ಬೆಂಗಳೂರು [ಜೂ.19]: ಅತಿ ಕಡಿಮೆ ಅವಧಿಯಲ್ಲೇ ಟೀಂ ಇಂಡಿಯಾದ ಸ್ಟಾರ್ ಆಟಗಾರನಾಗಿ ಹೊರಹೊಮ್ಮಿರುವ ಗುಜರಾತ್ ವೇಗಿ ಜಸ್ಪ್ರೀತ್ ಬುಮ್ರಾ, ಇದೀಗ ಟೀಂ ಇಂಡಿಯಾದ ಡೆತ್ ಓವರ್ ಸ್ಪೆಷಲಿಸ್ಟ್ ಆಗಿ ಗುರುತಿಸಿಕೊಂಡಿದ್ದಾರೆ. ಕಠಿಣ ಪರಿಶ್ರಮದ ಮೂಲಕ ಕರಾರುವಕ್ಕಾದ ಯಾರ್ಕರ್ ದಾಳಿ ನಡೆಸುವ ಬುಮ್ರಾ, ವಿಶ್ವಕಪ್ ಟೂರ್ನಿಯಲ್ಲಿ ಎದುರಾಳಿ ಬ್ಯಾಟ್ಸ್‌ಮೆನ್ ಎದೆಯಲ್ಲಿ ಈಗಲೂ ನಡುಕ ಹುಟ್ಟಿಸುತ್ತಿದ್ದಾರೆ. 

ವಿಶ್ವದ ನಂ.1 ಬೌಲರ್ ಈ ನಟಿಗೆ ಕ್ಲೀನ್ ಬೋಲ್ಡ್? ಇಲ್ಲಿವೆ ಫೋಟೋಸ್!

ದಕ್ಷಿಣ ಭಾರತದ ನಟಿ ಅನುಪಮಾ ಪರಮೇಶ್ವರನ್ ಅವರೊಂದಿಗೆ ಬುಮ್ರಾ ಹೆಸರು ತಳುಕುಹಾಕಿಕೊಂಡಿದೆ. ಈ ಜೋಡಿ ಲವ್ವಿ ಡವ್ವಿ ನಡೆಸುತ್ತಿದ್ದಾರೆ ಎನ್ನುವ ಗಾಳಿ ಸುದ್ದಿ ಸಾಕಷ್ಟು ಸದ್ದು ಮಾಡುತ್ತಿದೆ. ಹೀಗಿರುವಾಗಲೇ ಬುಮ್ರಾ ಮಾಡಿದ ಟ್ವೀಟ್ ಹಲವರನ್ನು ಕನ್ಫ್ಯೂಸ್ ಆಗುವಂತೆ ಮಾಡಿದೆ. 

ಏನದು ಟ್ವೀಟ್?

ತಾಯಿಯೊಂದಿಗಿರುವ ಚಿತ್ರದೊಂದಿಗೆ ಬುಮ್ರಾ, 'ಎಂಥದ್ದೇ ಸಂದರ್ಭವಿರಲಿ, ಈ ತೋಳುಗಳು ನನಗೆ ಯಾವತ್ತಿಗೂ ಆಸರೆಯಾಗಿವೆ' ಎಂದು ಟ್ವೀಟ್ ಮಾಡಿದ್ದರು. ಈ ಟ್ವೀಟ್ ನೋಡಿದ ಟ್ವಿಟರಿಗರು, ಇದು ಅನುಪಮಾ ಎಂದು ಕನ್ಫ್ಯೂಸ್ ಮಾಡಿಕೊಂಡಿದ್ದಾರೆ.

ಜಸ್ಪ್ರೀತ್ ಬುಮ್ರಾ ಎದುರಿಸಲು ಬ್ಯಾಟ್ಸ್‌ಮನ್‌ಗೆ ಪೀಟರ್ಸನ್ ಟಿಪ್ಸ್

ತಮ್ಮ ಏಳನೇ ವಯಸ್ಸಿಗೆ ತಂದೆಯನ್ನು ಕಳೆದುಕೊಂಡಿದ್ದ ಬುಮ್ರಾಗೆ ಆಸರೆಯಾಗಿದ್ದು ತಾಯಿ. ಶಾಲಾ ಶಿಕ್ಷಕಿಯಾಗಿದ್ದ ಬುಮ್ರಾ ತಾಯಿ ದಲ್ಜೀತ್ ಕೌರ್ ಮಗನ ಕ್ರಿಕೆಟ್ ಕನಸಿಗೆ ನೀರೆದಿದ್ದರು. ಐಪಿಎಲ್ ಟೂರ್ನಿಯಲ್ಲಿ 2013ರಲ್ಲಿ ಮುಂಬೈ ಇಂಡಿಯನ್ಸ್ ಪರ ಕ್ರಿಕೆಟ್ ಜಗತ್ತಿಗೆ ಪದಾರ್ಪಣೆ ಮಾಡಿದ ಬುಮ್ರಾ, ಆ ಬಳಿಕ ಹಿಂದಿರುಗಿ ನೋಡಲಿಲ್ಲ. 2016ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದು, ಇದೀಗ ಟೀಂ ಇಂಡಿಯಾದ ಸ್ಟಾರ್ ಪ್ಲೇಯರ್ ಎನಿಸಿಕೊಂಡಿದ್ದಾರೆ. 

ಆದರೆ, ಅಮ್ಮನೊಂದಿಗಿನ ಫೋಟೋ ಹಾಕಿದರೂ ಮಂದಿ ಏಕೆ ಬೇಡದ್ದನ್ನು ಕಲ್ಪಿಸಿಕೊಳ್ಳುತ್ತಾರೋ ಎಂಬುವುದು ಮಾತ್ರ ಮಿಲಿಯನ್ ಡಾಲರ್ ಪ್ರಶ್ನೆ.