Asianet Suvarna News Asianet Suvarna News

ವಿಶ್ವಕಪ್ 2019: ಇಂಗ್ಲೆಂಡ್ ಸೇರಿದಂತೆ 10 ತಂಡ ಪಡೆದ ಪ್ರಶಸ್ತಿ ಮೊತ್ತ ಇಲ್ಲಿದೆ!

ವಿಶ್ವಕಪ್ ಟ್ರೋಫಿ ಗೆದ್ದ ಇಂಗ್ಲೆಂಡ್, ರನ್ನರ್ ಅಪ್ ಪ್ರಶಸ್ತಿ ಪಡೆದ ನ್ಯೂಜಿಲೆಂಡ್ ತಂಡ ಪಡೆದ ಪ್ರಶಸ್ತಿ ಮೊತ್ತ ಎಷ್ಟು? ಇದರೊಂದಿಗೆ ಭಾರತ, ಆಸ್ಟ್ರೇಲಿಯಾ ಹಾಗೂ ಲೀಗ್ ಹಂತದಿಂದ ಹೊರಬಿದ್ದ ಪ್ರತಿ ತಂಡಗಳು ಪಡೆದ ಪ್ರಶಸ್ತಿ ಮೊತ್ತದ ವಿವರ ಇಲ್ಲಿದೆ.

World cup 2019 england to afghanistan each team prize money list
Author
Bengaluru, First Published Jul 16, 2019, 3:04 PM IST
  • Facebook
  • Twitter
  • Whatsapp

ಲಾರ್ಡ್ಸ್(ಜು.16): ವಿಶ್ವಕಪ್ ಟೂರ್ನಿ ಮುಗಿದರೂ ರೋಚಕ ಫೈನಲ್ ಪಂದ್ಯ ಇನ್ನೂ ಕ್ರಿಕೆಟ್ ಅಭಿಮಾನಿಗಳಿಗೆ ಮತ್ತೆ ಮತ್ತೆ ನೆನಪಾಗುತ್ತಿದೆ. ಸೂಪರ್ ಓವರ್ ಮೂಲಕ ಇಂಗ್ಲೆಂಡ್ ಚಾಂಪಿಯನ್ ಪಟ್ಟ ಅಲಂಕರಿಸಿದರೆ, ನ್ಯೂಜಿಲೆಂಡ್ ರನ್ನರ್ ಅಪ್ ಪ್ರಶಸ್ತಿಗೆ ತೃಪ್ತಿ ಪಟ್ಟುಕೊಂಡಿದೆ. ಟ್ರೋಫಿ ಗೆದ್ದ ಇಂಗ್ಲೆಂಡ್ ತಂಡ ಬರೋಬ್ಬರಿ 29 ಕೋಟಿ ರೂಪಾಯಿ ಪ್ರಶಸ್ತಿ ಮೊತ್ತ ಪಡೆದಿದೆ.

ಇದನ್ನೂ ಓದಿ: ವಿಶ್ವಕಪ್ 2019: ಅಂಪೈರ್‌ ಗಳ ಭಾರೀ ಎಡವಟ್ಟು

ರನ್ನರ್ ಅಪ್ ಪ್ರಶಸ್ತಿ ಗೆದ್ದ ನ್ಯೂಜಿಲೆಂಡ್ ತಂಡ 15 ಕೋಟಿ ರೂಪಾಯಿ ಮೊತ್ತವನ್ನು ಬಹುಮಾನ ರೂಪದಲ್ಲಿ ಪಡೆದಿದೆ. ಇನ್ನು ಸೆಮಿಫೈನಲ್ ಪಂದ್ಯದಲ್ಲಿ ಮುಗ್ಗರಿಸಿ ಟೂರ್ನಿಯಿಂದ ಹೊರಬಿದ್ದ ಟೀಂ ಇಂಡಿಯಾ ಹಾಗೂ ಆಸ್ಟ್ರೇಲಿಯಾ ತಲಾ 7 ಕೋಟಿ ರೂಪಾಯಿ ಬಹುಮಾನ ಮೊತ್ತ ಪಡೆದಿದೆ.

ಇದನ್ನೂ ಓದಿ: ಏಕದಿನ ವಿಶ್ವಕಪ್‌ಗೆ ಅದ್ಧೂರಿ ತೆರೆ: 2019ರ ವಿಶ್ವಕಪ್ ಪ್ರಮುಖಾಂಶಗಳಿವು

ಐಸಿಸಿ ವಿಶ್ವಕಪ್ ಟೂರ್ನಿಯಲ್ಲಿ ಪಾಲ್ಗೊಂಡ 10 ತಂಡಗಳ ಪ್ರಶಸ್ತಿ ಮೊತ್ತ:
ಚಾಂಪಿಯನ್- ಇಂಗ್ಲೆಂಡ್: 29,05,82,040 ರೂ
ರನ್ನರ್ ಅಪ್-ನ್ಯೂಜಿಲೆಂಡ್: 7,40,16,180 ರೂ
ಸೆಮಿಫೈನಲ್- ಟೀಂ ಇಂಡಿಯಾ:7,40,16,180 ರೂ
ಸೆಮಿಫೈನಲ್- ಆಸ್ಟ್ರೇಲಿಯಾ: 7,40,16,180 ರೂ
5ನೇ ಸ್ಥಾನ- ಪಾಕಿಸ್ತಾನ: 2,05,60,050 ರೂ
6ನೇ ಸ್ಥಾನ- ಶ್ರೀಲಂಕಾ: 1,50,77,370 ರೂ
7ನೇ ಸ್ಥಾನ- ಸೌತ್ ಆಫ್ರಿಕಾ: 1,50,77,370 ರೂ
8ನೇ ಸ್ಥಾನ - ಬಾಂಗ್ಲಾದೇಶ: 1,50,77,370 ರೂ
9ನೇ ಸ್ಥಾನ- ವೆಸ್ಟ್ ಇಂಡೀಸ್: 1,23,36,030 ರೂ
10ನೇ ಸ್ಥಾನ- ಆಫ್ಘಾನಿಸ್ತಾನ: 68,53,350 ರೂ

Follow Us:
Download App:
  • android
  • ios