ಸೌಥಾಂಪ್ಟನ್(ಜೂ.04): ವಿಶ್ವಕಪ್ ಟೂರ್ನಿಯಲ್ಲಿ ಪಾಕಿಸ್ತಾನ ಸೋಲಿನಿಂದ ಕಮ್‌ಬ್ಯಾಕ್ ಮಾಡಿದರೆ, ಬಾಂಗ್ಲಾದೇಶ ಬಲಿಷ್ಠ ಸೌತ್ಆಫ್ರಿಕಾ ತಂಡವನ್ನೇ ಸೋಲಿಸಿ ಸಂಭ್ರಮಿಸುತ್ತಿದೆ. ಇದೀಗ ಟೀಂ ಇಂಡಿಯಾ ಅಖಾಡಕ್ಕಿಳಿಯುತ್ತಿದೆ. ಸೌತ್ಆಫ್ರಿಕಾ ವಿರುದ್ದದ ಮೊದಲ ಪಂದ್ಯಕ್ಕೆ ವಿರಾಟ್ ಕೊಹ್ಲಿ ಸೈನ್ಯ ಸಜ್ಜಾಗುತ್ತಿದೆ. 

ಇದನ್ನೂ ಓದಿ: ಪಂದ್ಯಕ್ಕೂ ಮುನ್ನ ವಿಶ್ವಕಪ್ ಟೂರ್ನಿಯಿಂದ ಹೊರಬಿದ್ದ ಸ್ಟಾರ್ ವೇಗಿ..!

ಸೌಥಾಂಪ್ಟನ್‌ ಕಂಡೀಷನ್‌ಗೆ ಅನುಗುಣವಾಗಿ  ತಂಡ ಆಯ್ಕೆ ಮಾಡಲಿರುವ ಟೀಂ ಇಂಡಿಯಾ ಅಳೆದು ತೂಗಿ ಆಟಗಾರರ ಆಯ್ಕೆ ಮಾಡಲಿದೆ. ಮೋಡ ಕವಿದ ವಾತಾವರಣವಿರುದರಿಂದ 3ನೇ ವೇಗಿಯಾಗಿ ಭುವನೇಶ್ವರ್ ಕುಮಾರ್‌ಗೆ ಅವಕಾಶ ನೀಡೋ ಸಾಧ್ಯತೆ ಹೆಚ್ಚಿದೆ. ಕೇದಾರ್ ಜಾಧವ್‌ಗೆ ವಿಶ್ರಾಂತಿ ನೀಡಿ ರವೀಂದ್ರ ಜಡೇಜಾಗೆ ಅವಕಾಶ ನೀಡುವ ಸಾಧ್ಯತೆ ಇದೆ.

ಇದನ್ನೂ ಓದಿ: ಸೋಲಿನ ಬೆನ್ನಲ್ಲೇ ಇಂಗ್ಲೆಂಡ್‌ಗೆ ಮತ್ತೊಂದು ಶಾಕ್!

ಸೌತ್ಆಫ್ರಿಕಾ ವಿರುದ್ಧದ ಪಂದ್ಯಕ್ಕೆ ಸಂಭವನೀಯ ಟೀಂ ಇಂಡಿಯಾ:
ರೋಹಿತ್ ಶರ್ಮಾ, ಶಿಖರ್ ಧವನ್, ವಿರಾಟ್ ಕೊಹ್ಲಿ(ನಾಯಕ), ಕೆಎಲ್ ರಾಹುಲ್, ಎಂ.ಎಸ್.ಧೋನಿ, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ. ಭುವನೇಶ್ವರ್ ಕುಮಾರ್, ಕುಲ್ದೀಪ್ ಯಾದವ್, ಮೊಹಮ್ಮದ್ ಶಮಿ, ಜಸ್ಪ್ರೀತ್ ಬುಮ್ರಾ