ಮ್ಯಾಂಚೆಸ್ಟರ್‌ (ಜು.12): ರೌಂಡ್‌ ರಾಬಿನ್‌ ಹಂತದಲ್ಲಿ ಆಕರ್ಷಕ ಪ್ರದರ್ಶನ ತೋರಿ ವಿಶ್ವಕಪ್‌ ಟ್ರೋಫಿ ಗೆಲ್ಲುವ ನೆಚ್ಚಿನ ತಂಡ ಎನಿಸಿಕೊಂಡಿದ್ದ ಭಾರತ, ಸೆಮಿಫೈನಲ್‌ನಲ್ಲಿ ಸಾಧಾರಣ ಪ್ರದರ್ಶನ ತೋರಿದ ಕಾರಣ ಟೂರ್ನಿಯಿಂದ ಹೊರಬಿತ್ತು. ಈ ಮೂಲಕ ಒಂದು ತಪ್ಪಿಗೆ ಟೀಂ ಇಂಡಿಯಾ ಬಹು ದೊಡ್ಡ  ದಂಡ ತೇರಬೇಕಾಯಿತು. ಹೀಗಾಗಿ ನಾಯಕ ವಿರಾಟ್ ಕೊಹ್ಲಿ, ವಿಶ್ವಕಪ್ ಟೂರ್ನಿಯಲ್ಲಿ ಐಪಿಎಲ್ ಮಾದರಿ ಅನುಸರಿಸಲು ಇಂಗಿತ ವ್ಯಕ್ತಪಿಸಿದ್ದಾರೆ.

ಇದನ್ನೂ ಓದಿ: ಆಸ್ಟ್ರೇಲಿಯಾ ಮಣಿಸಿದ ಇಂಗ್ಲೆಂಡ್‌ಗೆ ವಿಶ್ವಕಪ್ ಫೈನಲ್ ಟಿಕೆಟ್!

ಒಂದೇ ಒಂದು ಪಂದ್ಯದಲ್ಲಿ ಉತ್ತಮ ಆಟವಾಡದೆ ಇರುವ ಕಾರಣ ಟ್ರೋಫಿ ಕನಸು ಭಗ್ನಗೊಂಡಿದ್ದಕ್ಕೆ ಬೇಸರ ವ್ಯಕ್ತಪಡಿಸಿರುವ ಕೊಹ್ಲಿ, ವಿಶ್ವಕಪ್‌ನಲ್ಲೂ ಐಪಿಎಲ್‌ ರೀತಿ ಪ್ಲೇ-ಆಫ್‌ ಮಾದರಿ ಅಳವಡಿಸಲು ಐಸಿಸಿ ಚಿಂತನೆ ನಡೆಸಬೇಕು ಎಂದಿದ್ದಾರೆ. ಪ್ಲೇ ಆಫ್ ಮಾದರಿಯಲ್ಲಿ ಅಗ್ರಸ್ಥಾನ ಪಡೆದ ತಂಡಕ್ಕೆ ಫೈನಲ್ ಪ್ರವೇಶಿಸಲು 2 ಅವಕಾಶಗಳಿರುತ್ತೆ.

ಇದನ್ನೂ ಓದಿ: ದಡ ಸೇರೋ ಮುನ್ನ ಮುಳುಗಿದ ಭಾರತದ ಕ್ರಿಕೆಟ್ ಟೈಟಾನಿಕ್!

‘ಭವಿಷ್ಯದಲ್ಲಿ ವಿಶ್ವಕಪ್‌ನಲ್ಲೂ ಪ್ಲೇ-ಆಫ್‌ ಬರಬಹುದು. ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಪಡೆಯುವುದಲ್ಲಿ ಅರ್ಥವಿಲ್ಲ ಎನ್ನುವಂತಾಗುತ್ತದೆ. ಟೂರ್ನಿಯ ಪ್ರಮಾಣವನ್ನು ಗಮನದಲ್ಲಿಟ್ಟುಕೊಂಡು ಪ್ಲೇ-ಆಫ್‌ ಅಳವಡಿಸುವುದು ಸೂಕ್ತ’ ಎಂದು ಕೊಹ್ಲಿ ಹೇಳಿದ್ದಾರೆ.