ಟೀಂ ಇಂಡಿಯಾ ವೇಗಿ ಮೊಹಮ್ಮದ್ ಶಮಿಗೆ ಶ್ರೀಲಂಕಾ ವಿರುದ್ಧದ ಅಂತಿಮ ಲೀಗ್ ಪಂದ್ಯದಿಂದ ವಿಶ್ರಾಂತಿ ನೀಡಲಾಗಿತ್ತು. ಇದೀಗ ಶಮಿ ವಿಶ್ರಾಂತಿ ಹಿಂದೆ ಬಿಜೆಪಿ ಕೈವಾಡವಿದೆ ಅನ್ನೋ ಆರೋಪನ್ನು ಕ್ರಿಕೆಟ್ ವಿಶ್ಲೇಷಕ ಮಾಡಿದ್ದಾನೆ. 

ಕರಾಚಿ(ಜು.08): ವಿಶ್ವಕಪ್ ಟೂರ್ನಿಯಲ್ಲಿ ಟೀಂ ಇಂಡಿಯಾ ಸೆಮಿಫೈನಲ್ ಪಂದ್ಯಕ್ಕೆ ಸಜ್ಜಾಗಿದೆ. ಅಂತಿಮ ಲೀಗ್ ಪಂದ್ಯದಲ್ಲಿ ಶ್ರೀಲಂಕಾ ತಂಡವನ್ನು ಮಣಿಸಿದ ಭಾರತ, ಅಂಕಪಟ್ಟಿಯಲ್ಲಿ ಅಗ್ರಸ್ಥಾನದೊಂದಿಗೆ ಮೊದಲ ಸೆಮಿಫೈನಲ್ ಆಡಲು ಅರ್ಹತೆ ಪಡೆಯಿತು. ಲಂಕಾ ವಿರುದ್ಧದ ಪಂದ್ಯದಲ್ಲಿ ಟೀಂ ಇಂಡಿಯಾ ವೇಗಿ ಮೊಹಮ್ಮದ್ ಶಮಿ ಹಾಗೂ ಯಜುವೇಂದ್ರ ಚಹಾಲ್‌ಗೆ ವಿಶ್ರಾಂತಿ ನೀಡಲಾಗಿತ್ತು. ಇದೀಗ ಪಾಕಿಸ್ತಾನದಲ್ಲಿ ಭಾರಿ ಚರ್ಚೆಯಾಗಿದೆ.

ಇದನ್ನೂ ಓದಿ: 100 ವಿಕೆಟ್ ಕಬಳಿಸಿದ ಬುಮ್ರಾ; ದಾಖಲೆ ಜಸ್ಟ್ ಮಿಸ್..!

ಶ್ರೀಲಂಕಾ ವಿರುದ್ಧದ ಪಂದ್ಯದಿಂದ ಮೊಹಮ್ಮದ್ ಶಮಿಗೆ ವಿಶ್ರಾಂತಿ ನೀಡಲು ಬಿಜೆಪಿ ಒತ್ತಡವೇ ಕಾರಣ ಎಂದು ಪಾಕಿಸ್ತಾನ ವಾಹಿನಿಯಲ್ಲಿ ಕ್ರಿಕೆಟ್ ವಿಶ್ಲೇಷಕ ಹೊಸ ವಿವಾದ ಸೃಷ್ಟಿಸಿದ್ದಾನೆ. ಮುಸ್ಲಿಂ ಏಳಿಗೆಯನ್ನು ಬಿಜೆಪಿ ಸಹಿಸುತ್ತಿಲ್ಲ. ಮೂರು ಪಂದ್ಯಗಳಿಂದ 14 ವಿಕೆಟ್ ಕಬಳಿಸಿ ದಾಖಲೆ ಬರೆದ ಶಮಿ ಬೆಳವಣಿಗೆ ಸಹಿಸಿದ ಬಿಜೆಪಿ, ಶಮಿಗೆ ವಿಶ್ರಾಂತಿ ನೀಡುವಂತೆ ಟೀಂ ಇಂಡಿಯಾದ ಮೇಲೆ ಒತ್ತಡ ಹೇರಿದೆ ಎಂದಿದ್ದಾನೆ.

Scroll to load tweet…

ಇದನ್ನೂ ಓದಿ: ಶಮಿ ಮುಸಲ್ಮಾನ ಎಂದು ಕ್ರೀಡೆಯಲ್ಲಿ ಧರ್ಮ ಎಳೆದ ಪಾಕ್ ಕ್ರಿಕೆಟಿಗ

ಪಾಕಿಸ್ತಾನ ವಾಹಿನಿಯಲ್ಲಿ ಧರ್ಮ ಎಳೆದು ತರುತ್ತಿರುವುದು ಇದೇ ಮೊದಲಲ್ಲ. ಪಾಕಿಸ್ತಾನ ಮಾಜಿ ಅಲ್ರೌಂಡರ್ ಅಬ್ದುಲ್ ರಜಾಕ್ ಕೂಡ ಮೊಹಮ್ಮದ್ ಶಮಿ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಇದಕ್ಕೆ ಕಾರಣ ಶಮಿ ಓರ್ವ ಮುಸ್ಲಿಂ ಎಂದಿದ್ದರು. ಇದೀಗ ಮುಸ್ಲಿಂ ಅನ್ನೋ ಕಾರಣಕ್ಕೆ ಬಿಜೆಪಿ ಒತ್ತಡಿಂದ ಶಮಿಗೆ ವಿಶ್ರಾಂತಿ ನೀಡಲಾಗಿದೆ ಎಂದು ಹೊಸ ವಿವಾದ ಸೃಷ್ಟಿಸಿದ್ದಾನೆ.