ಇಸ್ಲಮಾಬಾದ್[ಜೂ.17]: 1992ರ ವಿಶ್ವಕಪ್‌ ವಿಜೇತ ನಾಯಕ, ಪಾಕಿಸ್ತಾನದ ಪ್ರಧಾನಿ ಇಮ್ರಾನ್‌ ಖಾನ್‌ ಪಂದ್ಯ ಆರಂಭಗೊಳ್ಳುವ ಕೆಲ ಗಂಟೆಗಳ ಮೊದಲು ಟ್ವೀಟರ್‌ನಲ್ಲಿ ತಂಡಕ್ಕೆ ಶುಭ ಕೋರಿದ್ದರು. ಜತೆಗೆ ಕೆಲ ಸಲಹೆಗಳನ್ನೂ ನೀಡಿದ್ದರು.

ಪಾಕ್‌ ನಾಯಕ ಸರ್ಫರಾಜ್‌ ಟಾಸ್‌ ಗೆದ್ದರೆ ಮೊದಲು ಬ್ಯಾಟಿಂಗ್‌ ಆಯ್ಕೆ ಮಾಡಿಕೊಳ್ಳಬೇಕು ಎಂದು ಇಮ್ರಾನ್‌ ಟ್ವೀಟ್‌ ಮಾಡಿದ್ದರು. ಆದರೆ ಟಾಸ್‌ ಗೆದ್ದ ಸರ್ಫರಾಜ್‌ ಮೊದಲು ಫೀಲ್ಡಿಂಗ್‌ ಮಾಡಲು ನಿರ್ಧರಿಸಿದರು.

ಪ್ರಧಾನಿ ಮಾತಿಗೇ ಕಿಮ್ಮತ್ತು ನೀಡಲಿಲ್ಲ ಎಂದು ಸಾಮಾಜಿಕ ತಾಣಗಳಲ್ಲಿ ಭಾರತೀಯ ಅಭಿಮಾನಿಗಳು ಪಾಕ್‌ ತಂಡದ ಕಾಲೆಳೆದಿದ್ದಾರೆ.