ಸೌಥಾಂಪ್ಟನ್[ಜೂ.24]: ಜೂ.30ರಂದು ಇಂಗ್ಲೆಂಡ್ ವಿರುದ್ಧ ನಡೆಯಲಿರುವ ಪಂದ್ಯದಲ್ಲಿ ಭಾರತ, ಕಿತ್ತಳೆ ವರ್ಣದ ಜರ್ಸಿಯಲ್ಲಿ ಕಣಕ್ಕಿಳಿಯಲಿದೆ ಎನ್ನಲಾಗಿದೆ. ಇದರೊಂದಿಗೆ ಭಾರತ ತಂಡದ ಹೊಸ ಜರ್ಸಿ ಹೇಗಿರಲಿದೆ ಎಂಬ ಕುತೂಹಲ ಮತ್ತಷ್ಟು ಹೆಚ್ಚಾಗಿದೆ. 

ಕಿತ್ತಳೆ ಹಾಗೂ ಕಡು ನೀಲಿ ಮಿಶ್ರಿತ ಬಣ್ಣದ ಜರ್ಸಿಯೊಂದರ ಫೋಟೋ ಆನ್ ಲೈನ್‌ನಲ್ಲಿ ವೈರಲ್ ಆಗಿದ್ದು, ಇದೇ ಭಾರತದ ಹೊಸ ಜರ್ಸಿ ಎನ್ನಲಾಗಿದೆ.

ಐಸಿಸಿ ನಿಯಮದಂತೆ 2 ತಂಡಗಳು ಒಂದೇ ಬಣ್ಣದ ಜರ್ಸಿ ತೊಡುವಂತಿಲ್ಲ. ಈ ಪ್ರಕಾರ ಇಂಗ್ಲೆಂಡ್ ತನ್ನ ಜರ್ಸಿ ತೊಡುವ ಅವಕಾಶವಿದ್ದು, ಭಾರತ ಬೇರೆ ವರ್ಣದ ಜರ್ಸಿ ತೊಡಬೇಕಿದೆ. ಪ್ರೇಕ್ಷಕರಿಗೆ ಗೊಂದಲವಾಗಬಾರದು ಎನ್ನುವ ಉದ್ದೇಶ ಇದಾಗಿದೆ.