Asianet Suvarna News Asianet Suvarna News

ವಿಶ್ವಕಪ್ ಗೆದ್ದ ಇಂಗ್ಲೆಂಡ್ ತಂಡದ ರೋಡ್ ಶೋಗೆ ಬ್ರೇಕ್!

ಇದೇ ಮೊದಲ ಬಾರಿಗೆ ವಿಶ್ವಕಪ್ ಟ್ರೋಫಿ ಗೆದ್ದ ಇಂಗ್ಲೆಂಡ್ ತಂಡದ ಸಂಭ್ರಮ ಮುಗಿಲು ಮುಟ್ಟಿದೆ. ಲಂಡನ್ ಅಥಾರಿಟಿ ಇಂಗ್ಲೆಂಡ್ ಸಂಭ್ರಮವನ್ನು ಇಮ್ಮಡಿಗೊಳಿಸಲು ರೋಡ್ ಶೋ ಆಯೋಜಿಸಿತ್ತು. ಆದರೆ ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ರೋಡ್ ಶೋ ರದ್ದು ಮಾಡಿದೆ.
 

Ecb cancelled Team Road show after maiden cricket world cup 2019
Author
Bengaluru, First Published Jul 16, 2019, 4:03 PM IST

ಲಂಡನ್(ಜು.16): ನ್ಯೂಜಿಲೆಂಡ್ ವಿರುದ್ಧದ ಫೈನಲ್ ಪಂದ್ಯದಲ್ಲಿ ಆತಿಥೇಯ ಇಂಗ್ಲೆಂಡ್ ಗೆಲುವು ಸಾಧಿಸಿ ವಿಶ್ವಕಪ್ ಟ್ರೋಫಿ ಗೆದ್ದುಕೊಂಡಿದೆ. ಸೂಪರ್ ಓವರ್‌ನಲ್ಲೂ ಪಂದ್ಯ ಟೈ ಗೊಂಡು ಗರಿಷ್ಠ ಬೌಂಡರಿ ಆಧಾರದಲ್ಲಿ ಇಂಗ್ಲೆಂಡ್ ಟ್ರೋಫಿ ಗೆದ್ದುಕೊಂಡಿತು.  ಕಠಿಣ ಹೋರಾಟದ ಜೊತೆಗೆ ಇಂಗ್ಲೆಂಡ್‌ಗೆ ಲಕ್ ಕೂಡ ಕೈ ಹಿಡಿದಿತ್ತು. ಹೀಗಾಗಿ ಗೆಲುವಿನ ನಗೆ ಬೀರಿತು. ತವರಿನಲ್ಲಿ ಪ್ರಶಸ್ತಿ ಗೆದ್ದು ಇತಿಹಾಸ ನಿರ್ಮಿಸಿದ ಇಂಗ್ಲೆಂಡ್ ತಂಡದ ಸಂಭ್ರಮಾಚರಣೆಯನ್ನು ರದ್ದು ಮಾಡಲಾಗಿದೆ. 

ಇದನ್ನೂ ಓದಿ: ವಿಶ್ವಕಪ್ 2019: ಇಂಗ್ಲೆಂಡ್ ಸೇರಿದಂತೆ 10 ತಂಡ ಪಡೆದ ಪ್ರಶಸ್ತಿ ಮೊತ್ತ ಇಲ್ಲಿದೆ!

ಗೆಲುವಿನ ಬಳಿಕ ಲಂಡನ್ ಆಥಾರಿಟಿ ತಂಡದ ರೋಡ್ ಶೋಗೆ ಎಲ್ಲಾ ತಯಾರಿ ನಡೆಸಿತ್ತು. ತೆರೆದ ಬಸ್ ಸೇರಿದಂತೆ ಸಕಲ ಸಿದ್ಧತೆ ಮಾಡಿಕೊಂಡಿತ್ತು. ಜುಲೈ 15ಕ್ಕೆ ರೋಡ್ ಶೋ ಮಾಡಲು ದಿನಾಂಕ ನಿಗದಿ ಪಡಿಸಲಾಗಿತ್ತು. ಆದರೆ ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ತಂಡದ ರೋಡ್ ಶೋ ರದ್ದು ಮಾಡಿತು. ತಂಡದ ರೋಡ್ ಶೋ ಕ್ಯಾನ್ಸಲ್ ಮಾಡುವಂತೆ ಲಂಡನ್ ಅಥಾರಿಟಿಗೆ ಸೂಚಿಸಿತು.

ಇದನ್ನೂ ಓದಿ: ವಿಶ್ವಕಪ್ ಟೂರ್ನಿಯಲ್ಲಿ ಅಳಿಸಿಹೋದ ಹಾಗೂ ನಿರ್ಮಾಣವಾದ ಅಪರೂಪದ ದಾಖಲೆಗಳಿವು..!

ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ರೋಡ್ ಶೋ ಕ್ಯಾನ್ಸಲ್ ಮಾಡಲು ಕಾರಣ ಆಶ್ಯಸ್ ಸರಣಿ. ಜುಲೈ 24 ರಿಂದ ಇಂಗ್ಲೆಂಡ್ ತಂಡ ಅಭ್ಯಾಸ ಪಂದ್ಯ ಆಡಲಿದೆ. ಬಳಿಕ ಆಗಸ್ಟ್ 3 ರಿಂದ ಪ್ರತಿಷ್ಠಿತ ಆಶ್ಯಸ್ ಸರಣಿ ಆರಂಭಗೊಳ್ಳಲಿದೆ. ಈಗಾಗಲೇ ಆಟಗಾರರು ಸತತ ಪಂದ್ಯದಿಂದ ಬಳಲಿದ್ದಾರೆ. ಇನ್ನೆರಡು ದಿನದಲ್ಲಿ ಆಶ್ಯಸ್ ಸರಣಿಗೆ ಸಜ್ಜಾಗಬೇಕಿದೆ. ಹೀಗಾಗಿ ಆಟಗಾರರ ವಿಶ್ರಾಂತಿ ಹಾಗೂ ಆಶ್ಯಸ್ ಸರಣಿ ದೃಷ್ಟಿಯಿಂದ ರೋಡ್ ಶೋ ರದ್ದು ಮಾಡಲಾಗಿದೆ ಎಂದು ಇಂಗ್ಲೆಂಡ್ ಹಾಗೂ ವೇಲ್ಸ್ ಕ್ರಿಕೆಟ್ ಮಂಡಳಿ ಸ್ಪಷ್ಟಪಡಿಸಿದೆ.

Follow Us:
Download App:
  • android
  • ios