ಮ್ಯಾಂಚೆಸ್ಟರ್(ಜು.10): ವಿಶ್ವಕಪ್ ಮೊದಲ ಸೆಮಿಫೈನಲ್ ಕುತೂಹಲ ಇದೀಗ ಎರಡನೇ ದಿನಕ್ಕೆ ಕಾಲಿಟ್ಟಿದೆ. ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ ಸೆಮಿಫೈನಲ್ ಪಂದ್ಯ ಮೊದಲ ದಿನದಲ್ಲಿ ಮಳೆಗೆ ತುತ್ತಾಗಿತ್ತು. ಹೀಗಾಗಿ ರಿಸರ್ವ್ ಡೇಗೆ(ಜು.10) ಮುಂದೂಡಲಾಗಿತ್ತು. ಇದೀಗ ಕೆಲವೇ ಕ್ಷಣಗಳಲ್ಲಿ ಪಂದ್ಯ ಆರಂಭಗೊಳ್ಳಲಿದೆ. ಭಾರತೀಯ ಕಾಲಮಾನದ ಪ್ರಕಾರ 3 ಗಂಟೆಗೆ ಪಂದ್ಯ ಆರಂಭಗೊಳ್ಳಲಿದೆ. 

ಇದನ್ನೂ ಓದಿ: ಮೀಸಲು ದಿನಕ್ಕೆ ಪಂದ್ಯ: ಭಾರತಕ್ಕೇನು ಲಾಭ..?

ಜುಲೈ 09ರಂದು ಭಾರತ ಹಾಗೂ ನ್ಯೂಜಿಲೆಂಡ್ ಸೆಮಿಫೈನಲ್ ಪಂದ್ಯ ಆಯೋಜಿಸಲಾಗಿತ್ತು. ಟಾಸ್ ಗೆದ್ದು ಬ್ಯಾಟಿಂಗ್ ಇಳಿದ ನ್ಯೂಜಿಲೆಂಡ್ ನಿಧಾಗತಿಯಲ್ಲಿ ಬ್ಯಾಟಿಂಗ್ ಆರಂಭಿಸಿತು. ವಿಕೆಟ್ ಉಳಿಸಿಕೊಂಡು ಹೋರಾಟ ನೀಡಿದ ನ್ಯೂಜಿಲೆಂಡ್ 46.1 ಓವರ್‌ಗಳಲ್ಲಿ 211 ರನ್ ಸಿಡಿಸಿತ್ತು. ಈ ವೇಳೆ ಸುರಿದ ಮಳೆಯಿಂದಾಗಿ ಪಂದ್ಯ ಮತ್ತೆ ಪುನರ್ ಆರಂಭಗೊಳ್ಳಲಿಲ್ಲ. ದಿನವಿಡಿ ಕಾದ ಮ್ಯಾಚ್ ರೆಫ್ರಿಗೆ ಪಂದ್ಯ ನಡೆಸಲು ಮಳೆ ಅನುವು ಮಾಡಿಕೊಡಲಿಲ್ಲ. ಹೀಗಾಗಿ ಪಂದ್ಯವನ್ನು ಮೀಸಲು ದಿನಕ್ಕೆ ಮುಂದೂಡಲಾಯಿತು.

ಇದನ್ನೂ ಓದಿ: ಹೊಸ ಇನ್ನಿಂಗ್ಸ್ ಆರಂಭಿಸಿದ 87ರ ಹರೆಯದ ಟೀಂ ಇಂಡಿಯಾ ಅಭಿಮಾನಿ!

ಮೀಸಲು ದಿನದಲ್ಲಿ ನ್ಯೂಜಿಲೆಂಡ್ ಬಾಕಿ ಉಳಿದಿರುವ 23 ಎಸೆತ ಎದುರಿಸಲಿದೆ. ಈ ಮೂಲಕ ಭಾರತಕ್ಕೆ ಟಾರ್ಗೆಟ್ ನೀಡಲಿದೆ. ಇಂದು ಮಳೆ ಸಾಧ್ಯತೆ ಕಡಿಮೆ ಇದ್ದು, ರೋಚಕ ಹೋರಾಟ ನಿರೀಕ್ಷಿಸಲಾಗಿದೆ.