ಸಾವಿನ ನೋವಿನಲ್ಲೂ ಇಂಗ್ಲೆಂಡ್‌ಗೆ ಟ್ರೋಫಿ ಗೆಲ್ಲಿಸಿದ ಆರ್ಚರ್!
ಇಂಗ್ಲೆಂಡ್ ವೇಗಿ ಜೋಫ್ರಾ ಆರ್ಚರ್ ಅದ್ಭುತ ಬೌಲಿಂಗ್ ದಾಳಿಯಿಂದ ಇಂಗ್ಲೆಂಡ್ ಟ್ರೋಫಿ ಗೆದ್ದಿದೆ ಅನ್ನೋದರಲ್ಲಿ ಎರಡು ಮಾತಿಲ್ಲ. ಆದರೆ ಜೋಫ್ರಾ ಆರ್ಚರ್ ಮಾತ್ರ ಸಾವಿನ ನೋವಿನಲ್ಲೇ ಸಂಪೂರ್ಣ ಟೂರ್ನಿ ಆಡಿದ್ದಾರೆ. ಆರ್ಚರ್‌ಗೆ ಆಘಾತ ತಂದ ಆ ಸಾವು ಯಾವುದು? ಇಲ್ಲಿದೆ ವಿವರ.
ಲಂಡನ್(ಜು.16): ವಿಶ್ವಕಪ್ ಟೂರ್ನಿ ಫೈನಲ್ ಪಂದ್ಯದ ಸೂಪರ್ ಓವರ್‌ನಲ್ಲಿ ಜೋಫ್ರಾ ಆರ್ಚರ್ ಮತ್ತೊಮ್ಮೆ ತಾನೊರ್ವ ಬೆಸ್ಟ್ ಬೌಲರ್ ಅನ್ನೋದನ್ನು ಸಾಬೀತುಪಡಿಸಿದರು. ಜೋಫ್ರಾ ಆರ್ಚರ್ ಸಂಪೂರ್ಣ ವಿಶ್ವಕಪ್ ಟೂರ್ನಿಯಲ್ಲಿ ಮಾರಕ ಬೌಲಿಂಗ್ ದಾಳಿಯಿಂದ ಇಂಗ್ಲೆಂಡ್ ಆತಂಕವಿಲ್ಲದೆ ಫೈನಲ್ ತಲುಪಿತ್ತು. ಫೈನಲ್ ಪಂದ್ಯ ಹಾಗೂ ಸೂಪರ್ ಓವರ್‌ನಲ್ಲೂ ಆರ್ಚರ್ ಪ್ರದರ್ಶನದಿಂದ ಇಂಗ್ಲೆಂಡ್ ಗೆಲುವಿನ ನಗೆ ಬೀರಿತು. ಆದರೆ ಆರ್ಚರ್ ಯಶಸ್ವಿ ಪ್ರದರ್ಶನದ ಹಿಂದೆ ನೋವಿನ ಕತೆಯಿದೆ.
ಇದನ್ನೂ ಓದಿ: ವಿಶ್ವಕಪ್ ಗೆದ್ದ ಇಂಗ್ಲೆಂಡ್ ತಂಡದ ರೋಡ್ ಶೋಗೆ ಬ್ರೇಕ್!
ವಿಶ್ವಕಪ್ ಟೂರ್ನಿಯಲ್ಲಿ ಇಂಗ್ಲೆಂಡ್ ಉದ್ಘಾಟನಾ ಪಂದ್ಯದಲ್ಲಿ ಸೌತ್ ಆಫ್ರಿಕಾ ತಂಡವನ್ನು ಮಣಿಸಿ ಶುಭಾರಂಭ ಮಾಡಿತು. ತಂಡ ಸಂಭ್ರಮದ ಅಲೆಯಲ್ಲಿತ್ತು. ಆದರೆ ಜೋಫ್ರಾ ಆರ್ಚರ್ ಮಾತ್ರ ನೋವಿನಲ್ಲಿ ನರಳಾಡಿದರು. ಕಾರಣ ಬಾರ್ಬಡೋಸ್‌ನ ಸೈಂಟ್ ಫಿಲಿಪ್‌ನಲ್ಲಿರುವ ತಮ್ಮ ಮನೆಯ ಹೊರಗಡೆ ಸಹೋದರ ಸಂಬಂಧಿಯ ಹತ್ಯೆಯಾಗಿತ್ತು. ಆರ್ಚರ್ ಸಂಬಂಧಿಯನ್ನು ಗುಂಡಿಕ್ಕಿ ಕೊಲ್ಲಲಾಗಿತ್ತು. ಇದು ಜೋಫ್ರಾ ಆರ್ಚರ್‌ಗೆ ತೀವ್ರ ಆಘಾತ ನೀಡಿತ್ತು.
ಇದನ್ನೂ ಓದಿ: ಜೀವನದುದ್ದಕ್ಕೂ ವಿಲಿಯಮ್ಸನ್ ಬಳಿ ಕ್ಷಮೆ ಯಾಚಿಸುತ್ತೇನೆಂದ ಸ್ಟೋಕ್ಸ್!
ಜೋಫ್ರಾ ಆರ್ಚರ್ ಹಾಗೂ ಸಹೋದರ ಸಂಬಂಧಿ ಜೊತೆ ಜೊತೆಯಲ್ಲೇ ಬೆಳೆದವರು. ಜೊತೆಯಾಗಿ ಕ್ರಿಕೆಟ್ ಆಡಿದವರು. ಒಂದೇ ವಯಸ್ಸು ಕೂಡ. ಹೆಚ್ಚು ಆತ್ಮೀಯವಾಗಿದ್ದ ಸಬಂಧಿ ಕೊಲೆಯಾಗಿದ್ದಾನೆ ಅನ್ನೋ ಮಾಹಿತಿ ಆರ್ಚರ್‌ಗೆ ಇನ್ನಿಲ್ಲದಂತೆ ಕಾಡಿತ್ತು. ತಕ್ಷಣವೇ ಮನಗೆ ವಾಪಾಸ್ಸಾಗಲು ಆರ್ಚರ್ ಮನಸ್ಸು ಮಾಡಿದ್ದರು. ಆದರೆ ವಿಶ್ವಕಪ್ ಟೂರ್ನಿಯಲ್ಲಿ ತನ್ನ ಅವಶ್ಯಕತೆ ಇಂಗ್ಲೆಂಡ್ ತಂಡಕ್ಕಿದೆ ಅನ್ನೋದು ಆರ್ಚರ್‌ಗೆ ತಿಳಿದಿತ್ತು. ಹೀಗಾಗಿ ಸಂಪೂರ್ಣ ಟೂರ್ನಿಯನ್ನು ಆರ್ಚರ್ ನೋವಿನಲ್ಲೇ ಆಡಿದರು.