ಮುಂಬೈ(ಜು.12): ವಿಶ್ವಕಪ್ ಟೂರ್ನಿಯಲ್ಲಿ ಭಾರತ ಹೋರಾಟ ಅಂತ್ಯಗೊಂಡಿದ್ದು, ಇದೀಗ ವೆಸ್ಟ್ ಇಂಡೀಸ್ ಪ್ರವಾಸದತ್ತ ಟೀಂ ಇಂಡಿಯಾ ಆಯ್ಕೆ ಸಮತಿ ಚಿತ್ತ ಹರಿಸಿದೆ. ವಿಶ್ವಕಪ್ ಟೂರ್ನಿಯಲ್ಲಿ ಭಾರತ ದಿಟ್ಟ ಹೋರಾಟ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದರೂ, ಬಿಸಿಸಿಐಗೆ ತೃಪ್ತಿಯಾಗಿಲ್ಲ. ಆಗಸ್ಟ್ 3 ರಿಂದ ಆರಂಭಗೊಳ್ಳಲಿರುವು ವೆಸ್ಟ್ ಇಂಡೀಸ್ ಸರಣಿಗೆ ಟೀಂ ಇಂಡಿಯಾ ಆಯ್ಕೆ ಮಾಡಲು ಬಿಸಿಸಿಆ ಮುಂದಾಗಿದೆ.

ಇದನ್ನೂ ಓದಿ: ವಿಶ್ವಕಪ್ ಸೋಲಿನ ಬೆನ್ನಲ್ಲೇ ವಿಂಡೀಸ್ ಪ್ರವಾಸಕ್ಕೆ ಭಾರತಕ್ಕೆ ಸಿದ್ಧತೆ!

ಸತತ ಕ್ರಿಕೆಟ್‌ನಿಂದ ಬಳಲಿರುವ ಕ್ರಿಕೆಟಿಗರಿಗೆ ವಿಶ್ರಾಂತಿ ನೀಡಲು ಆಯ್ಕೆ ಸಮಿತಿ ನಿರ್ಧರಿಸಿದೆ. ಆದರೆ ಎಂ.ಎಸ್.ಧೋನಿ ನಿರ್ಧಾರಕ್ಕಾಗಿ ಬಿಸಿಸಿಐ ಕಾಯುತ್ತಿದೆ. ಧೋನಿ ನಿವೃತ್ತಿ ಹೇಳಲಿದ್ದಾರೆ ಅನ್ನೋ ಮಾತುಗಳು ಬಲವಾಗಿ ಕೇಳಿಬರುತ್ತಿದೆ. ಹೀಗಾಗಿ ಗೊಂದಲಕ್ಕೆ ಬಿದ್ದಿರುವ ಆಯ್ಕೆ ಸಮಿತಿ ಧೋನಿ ಬಳಿ ನಿವೃತ್ತಿ ಊಹಾಪೋಹ ಖಚಿತಪಡಿಸಿ ತಂಡ ಪ್ರಕಟಿಸಲು ನಿರ್ಧರಿಸಿದೆ.

ಇದನ್ನೂ ಓದಿ: ಇಂಗ್ಲೆಂಡ್ vs ನ್ಯೂಜಿಲೆಂಡ್ ವಿಶ್ವಕಪ್ ಫೈನಲ್; ಯಾರೂ ಗೆದ್ದರೂ ಇತಿಹಾಸ!

ನಾಯಕ ವಿರಾಟ್ ಕೊಹ್ಲಿ, ವೇಗಿ ಜಸ್ಪ್ರೀತ್ ಬುಮ್ರಾ ಸೇರಿದಂತೆ ಹಲವು ಹಿರಿಯ ಆಟಗಾರರಿಗೆ ವಿಶ್ರಾಂತಿ ನೀಡಲು ಬಿಸಿಸಿಐ ಮುಂದಾಗಿದೆ. ಜುಲೈ 17 ಅಥವಾ 18 ರಂದು ಮುಂಬೈನಲ್ಲಿ ಎಂ.ಎಸ್.ಕೆ.ಪ್ರಸಾದ್ ನೇತೃತ್ವದ ಆಯ್ಕೆ ಸಮಿತಿ ಸಭೆ ಸೇರಲಿದೆ. ವೆಸ್ಟ್ ಇಂಡೀಸ್ ವಿರುದ್ಧ ಆಗಸ್ಟ್ 3 ರಿಂದ 3 ಟಿ20, 3 ಏಕದಿನ ಹಾಗೂ ಏಕೈಕ ಟೆಸ್ಟ್ ಪಂದ್ಯದ  ಸರಣಿ ಆಡಲಿದೆ.