ಬಾಲ್ ಟ್ಯಾಂಪರಿಂಗ್ ಬಳಿಕ ಸ್ಟೀವ್ ಸ್ಮಿತ್ ಸಾಕಷ್ಟು ಅವಮಾನ ಅನುಭವಿಸಿದ್ದಾರೆ. ಇದೀಗ ವಿಶ್ವಕಪ್ ಟೂರ್ನಿಯಲ್ಲಿ ಪ್ರೇಕ್ಷಕರು ಸ್ಮಿತ್ ಟೀಕಿಸುತ್ತಿದ್ದಾರೆ. ಭಾರತ ವಿರುದ್ಧದ ಪಂದ್ಯದಲ್ಲಿ ಸ್ಮಿತ್ ಅಣಕಿಸಲು ಬಂದ ಪ್ರೇಕ್ಷಕರಿಗೆ ಕೊಹ್ಲಿ ಕ್ಲಾಸ್ ತೆಗೆದುಕೊಂಡಿದ್ದಾರೆ. 

ಓವಲ್(ಜೂ.09): ಬಾಲ್ ಟ್ಯಾಂಪರಿಂಗ್ ಪ್ರಕರಣದ ನಿಷೇದದ ಬಳಿಕ ವಿಶ್ವಕಪ್ ಟೂರ್ನಿ ಆಡುತ್ತಿರುವ ಸ್ಟೀವ್ ಸ್ಮಿತ್‌ ಅವಮಾನಕ್ಕೆ ಒಳಗಾಗುತ್ತಿದ್ದಾರೆ. ಪ್ರತಿ ಬಾರಿ ಸ್ಮಿತ್ ಮೈದಾನಕ್ಕಿಳಿದಾಗ ಪ್ರೇಕ್ಷಕರು ಚೀಟರ್ ಚೀಟರ್ ಎಂದು ಕರೆಯುತ್ತಿದ್ದಾರೆ. ಭಾರತ ವಿರುದ್ಧದ ಪಂದ್ಯದಲ್ಲಿ ಸ್ಮಿತ್ ಅಣಕಿಸಿದ ಪ್ರೇಕ್ಷಕರ ವಿರುದ್ಧ ಕೊಹ್ಲಿ ಗರಂ ಆಗಿದ್ದಾರೆ.

ಇದನ್ನೂ ಓದಿ: ಇಂಡೋ-ಆಸೀಸ್ ವಿಶ್ವಕಪ್ ಪಂದ್ಯ- ಬಾಲ್ ಟ್ಯಾಂಪರ್ ಮಾಡಿದ್ರಾ ಝಂಪಾ?

ಸ್ಟೀವ್ ಸ್ಮಿತ್ ಫೀಲ್ಡಿಂಗ್ ಮಾಡುತ್ತಿದ್ದ ವೇಳೆ ಪ್ರೇಕ್ಷಕರು ಸ್ಮಿತ್ ಅಣಕಿಸೋ ರೀತಿಯಲ್ಲಿ ಕೂಗಿದ್ದಾರೆ. ಈ ವೇಳೆ ಕ್ರಿಸ್‌ನಲ್ಲಿದ್ದ ವಿರಾಟ್ ಕೊಹ್ಲಿ ಪ್ರೇಕ್ಷಕರತ್ತ ಕೈಬೀಸಿ, ಸ್ಮಿತ್‌ಗೆ ಚಪ್ಪಾಳೆ ಮೂಲಕ ಪ್ರೋತ್ಸಾಹಿಸಿ. ಆದರೆ ಅಣಕಿಸಬೇಡಿ ಎಂದು ಕೈ ಸನ್ನೆ ಮಾಡಿದ್ದಾರೆ. ಇಷ್ಟೇ ಅಲ್ಲ ಪ್ರೇಕ್ಷಕರ ವರ್ತನೆಗೆ ಕೊಹ್ಲಿ ಗರಂ ಆಗಿದ್ದಾರೆ.

Scroll to load tweet…

ಇದನ್ನೂ ಓದಿ: ಸಖತ್ ಸ್ಟೆಪ್ಸ್ ಹಾಕುತ್ತ ಮತ್ತೆ ಬಂದ RCB ಹುಡುಗಿ

ಕೊಹ್ಲಿ ಬೆಂಬಲಕ್ಕೆ ಸ್ಮಿತ್ ಮೈದಾನದಲ್ಲಿ ಧನ್ಯವಾದ ಹೇಳಿದರು. ವಿರಾಟ್ ಕೊಹ್ಲಿ ಈ ನಡತೆ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಅದೆಷ್ಟೇ ಅಗ್ರಸ್ಸೀವ್ ಕ್ರಿಕೆಟರ್ ಆಗಿದ್ದರೂ ಕೊಹ್ಲಿ ಮೈದಾನದಲ್ಲಿ ತೋರಿದ ನಡವಳಿಕೆಗೆ ಸಾಮಾಜಿಕ ಜಾಲತಾಣಧಲ್ಲಿ ಹ್ಯಾಟ್ ಆಫ್ ಹೇಳಿದ್ದಾರೆ. 

Scroll to load tweet…