ಸೌಥಾಂಪ್ಟನ್[ಜೂ.24]: ಏಕದಿನ ವಿಶ್ವಕಪ್‌ನಲ್ಲಿ ಭಾರತ ತಂಡ ಅಪರೂಪದ ದಾಖಲೆಗಳನ್ನು ಮುಂದುವರೆಸಿದೆ. ಶನಿವಾರ ಇಲ್ಲಿ ನಡೆದಿದ್ದ ಆಫ್ಘಾನಿಸ್ತಾನ ವಿರುದ್ಧದ ಪಂದ್ಯದಲ್ಲಿ ಶಮಿ ಹ್ಯಾಟ್ರಿಕ್ ವಿಕೆಟ್ ಪಡೆದಿದ್ದರು. ಇದು ಈ ವಿಶ್ವಕಪ್‌ನಲ್ಲಿ ಮೊದಲ ಹ್ಯಾಟ್ರಿಕ್ ವಿಕೆಟ್ ಆಗಿದೆ.

ಭಾರತ- ವೆಸ್ಟ್ ಇಂಡೀಸ್ ಸರಣಿ: ಕೊಹ್ಲಿ-ಬುಮ್ರಾಗೆ ರೆಸ್ಟ್?

ಮಾಜಿ ನಾಯಕ ಎಂ.ಎಸ್. ಧೋನಿ ಸಲಹೆಯಂತೆ ಯಾರ್ಕರ್ ಹಾಕಿದ್ದರಿಂದ ಹ್ಯಾಟ್ರಿಕ್ ವಿಕೆಟ್ ಪಡೆಯಲು ಸಾಧ್ಯವಾಯಿತುಎಂದು ಶಮಿ ಹೇಳಿದ್ದಾರೆ. ಕೊನೆಯ 6 ಎಸೆತಗಳಲ್ಲಿ ಆಫ್ಘನ್ ಜಯಕ್ಕಾಗಿ 16 ರನ್ ಗಳಿಸಬೇಕಿತ್ತು. ನಬಿ, ಮೊದಲ ಎಸೆತವನ್ನು ಬೌಂಡರಿ ಬಾರಿಸಿದರು. 2ನೇ ಎಸೆತದಲ್ಲಿ ರನ್ ಬರಲಿಲ್ಲ. 3ನೇ ಎಸೆತ ಧೋನಿಯ ಸಲಹೆಯಂತೆ, ಯಾರ್ಕರ್ ಹಾಕಿ ನಬಿ ವಿಕೆಟ್ ಪಡೆದರು. ಅದೇ ರೀತಿ 4 ಹಾಗೂ 5ನೇ ಎಸೆತಗಳಲ್ಲಿ ಕ್ರಮವಾಗಿ ಅಫ್ತಾಬ್, ಮುಜೀಬ್ ಕೂಡ ಬೌಲ್ಡ್ ಆದರು. ಧೋನಿ ಸಲಹೆಯನ್ನು ಪಾಲಿಸಿದ್ದರಿಂದ ಶಮಿ ಕೊನೆ ಓವರಲ್ಲಿ 3 ವಿಕೆಟ್ ಕಿತ್ತರು. ಈ ಮೂಲಕ 1987ರ ವಿಶ್ವಕಪ್ ಬಳಿಕ ಹ್ಯಾಟ್ರಿಕ್ ವಿಕೆಟ್ ಕಬಳಿಸಿದ ಎರಡನೇ ಭಾರತೀಯ ಬೌಲರ್ ಎನ್ನುವ ಕೀರ್ತಿಗೆ ಮೊಹಮ್ಮದ್ ಶಮಿ ಪಾತ್ರರಾಗಿದ್ದಾರೆ. 

ಫಿಟ್ನೆಸ್‌ ಇಲ್ಲದಿದ್ದರೂ ಮಿಂಚಿದ ಮಾಲಿಂಗ!

ಮೊದಲು ಬ್ಯಾಟಿಂಗ್ ಮಾಡಿದ್ದ ಟೀಂ ಇಂಡಿಯಾ ಕೇವಲ 224 ರನ್ ಗಳನ್ನಷ್ಟೇ ಬಾರಿಸಿತ್ತು. ಅದರಲ್ಲೂ ಧೋನಿ 52 ಎಸೆತಗಳನ್ನು ಎದುರಿಸಿ ಕೇವಲ 28 ರನ್ ಗಳನ್ನಷ್ಟೇ ಬಾರಿಸಿದ್ದರು. ಧೋನಿ ಮಂದಗತಿಯ ಬ್ಯಾಟಿಂಗ್ ವ್ಯಾಪಕ ಟೀಕೆಗೂ ಗುರಿಯಾಗಿತ್ತು. ಆದರೆ ಭಾರತ ಕ್ಷೇತ್ರರಕ್ಷಣೆ ಮಾಡುವ ವೇಳೆ ಧೋನಿ ನೀಡಿದ ಸಲಹೆಗಳು ಪಂದ್ಯದ ಗತಿಯನ್ನೇ ಬದಲಾಯಿಸಿಬಿಟ್ಟಿತು. 

ಟೀಂ ಇಂಡಿಯಾ ಕಂಡ ಯಶಸ್ವಿ ನಾಯಕರಲ್ಲಿ ಅಗ್ರಸ್ಥಾನದಲ್ಲಿ ನಿಲ್ಲುವ ಮಾಜಿ ನಾಯಕ ಧೋನಿ, ಈ ಹಿಂದೆಯೂ ಅನೇಕ ಬಾರಿ ಬೌಲರ್ ಗಳಿಗೆ ಉಪಯುಕ್ತ ಸಲಹೆ ನೀಡುವ ಮೂಲಕ ತಂಡಕ್ಕೆ ನೆರವಾಗಿದ್ದಾರೆ. ಇನ್ನು DRS ಪಡೆಯುವಾಗಲಂತೂ ಧೋನಿ ಸಲಹೆ ಪಡೆದ ಬಳಿಕವಷ್ಟೇ ನಾಯಕ ಕೊಹ್ಲಿ ಮುಂದಿನ ತೀರ್ಮಾನ ಪಡೆದುಕೊಳ್ಳುತ್ತಾರೆ.