ಭಾರತ ವಿರುದ್ಧದ ಸೆಮಿಫೈನಲ್ ಪಂದ್ಯಕ್ಕೂ ಮುನ್ನ ನ್ಯೂಜಿಲೆಂಡ್‌ಗೆ ವೆಟೋರಿ ಟಿಪ್ಸ್!
ಭಾರತ ಹಾಗೂ ನ್ಯೂಜಿಲೆಂಡ್ ಸೆಮಿಫೈನಲ್ ಪಂದ್ಯಕ್ಕೆ ವೇದಿಕೆ ಸಜ್ಜಾಗಿದೆ. ಮಹತ್ವದ ಪಂದ್ಯಕ್ಕೂ ಮುನ್ನ ನ್ಯೂಜಿಲೆಂಡ್ ತಂಡಕ್ಕೆ ಮಾಜಿ ಕ್ರಿಕೆಟಿಗ ಡೆನಿಯಲ್ ವೆಟೋರಿ ಸಲಹೆ ನೀಡಿದ್ದಾರೆ. ವೆಟೋರಿ ಸಲಹೆ ಏನು? ಇಲ್ಲಿದೆ ವಿವರ.
ಲಂಡನ್(ಜು.08): ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ ಸೆಮಿಫೈನಲ್ ಹೋರಾಟಕ್ಕೆ ಕೌಂಟ್‌ಡೌನ್ ಶುರುವಾಗಿದೆ. ಸೆಮೀಸ್ ಹೋರಾಟದಲ್ಲಿ ಗೆಲುವು ಯಾರಿಗೆ ಅನ್ನೋ ಕುತೂಹಲವೂ ಹೆಚ್ಚಾಗುತ್ತಿದೆ. ಇದರ ಬೆನ್ನಲ್ಲೇ ನ್ಯೂಜಿಲೆಂಡ್ ತಂಡಕ್ಕೆ ಮಾಜಿ ಕ್ರಿಕೆಟಿಗ ಡೇನಿಯಲ್ ವೆಟೋರಿ ಸಲಹೆ ನೀಡಿದ್ದಾರೆ. ಟೀಂ ಇಂಡಿಯಾ ವೇಗಿ ಜಸ್ಪ್ರೀತ್ ಬುಮ್ರಾ ಎದುರಿಸುವುದ ಕಷ್ಟ ಎಂದಿದ್ದಾರೆ.
ಇದನ್ನೂ ಓದಿ: ಸೆಮೀಸ್‌ಗೂ ಮುನ್ನ ಹೀಗಿದೆ ನೋಡಿ ಟೀಂ ಇಂಡಿಯಾ ಪ್ರದರ್ಶನ
ಈ ವಿಶ್ವಕಪ್ ಟೂರ್ನಿಯಲ್ಲಿರುವ ಡೇಂಜರಸ್ ಬೌಲರ್‌ಗಳ ಪೈಕಿ ಬುಮ್ರಾ ಅಗ್ರಸ್ಥಾನದಲ್ಲಿದ್ದಾರೆ. ಬುಮ್ರಾ ಎದುರಿಸುವುದೇ ಬ್ಯಾಟ್ಸ್‌ಮನ್‌ಗಳಿಗೆ ಅತಿ ದೊಡ್ಡ ಸವಾಲು. ಇಂಗ್ಲೆಂಡ್ ವಿರುದ್ಧ ಪಂದ್ಯದಲ್ಲೂ ಬುಮ್ರಾ ಉತ್ತಮ ಬೌಲಿಂಗ್ ಪ್ರದರ್ಶನ ನೀಡಿದ್ದಾರೆ. ಆದರೆ ಇತರ ಬೌಲರ್‌ಗಳಿಂದ ನಿರೀಕ್ಷಿತ ಪ್ರದರ್ಶನ ಮೂಡಿ ಬರಲಿಲ್ಲ. ಹೀಗಾಗಿ ಬುಮ್ರಾ ಎದುರಿಸುವತ್ತ ನ್ಯೂಜಿಲೆಂಡ್ ಚಿತ್ತ ಹರಿಸಬೇಕು ಎಂದಿದ್ದಾರೆ.
ಇದನ್ನೂ ಓದಿ: ವಿಶ್ವಕಪ್ ಫೈನಲ್ ಭವಿಷ್ಯ ನುಡಿದ ಜಾಂಟಿ ರೋಡ್ಸ್
ಭಾರತದ ಮಧ್ಯಮ ಕ್ರಮಾಂಕ ವಿಫಲವಾಗಿದೆ. ಹೀಗಾಗಿ ಆರಂಭದಲ್ಲೇ ವಿಕೆಟ್ ಕಬಳಿಸಿ ಭಾರತದ ಮೇಲೆ ಒತ್ತಡ ಹೇರಿದರೆ ಮಾತ್ರ ಯಶಸ್ಸು ಸಾಧಿಸಲು ಸಾಧ್ಯ. ಭಾರತದ ಆರಂಭಿಕರ ಹೋರಾಟ ತಂಡಕ್ಕೆ ನೆರವಾಗುತ್ತಿದೆ. ಟೀಂ ಇಂಡಿಯಾ ಬೃಹತ್ ಮೊತ್ತ ಪೇರಿಸುತ್ತಿದೆ. ಈ ಕುರಿತು ನ್ಯೂಜಿಲೆಂಡ್ ಎಚ್ಚರ ವಹಿಸಬೇಕು ಎಂದು ವೆಟೋರಿ ಹೇಳಿದ್ದಾರೆ. ಜುಲೈ 9 ರಂದು ಮ್ಯಾಂಚೆಸ್ಟರ್‌ನಲ್ಲಿ ಭಾರತ ಹಾಗೂ ನ್ಯೂಜಿಲೆಂಡ್ ಮೊದಲ ಸೆಮಿಫೈನಲ್ ಪಂದ್ಯ ಆಡಲಿದೆ.