್‌?

ಮೊಹಮ್ಮದ್ ಶಮಿ ಔಟಾದಾಗ ಶೆಲ್ಡಾನ್ ಕಾಟ್ರೆಲ್ ಎಂದಿನಂತೆ ಆರ್ಮಿ ಸಲ್ಯೂಟ್ ಮಾಡಿ ಸಂಭ್ರಮಿಸಿದರು. ಬಳಿಕ ಯಜುವೇಂದ್ರ ಚಹಾಲ್ ಎಸೆತದಲ್ಲಿ ಶೆಲ್ಡಾನ್ ಕಾಟ್ರೆಲ್ ವಿಕೆಟ್ ಪತನಗೊಂಡಾಗ ಶಮಿ ಆರ್ಮಿ ಸಲ್ಯೂಟ್ ಮಾಡಿ ಸೆಂಡ್ ಆಫ್ ನೀಡಿದ್ದರು. ಇದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.