ನವದೆಹಲಿ: ವಿಶ್ವಕಪ್‌ ಮುಕ್ತಾಯಗೊಂಡ ಬಳಿಕ ಭಾರತ ಕ್ರಿಕೆಟ್‌ ತಂಡ ವೆಸ್ಟ್‌ಇಂಡೀಸ್‌ ಪ್ರವಾಸ ಕೈಗೊಳ್ಳಲಿದ್ದು ವೇಳಾಪಟ್ಟಿ ಪ್ರಕಟಗೊಂಡಿದೆ. ಆ.3, ಆ.4ರಂದು ಅಮೆರಿಕದ ಫ್ಲೋರಿಡಾದಲ್ಲಿ ಮೊದಲೆರಡು ಟಿ20 ಪಂದ್ಯಗಳು ನಡೆಯಲಿವೆ. ಆ.6ರಂದು ಗಯಾನದಲ್ಲಿ 3ನೇ ಟಿ20 ನಡೆಯಲಿದೆ. 

ಇನ್ನು ಆಗಸ್ಟ್ 8ರಂದು ಗಯಾನದಲ್ಲಿ ಮೊದಲ ಏಕದಿನ, ಆ.11, ಆ.14ರಂದು ಟ್ರಿನಿಡಾಸ್‌ನಲ್ಲಿ 2ನೇ ಹಾಗೂ 3ನೇ ಏಕದಿನ ಪಂದ್ಯ ನಡೆಯಲಿದೆ. ಆ.22-26ರ ವರೆಗೂ ಆ್ಯಂಟಿಗಾದಲ್ಲಿ ಮೊದಲ ಟೆಸ್ಟ್‌, ಆ.30-ಸೆ.3ರ ವರೆಗೂ ಜಮೈಕಾದಲ್ಲಿ 2ನೇ ಟೆಸ್ಟ್‌ ನಿಗದಿಯಾಗಿದೆ.

ವಿಶ್ವಕಪ್ 2019: ಭಾರತದ ಹ್ಯಾಟ್ರಿಕ್‌ಗೆ ವರುಣನ ಕೃಪೆ?

ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯ ಜುಲೈ 14ರಂದು ಲಾರ್ಡ್ಸ್’ನಲ್ಲಿ ನಡೆಯಲಿದೆ. ವಿಶ್ವಕಪ್ ಟೂರ್ನಿ ಮುಗಿದು 15 ದಿನಗಳ ಬಳಿಕ ವಿರಾಟ್ ಪಡೆಗೆ ಕೆರಿಬಿಯನ್ ಟೆಸ್ಟ್ ಆರಂಭವಾಗಲಿದೆ.