ಲಂಡನ್(ಜೂ.03): ವಿಶ್ವಕಪ್ ಟೂರ್ನಿ ಆರಂಭವಾಗಿದೆ. ಆದರೆ ಈ ಬಾರಿ ಪ್ರಶಸ್ತಿ ಗೆಲ್ಲೋ ತಂಡ ಯಾವುದು ಅನ್ನೋ ಕುತೂಹಲ ಹೆಚ್ಚಾಗುತ್ತಲೇ ಇದೆ. ಹಲವು ದಿಗ್ಗಜ ಕ್ರಿಕೆಟಿಗರು ಗೆಲುವಿನ ಕುರಿತು ಭವಿಷ್ಯ ನುಡಿದಿದ್ದಾರೆ.  ಇದೀಗ ನ್ಯೂಜಿಲೆಂಡ್ ಮಾಜಿ ನಾಯಕ ಬ್ರೆಂಡನ್ ಮೆಕ್ಕಲಂ ವಿಶ್ವಕಪ್ ಟೂರ್ನಿ ಗೆಲ್ಲೋ ತಂಡದ ಕುರಿತು ಭವಿಷ್ಯ ನುಡಿದಿದ್ದಾರೆ. 

ಇದನ್ನೂ ಓದಿ: ಭಾರತ ವಿರುದ್ಧ ಪಂದ್ಯಕ್ಕೂ ಮುನ್ನ ದಕ್ಷಿಣ ಆಫ್ರಿಕಾದಿಂದ ಮತ್ತೊರ್ವ ಔಟ್!

ಮೆಕ್ಕಲಂ ಪ್ರಕಾರ ಇಂಗ್ಲೆಂಡ್ ಹಾಗೂ ಟೀಂ ಇಂಡಿಯಾ ಮೊದಲೆರಡು ತಂಡವಾಗಿ ಸೆಮಿಫೈನಲ್ ಪ್ರವೇಶಿಸಲಿದೆ. ಇನ್ನು ಆಸ್ಟ್ರೇಲಿಯಾ 6 ಲೀಗ್ ಪಂದ್ಯ ಗೆಲ್ಲಲಿದೆ. ಆದರೆ ಭಾರತ, ವೆಸ್ಟ್ ಇಂಡೀಸ್ ಹಾಗೂ ಪಾಕಿಸ್ತಾನ ವಿರುದ್ದ ಸೋತು 3ನೇ ತಂಡವಾಗಿ ಸೆಮಿಫೈನಲ್ ಪ್ರವೇಶಿಸಲಿದೆ. ಆದರೆ 4ನೇ ಸೆಮಿಫೈನಲ್ ಸ್ಥಾನಕ್ಕೆ ಪೈಪೋಟಿ ಇದೆ ಎಂದಿದ್ದಾರೆ.

ಇದನ್ನೂ ಓದಿ: ವಿಶ್ವಕಪ್ 2019: ಟೀಂ ಇಂಡಿಯಾ ವಿರುದ್ದ ಫ್ಯಾನ್ಸ್ ಗರಂ!

ನ್ಯೂಜಿಲೆಂಡ್, ವೆಸ್ಟ್ ಇಂಡೀಸ್, ಪಾಕಿಸ್ತಾನ ಹಾಗೂ ಸೌತ್ಆಫ್ರಿಕಾ ತಂಡಗಳು ಒಂದು ಸ್ಥಾನಕ್ಕಾಗಿ ಹೋರಾಟ ನಡೆಸಿದೆ. ಇದರಲ್ಲಿ ನ್ಯೂಜಿಲೆಂಡ್‌ 4ನೇ ತಂಡವಾಗಿ ಸೆಮಿಫೈನಲ್ ಪ್ರವೇಶಿಸುವ ಸಾಧ್ಯತೆ ಇದೆ ಎಂದು ಮೆಕ್ಕಲಂ ಹೇಳಿದ್ದಾರೆ. ವಿಶ್ವಕಪ್ ಸೆಮಿಫೈನಲ್ ಭವಿಷ್ಯದೊಂದಿದೆ ಕುತೂಹಲ ಇಮ್ಮಡಿಯಾಗಿದೆ.