ಬೆಂಗಳೂರು[ಜು.14]: ವೆಸ್ಟ್ ಇಂಡೀಸ್ ಕ್ರಿಕೆಟ್ ತಂಡದ ಸ್ಫೋಟಕ ಬ್ಯಾಟ್ಸ್ ಮನ್ ಕ್ರಿಸ್ ಗೇಲ್ ಹಾಗೂ ಹೆಂಡದ ದೊರೆ ವಿಜಯ್ ಮಲ್ಯ ಮುಖಾಮುಖಿಯಾದ ಅಪರೂಪದ ಚಿತ್ರವನ್ನು ಗೇಲ್ ತಮ್ಮ ಟ್ವಿಟರ್ ಅಕೌಂಟ್ ನಲ್ಲಿ ಹಂಚಿಕೊಂಡಿದ್ದಾರೆ. 

ಐಪಿಎಲ್’ನಲ್ಲಿ ವಿಜಯ್ ಮಲ್ಯ ಒಡೆತನದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ 7 ವರ್ಷಗಳ ಕಾಲ ಗೇಲ್ ಬ್ಯಾಟ್ ಬೀಸಿದ್ದರು. ಇದೀಗ ಮಲ್ಯ ಭೇಟಿ ಮಾಡಿದ ಬೆನ್ನಲ್ಲೇ ಗೇಲ್ ತಮ್ಮ ಟ್ವಿಟರ್’ನಲ್ಲಿ ಗ್ರೇಟ್ ಟು ಕ್ಯಾಚ್ ವಿತ್ ಬಿಗ್ ಬಾಸ್ ಎಂದು ಟ್ವೀಟ್ ಮಾಡಿದ್ದಾರೆ. 

ಸಾವಿರಾರು ಕೋಟಿ ರುಪಾಯಿ ವಂಚಿಸಿ ದೇಶ ತೊರೆದಿರುವ ಮಲ್ಯರನ್ನು ಕಂಡ ಭಾರತೀಯ ಮಂದಿ, ಅವರನ್ನು ಭಾರತಕ್ಕೆ ಕೊರಿಯರ್ ಮಾಡಿ ಎಂದು ಮನವಿ ಮಾಡಿದ್ದಾರೆ. 
ನಾನು ಒಂದು ವರ್ಷದಿಂದ ಹಣ ವಾಪಾಸ್ ನೀಡುತ್ತೇನೆ ಎಂದು ಹೇಳುತ್ತಲೇ ಬಂದಿದ್ದೇನೆ. ಯಾರೆಲ್ಲಾ ನೀವು ನನ್ನನ್ನು ಕಳ್ಳ ಎನ್ನುತ್ತಿದ್ದೀರೋ ನೀವು ನಿಮ್ಮ ಬ್ಯಾಂಕ್’ಗೆ ಹೋಗಿ ಕೇಳಿ. ಆಮೇಲೆ ಯಾರು ಕಳ್ಳ ಎಂದು ನಿರ್ಧರಿಸಿ ಎಂದಿದ್ದಾರೆ.