ಫಿಟ್ನೆಸ್‌ ಇಲ್ಲದಿದ್ದರೂ ಮಿಂಚಿದ ಮಾಲಿಂಗ!| ಸಾಮಾಜಿಕ ತಾಣಗಳಲ್ಲಿ ವೈರಲ್ ಆಯ್ತು ವೇಗಿ ಲಸಿತ್‌ ಮಾಲಿಂಗ ಫೋಟೋ

ಲೀಡ್ಸ್‌[ಜೂ.23]: ಇಂಗ್ಲೆಂಡ್‌ ವಿರುದ್ಧ ವಿಶ್ವಕಪ್‌ ಪಂದ್ಯದಲ್ಲಿ 4 ವಿಕೆಟ್‌ ಕಿತ್ತು ಶ್ರೀಲಂಕಾ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ ಹಿರಿಯ ವೇಗಿ ಲಸಿತ್‌ ಮಾಲಿಂಗರ ಇತ್ತೀಚಿನ ಫೋಟೋವೊಂದು ಸಾಮಾಜಿಕ ತಾಣಗಳಲ್ಲಿ ವೈರಲ್‌ ಆಗಿದೆ.

Scroll to load tweet…
Scroll to load tweet…
Scroll to load tweet…
View post on Instagram

ಶುಕ್ರವಾರದ ಪಂದ್ಯದಲ್ಲಿ ಲಂಕಾ ಗೆದ್ದ ಬಳಿಕ, ಮಾಜಿ ನಾಯಕ ಮಹೇಲಾ ಜಯವರ್ಧನೆ ಮಾಲಿಂಗರ ಫೋಟೋವನ್ನು ಟ್ವೀಟ್‌ ಮಾಡಿದ್ದು, ‘ವಿಕೆಟ್‌ ಕಬಳಿಸಲು ಸಿಕ್ಸ್‌ ಪ್ಯಾಕ್‌ನ ಅಗತ್ಯವಿಲ್ಲ. ಕೌಶಲ್ಯವಿದ್ದರೆ ಸಾಕು’ ಎಂದು ಬರೆದಿದ್ದಾರೆ.