ಬೆಂಗಳೂರು(ಜು.03): ವಿಶ್ವಕಪ್ ಟೂರ್ನಿ ಅಂತಿಮ ಘಟ್ಟ ತಲುಪುತ್ತಿದ್ದಂತೆ ರೋಚಕತೆ ಹೆಚ್ಚಾಗುತ್ತಿದೆ. ವಿಶ್ವಕಪ್ ಜ್ವರ ಎಲ್ಲಡೆ ಆವರಿಸುತ್ತಿದೆ. ಈಗಾಗಲೇ ಟೀಂ ಇಂಡಿಯಾ ಸೆಮಿಫೈನಲ್ ಪ್ರವೇಶವನ್ನು ಖಚಿತಪಡಿಸಿದೆ. ಹೀಗಾಗಿ  ಭಾರತೀಯರು ನಿರೀಕ್ಷೆಗಳು ಇಮ್ಮಡಿಯಾಗಿದೆ. ಇದೀಗ ಬೆಂಗಳೂರಿನ ಅಕ್ಕಸಾಲಿಗ ನಾಗರಾಜ್ ರೇವಣಕರ್ ಚಿನ್ನದಲ್ಲೇ ವಿಶ್ವಕಪ್ ಟ್ರೋಫಿ ನಿರ್ಮಿಸಿದ್ದಾರೆ.

ಇದನ್ನೂ ಓದಿ: ಸಿಕ್ಸರ್ ಚೆಂಡು ಬಡಿದ ಅಭಿಮಾನಿಗೆ ಸ್ಪೆಷಲ್ ಗಿಫ್ಟ್ ನೀಡಿದ ರೋಹಿತ್!

 

ಟೀಂ ಇಂಡಿಯಾದ ಅಭಿಮಾನಿಯಾಗಿರುವ ನಾಗರಾಜ್ ಅಕ್ಕಸಾಲಿಗನಾಗಿ ಕೆಲಸ ಮಾಡುತ್ತಿದ್ದಾರೆ. ಜುವೆಲ್ಲರಿ ಶಾಪ್ ಇಟ್ಟುಕೊಂಡಿರುವ ನಾಗರಾಜ್, ಟೀಂ ಇಂಡಿಯಾ ಮೇಲಿನ ಅಭಿಮಾನಕ್ಕೆ  0.490 ಮಿಲಿ ಗ್ರಾಂ ಚಿನ್ನದಲ್ಲಿ 1.5 ಸೆಂಟಿ ಮೀಟರ್ ಎತ್ತರದ ಮಿನಿ ಟ್ರೋಫಿ ನಿರ್ಮಿಸಿದ್ದಾರೆ. ಇದೀಗ ನಾಗರಾಜ್ ಪ್ರಯತ್ನಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.