ಕರಾಚಿ(ಜೂ.29): ಪಾಕಿಸ್ತಾನ ತಂಡವನ್ನು ಸೆಮಿಫೈನಲ್‌ನಿಂದ ದೂರವಿಡಲು ಭಾರತ ತಂಡ ತನ್ನ ಕೊನೆ 2 ಲೀಗ್‌ ಪಂದ್ಯಗಳಲ್ಲಿ ಶ್ರೀಲಂಕಾ, ಬಾಂಗ್ಲಾದೇಶ ವಿರುದ್ಧ ಸೋಲು ಕಾಣಲಿದೆ ಎಂದು ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಬಸಿತ್‌ ಅಲಿ ಅತಿರೇಕದ ಹೇಳಿಕೆ ನೀಡಿದ್ದಾರೆ. ‘ಪಾಕಿಸ್ತಾನ ಸೆಮಿಫೈನಲ್‌ ಪ್ರವೇಶಿಸುವುದನ್ನು ಭಾರತ ಸಹಿಸುವುದಿಲ್ಲ. ಬಾಂಗ್ಲಾ, ಲಂಕಾ ವಿರುದ್ಧ ಬೇಕಂತಲೇ ಸೋಲಲಿದೆ ಎಂದಿದ್ದಾರೆ.

ಇದನ್ನೂ ಓದಿ: ಸುನಿಲ್‌ ಶೆಟ್ಟಿಪುತ್ರಿ ಜತೆ ಕೆ.ಎಲ್.ರಾಹುಲ್‌ ಡೇಟಿಂಗ್‌?

ಆಷ್ಘಾನಿಸ್ತಾನ ವಿರುದ್ಧ ಭಾರತ ಎಷ್ಟು ಕೆಟ್ಟಪ್ರದರ್ಶನ ತೋರಿತು ಎನ್ನುವುದನ್ನು ಎಲ್ಲರೂ ನೋಡಿದ್ದಾರೆ’. ಇನ್ನುಳಿದ 2 ಪಂದ್ಯದಲ್ಲಿ ಭಾರತ ಸೋಲು ಕಾಣುತ್ತೆ. ಈ ಮೂಲಕ ವಿಶ್ವಕಪ್ ಟೂರ್ನಿಯಿಂದ ಪಾಕಿಸ್ತಾನ ತಂಡವನ್ನು ಹೊರಗಿಡಲಿದೆ ಎಂದು ಸ್ಥಳೀಯ ಟೀವಿ ವಾಹಿನಿಯೊಂದರ ಕಾರ್ಯಕ್ರಮದಲ್ಲಿ ಬಸಿತ್ ಹೇಳಿದ್ದಾರೆ. ಲಂಕಾ, ಬಾಂಗ್ಲಾದೇಶ ಗೆದ್ದರೆ ಪಾಕಿಸ್ತಾನದ ಸೆಮೀಸ್‌ ಹಾದಿ ಕಠಿಣಗೊಳ್ಳಲಿದೆ.