ಮ್ಯಾಂಚೆಸ್ಟರ್(ಜು.12): ವಿಶ್ವಕಪ್ ಟೂರ್ನಿ ಸೆಮಿಫೈನಲ್ ಪಂದ್ಯದದ ಸೋಲಿನ ಬಳಿಕ ಎಂ.ಎಸ್.ಧೋನಿ ಕುರಿತು ಪರ ವಿರೋಧ ಚರ್ಚೆ ಹುಟ್ಟಿಕೊಂಡಿದೆ. ಕೆಲವರು ಧೋನಿ ನಿವೃತ್ತಿ ಹೇಳಬೇಕು ಎಂದರೆ, ಹಲವರು ಟೀಂ ಇಂಡಿಯಾದಲ್ಲಿ ಮುಂದುವರಿಯುವುದು ಸೂಕ್ತ ಎಂದಿದ್ದಾರೆ. ಇತ್ತ ಧೋನಿ ಕುರಿತು ಮತ್ತೊಂದು ವಿಚಾರ ಬಹಿರಂಗವಾಗಿದೆ.  

ಇದನ್ನೂ ಓದಿ: ಹಲವರಿಗೆ ವಿಶ್ರಾಂತಿ; ಧೋನಿ ನಿರ್ಧಾರಕ್ಕೆ ಕಾಯುತ್ತಿದೆ BCCI!

ಇಂಗ್ಲೆಂಡ್ ವಿರುದ್ದದ ಲೀಗ್ ಪಂದ್ಯದಲ್ಲಿ ಎಂ.ಎಸ್.ಧೋನಿ ಬಲಗೈ ಬೆರಳಿಗೆ ಗಾಯವಾಗಿತ್ತು. ಆದರೆ ಗಾಯದಲ್ಲೇ ಲೀಗ್ ಪಂದ್ಯ ಮುಗಿಸಿದ ಧೋನಿಗೆ ಸೆಮಿಫೈನಲ್ ಪಂದ್ಯಕ್ಕೂ ಮುನ್ನ ಇಂಜುರಿ ಸಮಸ್ಯೆ ಹೆಚ್ಚಾಗಿತ್ತು. ಧೋನಿ ಕೀಪಿಂಗ್ ಹಾಗೂ ಬ್ಯಾಟಿಂಗ್ ನಡೆಸುವುದೇ ಕಷ್ಟವಾಗಿತ್ತು. ಆದರೆ ದೇಶಕ್ಕಾಗಿ ಎಂ.ಎಸ್.ಧೋನಿ ಗಾಯವವನ್ನು ಲೆಕ್ಕಿಸದೆ ವಿಶ್ವಕಪ್ ಸೆಮಿಫೈನಲ್ ಪಂದ್ಯ ಆಡಿದ್ದಾರೆ. ಇಷ್ಟೇ ಅಲ್ಲ 50 ರನ್ ಸಿಡಿಸಿ ಹೀನಾಯ ಸೋಲಿನಿಂದ ತಪ್ಪಿಸಿದ್ದಾರೆ.

ಇದನ್ನೂ ಓದಿ: ಧೋನಿ ನಿವೃತ್ತಿ ಮಾತು; ಗಾಯಕಿ ಲತಾ ಮಂಗೇಶ್ಕರ್ ಮನವಿ!

ನ್ಯೂಜಿಲೆಂಡ್ ವಿರುದ್ಧ ಸೋಲಿನ ಬಳಿಕ ಕಿವೀಸ್ ಆಟಗಾರರ ಜೊತೆ ಹಸ್ತಲಾಘ ಮಾಡುವ ವೇಳೆ ಧೋನಿ ಬಲಗೈ ಬದಲು ಎಡಗೈ ನೀಡಿದ್ದರು. ನೋವಿನ ಕಾರಣ ಶೇಕ್‌ಹ್ಯಾಂಡ್ ಮಾಡಲು ಧೋನಿ ಕಷ್ಟವಾಗಿತ್ತು. ಧೋನಿ ನಿರ್ಧಾರಕ್ಕೆ ಅಭಿಮಾನಿಗಳು ತಲೆಬಾಗಿದ್ದಾರೆ. ನೋವಿನಲ್ಲೂ ತಂಡಕ್ಕಾಗಿ ಆಡಿದ ಧೋನಿ ಟೀಂ ಇಂಡಿಯಾದ ಲ್ಲಿ ಮುಂದುವರಿಯಬೇಕು ಎಂದಿದ್ದಾರೆ.